ಡಾ. ಚನ್ನಪ್ಪ ಕಟ್ಟಿ ಅವರ ಕಿನ್ನೂರಿ ಕಥೆ ಓದುಗರ ಮನಮುಟ್ಟುವಂತಿದೆ- ವಿಮರ್ಶಕ ಡಾ. ರಂಗನಾಥ ಕಂಚನಕುಂಟೆ

ವಿಜಯಪುರ: ಗ್ರಾಮೀಣ ಬದುಕಿನ ವಾಸ್ತವ ಕಲೆಯನ್ನು ಡಾ. ಚನ್ನಪ್ಪ ಕಟ್ಟಿ ತಮ್ಮ ಕಿನ್ನೂರಿ ಕಥೆಗಳಲ್ಲಿ ಓದುಗರ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದು ವಿಮರ್ಶಕ ಡಾ. ರಂಗನಾಥ ಕಂಟನಕುಂಟೆ ಹೇಳಿದರು.

ನಗರದಲ್ಲಿ ವಚನಪಿತಾಮಹ ಡಾ. ಫ.ಗು.ಹಳಟ್ಟಿ ಸಂಶೋಧನ ಕೇಂದ್ರ ಮತ್ತು ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ನಡೆದ ಡಾ. ಚನ್ನಪ್ಪ ಕಟ್ಟಿ ರಚಿಸಿರುವ ಕಥಾಕಿನ್ನುರಿ ಹಾಗೂ ಯುದ್ಧಕಾಲದ ಹುಡುಗಿಯರು ಗ್ರಂಥ ಲೋಕಾರ್ಪಣೆ ಮತ್ತು ನೆಲೆ ಸಿನಿ ಕ್ರಿಯೆಶನ್ಸ್ ತಯಾರಿಸಿದ ಊಧ್ರ್ವರೇತ ಟೆಲಿ ಫಿಲ್ಮ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ಚನ್ನಪ್ಪ ಕಟ್ಟಿ ಅವರು, ವಾಸ್ತವದ ನೆಲೆಗಳನ್ನು ಕಥೆಗಳಲ್ಲಿ ಬಿಚ್ಚಿಟ್ಟಿದ್ದು, ಅವುಗಳನ್ನು ಓದುಗರಿಗೆ ಮನದಟ್ಟಾಗುವಂತೆ ಬರೆದಿದ್ದಾರೆ ಎಂದು ಅವರು ಹೇಳಿದರು.

ವಿಮರ್ಶಕ ದೇವು ಪತ್ತಾರ ಮಾತನಾಡಿ, ನೈಜಿರಿಯಾ ಜನರ ಅನುಭವಗಳ ಆಧಾರಿತ, ಯುದ್ಧಕಾಲದ ಹುಡುಗಿಯರು ಕಥಾ ಸಂಕಲನ ಸೊಗಸಾಗಿ ಮತ್ತು ವಿಸ್ತøತವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಖ್ಯಾತ ಕಾದಂಬರಿಕಾರ ಡಾ. ಬಾಳಾಸಾಹೇಬ ಲೋಕಾಪುರ ಮಾತನಾಡಿ, ಈ ಗ್ರಂಥದಲ್ಲಿನ ಕಥೆಗಳು ನೈಜ ಅನುಭವ ನೀಡುತ್ತಿವೆ ಎಂದು ಶ್ಲಾಘಿಸಿದರು.

‘ಉದ್ರ್ವರೇತ’ ಟೆಲಿಫಿಲ್ಮ್ ಪ್ರದರ್ಶನಕ್ಕೆ ಚಾಲನೆ ನೀಡಿದ ವಿಶ್ರಾಂತ ಕುಲಪತಿ ಡಾ. ಸತೀಶ ಜಿಗಜಿನ್ನಿ, ಕಲಾಭಿಮಾನಿಗಳಿಗೆ ಕಾಣಿಕೆ ವಿತರಿಸಿದರು. ಡಾ. ಕೃಷ್ಣ ಕೊಲ್ಹಾರಕುಲಕರ್ಣಿ “ಕಥಾಕಿನ್ನರಿ ಹಾಗೂ ಯುದ್ಧಕಾಲದ ಹುಡುಗಿಯರು” ಗ್ರಂಥಗಳನ್ನು ಲೋಕಾರ್ಪಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ಆರ್.ಕೆ.ಕುಲಕರ್ಣೀ, ಜಿ.ಆರ್.ಕುಲಕರ್ಣಿ, ಪ್ರೊ. ಎನ್, ಜಿ. ಕರೂರ, ವಿ. ಸಿ. ನಾಗಠಾಣ, ಡಾ. ಸಂಗಮೇಶ ಮೇತ್ರಿ, ಪ್ರೊ. ಕೆ. ಎಸ್. ಬಿರಾದಾರ, ಜಂಬುನಾಥ ಕಂಚ್ಯಾಣಿ, ಮ. ಗು. ಯಾದವಾಡ, ಬಿ. ಆರ್. ಬನಸೋಡೆ, ಜಗದೀಶ ಗಲಗಲಿ, ಚಿದಂಬರ ಬಂಡಗರ, ಶಿವಪ್ಪಣ್ಣ ಗವಸಾನೆ, ಸಿದ್ಧಣ್ಣ ಉತ್ನಾಳ, ಪರಶುರಾಮ ಪೋಳ, ಡಾ. ಎಂ.ಎಸ್.ಚಾಂದಕವಟೆ, ಪ್ರಭಾವತಿ ದೇಸಾಯಿ, ದಾಕ್ಷಾಯಣಿ ಬಿರಾದಾರ, ಟೆಲಿಪಿಲ್ಮದ ನಿರ್ದೇಶಕ ಸುನೀಲಕುಮಾರ ಸುಧಾಕರ ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಡಾ. ಎಂ.ಎಸ್.ಮದಭಾವಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಬಿ. ಎಂ. ಪಾಟೀಲ ಪ್ರಾರ್ಥಿಸಿದರು. ಡಾ. ಎಂ. ಎಂ. ಪಡಶೆಟ್ಟಿ ಸ್ವಾಗತಿಸಿ, ಪರಿಚಯಿಸಿದರು. ಡಾ. ವಿ. ಡಿ. ಐಹೊಳ್ಳಿ ನಿರೂಪಿಸಿದರು. ಮನು ಪತ್ತಾರ ವಂದಿಸಿದರು.

 

Leave a Reply

ಹೊಸ ಪೋಸ್ಟ್‌