ಕನಮಡಿ, ಬಾಬಾನಗರ, ತಿಕೋಟಾಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ- ಲಿಂ. ಸಿದ್ದೇಶ್ವರ ಸ್ವಾಮೀಜಿ ಜಿ ಸ್ಮರಿಸಿದ ಸುನೀಲಗೌಡ ಪಾಟೀಲ

ವಿಜಯಪುರ: ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಅವರ ಆಶಯದಂತೆ ನೀರಾವರಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ, ಬಾಬಾನಗರ ಮತ್ತು ತಿಕೋಟಾ ಪಟ್ಟಣದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಾಬಾನಗರದಲ್ಲಿ ಪಿ ಆರ್ ಇ ಡಿ ಇಲಾಖೆ ವತಿಯಿಂದ ರೂ. 2 ಕೋ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಾಬಾನಗರ- ಹೊನವಾಡ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಎಂ. ಬಿ. ಪಾಟೀಲರು ನೀರಾವರಿ ಸಚಿವರಾಗಿ ಈ ಭಾಗದಲ್ಲಿ ಜಲಕ್ರಾಂತಿ ಮಾಡಿದ್ದಾರೆ.  ಈ ಭಾಗದಲ್ಲಿ ನೀರಾವರಿ ಜಾರಿ ಮಾಡುವುದು ಮೂರ್ಖರ ಕನಸು ಎಂದು ಹೇಳಿದವರಿಗೆ ನಮ್ಮ ಸಹೋದರ ನೀರು ಒದಗಿಸುವ ಮೂಲಕ ಉತ್ತರ ನೀಡಿದ್ದಾರೆ.  ತಿಕೋಟಾ ಒಂದೇ ಹೋಬಳಿಗೆ ರೂ. 4000 ಕೋ. ಅನುದಾನ ನೀಡಿ ಕೇವಲ ಮೂರ್ನಾಲ್ಕು ವರ್ಷಗಳಲ್ಲಿ ನೀರೊದಗಿಸಿರುವುದು ದಾಖಲೆಯಾಗಿದೆ.  ಜನಪರ ಕಾರ್ಯಗಳಿಂದಾಗಿ ರೈತರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ನೀರು ಸಿಗುತ್ತಿದೆ.  ಈ ಮುಂಚೆ ತೋಟಗಾರಿಕೆ ಬೆಳೆಗಳ ರಕ್ಷಣೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಟ್ಯಾಂಕರ್ ಮೂಲಕ ನೀರು ಖರೀದಿಸುತ್ತಿದ್ದ ರೈತರಿಗೆ ಈಗ ಆ ಬವಣೆ ತಪ್ಪಿದ್ದು, ಅನ್ನದಾತರು ಸಾಲದಿಂದ ಮುಕ್ತರಾಗಿದ್ದಾರೆ.  ಬತ್ತಿರುವ ಕೊಳವೆ ಭಾವಿಗಳು ಪುನಶ್ಚೇತನಗೊಂಡಿವೆ.  ಈ ಭಾಗದಲ್ಲಿ ನೀರಿನ ಸಮಸ್ಯೆಯಿಂದಾಗಿ ಪೋಷಕರು ಹೆಣ್ಣು ಕೊಡಲು ಕೂಡ ಯೋಚಿಸುತ್ತಿದ್ದರು. ಈಗ ಇಲ್ಲಿ ಜಲಸಮೃದ್ಧಿಯಿದೆ.  ರೈತರೆಲ್ಲರೂ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಅವರು ಹೇಳಿದರು.

ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬದ್ಧನಾಗಿದ್ದು, ತಮ್ಮೆಲ್ಲರ ಪ್ರೀತಿ ಮತ್ತು ಸಹಕಾರ ಇದೇ ರೀತಿ ಮುಂದುವರೆಯಲಿ ಎಂದು ಸುನೀಲಗೌಡ ಪಾಟೀಲ ಹೇಳಿದರು.

ಬಾಬಾನಗರದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸುನೀಲಗೌಡ ಪಾಟೀಲ

ಗ್ರಾ. ಪಂ. ಸದಸ್ಯ ಸಿದಗೊಂಡ ಬಿರಾದಾರ ಮಾತನಾಡಿ, ತಿಕೋಟಾ ಹೋಬಳಿ ವ್ಯಾಪ್ತಿಯಲ್ಲಿ ಕೇವಲ ನಾಲ್ಕೈದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ.  ನೀರಾವರಿಯಿಂದಾಗಿ ಈ ಭಾಗದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಈರಗೊಂಡ ಬಿರಾದಾರ, ರಾಮಗೊಂಡ ಬಿರಾದಾರ, ರಾಮು ಆಯತವಾಡ, ರಾಚಯ್ಯ ಹಿರೇಮಠ, ಯಲ್ಲಾಲಿಂಗ ಹೊನವಾಡ, ಶಂಕರಗೌಡ ಬಿರಾದಾರ, ಸುಭಾಸ ಅಕ್ಕಿ, ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಕನಮಡಿಯಲ್ಲಿ ಕೆ ಎನ್ ಎನ್ ಎಲ್ ವತಿಯಿಂದ ರೂ. 2 ಕೋ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕನಮಡಿ-ಉಮರಾಣಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸುನೀಲಗೌಡ ಪಾಟೀಲ ಮಾತನಾಡಿದರು.  ಈ‌ ಸಂದರ್ಭದಲ್ಲಿ ಮುಖಂಡರಾದ ಶಿವಪುತ್ರ ಅವಟಿ, ಬಾಬುಗೌಡ ಬಿರಾದಾರ, ಶಂಕರಗೌಡ ಬಿರಾದಾರ,‌ ಬಾಸ್ಕರ ಹೊಸಮನಿ, ಸಿದ್ದು ಗೌಡನವರ, ರಾಮನಗೌಡ ಬಿರಾದಾರ, ಶ್ರೀಶೈಲಗೌಡ ಪಾಟೀಲ, ವಿಜಯಕುಮಾರ ಚಡಚಣ, ಚನ್ನಯ್ಯ ಮಠಪತಿ, ಗೈಬುಲಾಲ ಮುಜಾವರ, ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.

ತಿಕೋಟಾ ಪಟ್ಟಣದಲ್ಲಿ ಕೆ ಎನ್ ಎನ್ ಎಲ್ ವತಿಯಿಂದ ತಿಕೋಟಾ- ದಾಶ್ಯಾಳ  ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರೂ. 2 ಕೋ. ವೆಚ್ಚದ ರಸ್ತೆ ಕಾಮಗಾರಿಗೆ ಸುನೀಲಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದೆ.  ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದು ಗೌಡನವರ, ಭೀಮು ನಾಟೀಕಾರ, ಹಂಜಗಿ, ಮಾಳು ಗುಗದಡ್ಡಿ, ಜಗದೀಶ ಗೆಜ್ಜಿ, ಬಸಣ್ಣ ಕುಂಬಾರ, ಸದಾಶಿವ ಹಂಜಗಿ, ಸಂತೋಷ ಕುಂಬಾರ, ಜಗದೀಶ ಲಂಗೋಟಿ, ಮದರಬಾಷಾ ಹೊನವಾಡ, ಶಿವಾಜಿ ಜಾಧವ, ಚಂದು ಕರಜಗಿ, ಉಮೇಶ ಪಡಸಲಗಿ, ರುದ್ರಗೊಂಡ ಸಂಗಾಪೂರ, ಸಿದ್ದಪ್ಪ ಹೊಸಮನಿ, ಮಲ್ಲಯ್ಯ ಮಠಪತಿ, ಭೀಮಗೊಂಡ ಬಿರಾದಾರ, ರಮೇಶ ಬಿಳೂರ, ಮಹಾದೇವ ಕನ್ನಾಳ, ಚನಗೊಂಡ ಸಂಗಾಪೂರ, ರಾಮಗೊಂಡ ಸೋಲಾಪುರ, ಶಿವು ಸಂಖ, ಮಹಿಬೂಬ ಟಕ್ಕೊಡ, ಸತ್ಯಪ್ಪ ಬಿರಾದಾರ, ಪಟ್ಟಣದ ಹಿರಿಯರು, ಯುವಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌