ಹಿರಿಯ ವಯಸ್ಸಿನಲ್ಲಿಯೂ ಕಬ್ಬಿಣದ ಗುಂಡೆಸೆತ- ನಾನು ವೇಟ್ ಲಿಫ್ಟರ್ ಆಗಿದ್ದೆ- ಕ್ವಿಂಟಲ್ ಜೋಳ ಎತ್ತುತ್ತಿದ್ದೆ ಎಂದ ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ಕ್ರೀಡಾಸ್ಪೂರ್ತಿಯೊಂದಿದ್ದರೆ ಸಾಕು. ಅದರಲ್ಲಿ ಪಾಲ್ಗೋಳ್ಳಲು ಮನಸ್ಸು ಹಾತೊರೆಯುತ್ತಿರುತ್ತದೆ. ಇದಕ್ಕೆ ಸಾಕ್ಷಿ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ. ವಿಜಯಪುರ ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆರಂಭವಾದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಮೂರು ದಿನಗಳ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. […]
ವಿಜಯಪುರದಲ್ಲಿ ಶ್ರೀರಾಮ ಫೈನಾನ್ಸ್ ಲಿ. ನೂತನ ವಲಯ ಕಚೇರಿ, ಶಾಖಾ ಕಚೇರಿಗಳ ಉದ್ಘಾಟನೆ
ವಿಜಯಪುರ: ಶ್ರೀರಾಮ ಫೈನಾನ್ಸ್ ಲಿಮಿಟೆಡ್ ನ ನೂತನ ವಲಯ ಕಚೇರಿ ಹಾಗೂ ಶಾಖಾ ಕಚೇರಿಗಳ ಉದ್ಘಾಟನೆ ಸಮಾರಂಭ ನಗರದಲ್ಲಿ ನಡೆಯಿತು. ಸಾಯಿ ಪಾರ್ಕ್ ನ ಸಮರ್ಥ ನಗರದ ತೋಳಮಟ್ಟಿ ಕಾಂಪ್ಸೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ ಸಂಸ್ಥೆಯ ಝೋನಲ್ ಬ್ಯೂಸಿನೆಸ್ ಹೆಡ್ ಶ್ರೀಧರ ಮಾಟಂ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಸ್ಥೆ ಗ್ರಾಹಕಸ್ನೇಹಿಯಾಗಿದ್ದು, ಸಮಾಜಮುಖಿ ಕೆಲಸಗಳಿಗೆ ಆದ್ಯತೆ ನೀಡುತ್ತಿದೆ. ಸಂಸ್ಥೆಯ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ನಗರದಲ್ಲಿ ಹಲವಾರು […]
ಸಿಂದಗಿ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನ್ ಜಯಂತಿ ಆಚರಣೆ
ವಿಜಯಪುರ: ಶ್ರೀ ಮಹಾಯೋಗಿ ವೇಮನ್ ಜಯಂತಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಹಸೀಲ್ದಾರಕಚೇರಿಯಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ ಪ್ರಕಾಶ ಸಿಂದಗಿ ಶ್ರೀ ಮಹಾಯೋಗಿ ವೇಮನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಬಸವರಾಜ ಸೋಂಪುರ ಉಪನ್ಯಾಸ ನೀಡಿದರು. ಸಿರಸ್ತೆದಾರ ಸುರೇಶ ಮ್ಯಾಗೇರಿ, ರೆಡ್ಡಿ ಸಮಾಜದ ತಾಲೂಕಾಧ್ಯಕ್ಷ ಮುಖಂಡರಾದ ಚಂದ್ರಶೇಖರ ದೇವರಡ್ಡಿ, ಸಮಾಜ ಮುಖಂಡರಾದ ರವಿ ಮಂಗಳೂರ, ಬಸವರಾಜ ಕೋಳೂರ, ಮಲಕನಗೌಡ ಪಾಟೀಲ, ಅನಂತರಡ್ಡಿ ದೇವರೆಡ್ಡಿ, ರಾಜೇಂದ್ರರೆಡ್ಡಿ ದೇಸಾಯಿ ಮತ್ತು ತಾಲೂಕು ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.
ಡಾ. ಚನ್ನಪ್ಪ ಕಟ್ಟಿ ಅವರ ಕಿನ್ನೂರಿ ಕಥೆ ಓದುಗರ ಮನಮುಟ್ಟುವಂತಿದೆ- ವಿಮರ್ಶಕ ಡಾ. ರಂಗನಾಥ ಕಂಚನಕುಂಟೆ
ವಿಜಯಪುರ: ಗ್ರಾಮೀಣ ಬದುಕಿನ ವಾಸ್ತವ ಕಲೆಯನ್ನು ಡಾ. ಚನ್ನಪ್ಪ ಕಟ್ಟಿ ತಮ್ಮ ಕಿನ್ನೂರಿ ಕಥೆಗಳಲ್ಲಿ ಓದುಗರ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದು ವಿಮರ್ಶಕ ಡಾ. ರಂಗನಾಥ ಕಂಟನಕುಂಟೆ ಹೇಳಿದರು. ನಗರದಲ್ಲಿ ವಚನಪಿತಾಮಹ ಡಾ. ಫ.ಗು.ಹಳಟ್ಟಿ ಸಂಶೋಧನ ಕೇಂದ್ರ ಮತ್ತು ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ನಡೆದ ಡಾ. ಚನ್ನಪ್ಪ ಕಟ್ಟಿ ರಚಿಸಿರುವ ಕಥಾಕಿನ್ನುರಿ ಹಾಗೂ ಯುದ್ಧಕಾಲದ ಹುಡುಗಿಯರು ಗ್ರಂಥ ಲೋಕಾರ್ಪಣೆ ಮತ್ತು ನೆಲೆ ಸಿನಿ ಕ್ರಿಯೆಶನ್ಸ್ ತಯಾರಿಸಿದ ಊಧ್ರ್ವರೇತ ಟೆಲಿ ಫಿಲ್ಮ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ. […]
ಯತ್ನಾಳದಲ್ಲಿ ಬಿ ಎಲ್ ಡಿ ಇ ಆಸ್ಪತ್ರೆ ವತಿಯಿಂದ ಮಹಿಳೆಯರ, ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ
ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ತಿಕೋಟಾ ತಾಲೂಕಿನ ಗಡಿಗ್ರಾಮ ಯತ್ನಾಳದಲ್ಲಿ ಮಹಿಳೆಯರು ಮತ್ತು ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಬೃಹತ್ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯರು ಮತ್ತು ಮಕ್ಕಳ ಚಿಕಿತ್ಸಾ ವಿಭಾಗದ ಡಾಕ್ಟರುಗಳು ರೋಗಿಗಳ ತಪಾಸಣೆ ನಡೆಸಿದರು. ಅಲ್ಲದೇ, ಉಚಿತವಾಗಿ ಔಷಧಿ ವಿತರಣೆ ಮಾಡಿದರು. ಅಷ್ಟೇ ಅಲ್ಲ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ವಿಜಯಪುರ ಬಿ. […]
ಪಕ್ಷಗಳು ಜಾತಿ ಧರ್ಮದ ವಿಚಾರಗಳಿಗೆ ಪ್ರಚೋದನೆ ಕೊಡಬಾರದು- ಮೋದಿ ಕಾರ್ಯ ಶ್ಲಾಘನೀಯ- ರಂಭಾಪುರಿ ಜಗದ್ಗುರು
ವಿಜಯಪುರ: ಚುನಾವಣೆ ವರ್ಷದಲ್ಲಿ ಜಾತಿ, ಧರ್ಮದ ವಿಚಾರಗಳು ಅತಿರೇಕಕ್ಕೆ ಹೋಗುತ್ತಿರುವುದು ಸರಿಯಲ್ಲ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ. ವಿಜಯ.ಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಈಗ ಎಲೆಕ್ಷನ್ ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಪಕ್ಷಗಳು ಜಾತಿ, ಮತ್ತು ಧರ್ಮದ ವಿಚಾರವನ್ನು ಅತಿರೇಕವಾಗಿ ಸಂಘರ್ಷ ಮಾಡುತ್ತಿರುವುದನ್ನು ಜನ ನೋಡಿ ಬೇಸತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲೇ ಇದನ್ನು ಮಾಡಬಾರದು ಎಂದು ಹೇಳಿದರು. ಒಂದು ಸಮಾಜ […]