ಬಿಜೆಪಿ ಕರ್ನಾಟದಿಂದ ಟೆಂಟ್ ಖಾಲಿ ಮಾಡುವ ದಿನ ಆರಂಭವಾಗಿವೆ- ಕಟೀಲ ದೇವೇಗೌಡರ ಕಾಲಿನ ಧೂಳಿಗೂ ಸಮನಲ್ಲ- ಎಚ್ ಡಿ ಕೆ

ವಿಜಯಪುರ: ಬಿಜೆಪಿ ಕರ್ನಾಟಕದಿಂದ ಟೆಂಟ್ ಖಾಲಿ ಮಾಡುವ ದಿನಗಳು ಆರಂಭವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಪಂಚರತ್ನ‌ ಯಾತ್ರೆಯ‌ ಅಂಗವಾಗಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ನೀವು ದೇವೇಗೌಡರ ಉಗುರು ಮತ್ತು ಧೂಳಿಗೂ ಸಮರಲ್ಲ ಎಂದು ಮಾಜಿ ಸಿಎಂ ಎಚ್‍. ಡಿ. ಕುಮಾರಸ್ವಾಮಿ ಕಿಡಿ‌ ಕಾರಿದ್ದಾರೆ.

ಕಾಂಗ್ರೆಸ್ಸಿನ ನಾಯಕರು ವೇದಿಕೆಯಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಳ್ಳುತ್ತಾರೆ. ಜೆಡಿಎಸ್ ನಲ್ಲಿ ಅಪ್ಪ ಮತ್ತು ಮಕ್ಕಳು ಮನೆಯಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಳ್ಳುತ್ತಾರೆ ಎಂದು ಎಂದು ನಳೀನ್ ಕುಮಾರ್ ಕಟಿಲ್ ಆರೋಪಿಸಿದ್ದಾರೆ. ‌ಕಟೀಲ‌ ಅವರಿಗೆ ನಾಲಿಗೆಗೆ ಹಿಡಿತ ಇಲ್ಲ. ಇದು ಬಿಜೆಪಿ ಸಂಸ್ಕೃತಿ. ಅವರಿಗೆ ದೇವೇಗೌಡರ ಬಗ್ಗೆ ವಿಷಯ ಗೊತ್ತಿರದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಗಿ ಕೇಳಲಿ. ನಮ್ಮ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದತು.

ರಾಜ್ಯಕ್ಕೆ ದೇವೇಗೌಡರು ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಆದರೆ ಬಿಜೆಪಿ ನಾಯಕರು ನೀವೇನು ಕೊಡುಗೆಯನ್ನು ಕೊಟ್ಟಿದ್ದೀರಿ? ವಿಜಯಪುರದ ಜಿಲ್ಲೆಯ ಜನ 1970ರಲ್ಲಿ ಇಂದಿರಾ ಗಾಂಧಿಯನ್ನು ವಿಜಯಪುರಕ್ಕೆ ಕರೆದು ಚಿನ್ನದಲ್ಲಿ ತುಲಾಭಾರ ಮಾಡಿದ್ದಾರೆಲೆ. ಆದರೆ ಈ ಭಾಗದಲ್ಲಿ ಒಂದು ಹನಿ ನೀರು ಒದಗಿಸಲು ಕೇಂದ್ರ ಸರಕಾರ ಹಣ ನೀಡಲಿಲ್ಲ. ಈ ಭಾಗದ ಜನರಿಗೆ ನೀರಾವರಿ ಸಭಲಭ್ಯ ಒದಗಿಸಲು ದೇವೇಗೌಡರು ರೂ. 18 ಸಾವಿರ ಕೋ. ಅನುದಾನ ನೀಡಿದ್ದರು.‌ ಕರ್ನಾಟಕದಿಂದ ನೀವು ನಿಮ್ಮ ಟೆಂಟ್ ಖಾಲಿ ಮಾಡಿಕೊಂಡು ಹೋಗುವ ದಿನ ಆರಂಭವಾಗಿದೆ ಎಂದು ಎಚ್ ಡಿ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

ಧರ್ಮ ಧರ್ಮಗಳ ನಡುವೆ ನೀವು ಬೆಂಕಿಯನ್ನು ಹಚ್ಚಿದ್ದೀರಿ. ಈ‌ ನಾಡಿನ ಜನತೆ ಮತ್ತು ರೈತ ಬಾಂಧವರು ತೀರ್ಮಾನ ಮಾಡಿದ್ದಾರೆ. ಇಂಡಿ ಮತ್ತು ಸಿಂದಗಿ ಭಾಗದಲ್ಲಿ ದೇವೇಗೌಡರ ಕೃಪೆಯಿಂದಾಗಿ ನಾವು ಈ ಭಾಗದಲ್ಲಿ ನೀರು ಪಡೆದಿದ್ದೇವೆ ಬಿಟ್ಟಿದ್ದೇವೆ ಎಂದು ರೈತರು ಯಾತ್ರೆಯ ಸಂದರ್ಭದಲ್ಲಿ ಹೇಳುತ್ತಿದ್ದಾರೆ. ಎಂಟು ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ್ದರು ನೀವು ಆಲಮಟ್ಟಿ ಜಲಾಶಯ ಎತ್ತರವನ್ನು 524.256 ಮೀಟರ್ ಗೆ ಹೆಚ್ಚಿಸಲು 2012ರಲ್ಲಿ ನ್ಯಾಯಾಧೀಕರಣ ಆದೇಶ ನೀಡಿದೆ. ಆದರೂ ಬಿಜೆಪಿ ಏನೂ ಮಾಡಿಲ್ಲ. ಬಿಜೆಪಿ ಹಣ ಲೂಟಿ ಹೊಡೆಯುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ಈ ಭಾಗದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಪಕ್ಕದ ಬಾಗಲಕೋಟೆ ಸಚಿವ ನಿರಾಣಿ ಚಪ್ಪಲಿ ಎಂದು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್ಸಿನ ಬಗ್ಗೆ ನೀವು ಏನಾದರೂ ಮಾತನಾಡಿಕೊಳ್ಳಿ. ನಮ್ಮ ಕುಟುಂಬ ಬಗ್ಗೆ ಮಾತನಾಡಿದರೆ ಹುಷಾರ್. ನಮ್ಮ ಕುಟುಂಬ ಗೌರವಾಯುತ ಕುಟುಂಬ. ಗೌರವಹಿತವಾಗಿ ಬದುಕುತ್ತಿದ್ದೇವೆ ಎಂದು ಮಾಜಿ ಸಿಎಂ ಹೇಳಿದರು.

ನಾವು ರೈತರ ಪರವಾಗಿ ಧ್ವನಿ ಎತ್ತುತ್ತಿದ್ದೇವೆ. ರೈತರಿಗಾಗಿ ಜೀವನ ಮುಡುಪಾಗಿಟ್ಟಿದ್ದೇವೆ. ಮುಡುಪಾಗಿಟ್ಟಿದ್ದೇವೆ. ನಮಗೆ ಅಧಿಕಾರ ಮುಖ್ಯವಲ್ಲ. ರೈತನ ಬದುಕು, ಹಳ್ಳಿ ಜನರ ನೋವು ನಿವಾರಿಸಲು ನಾವು ರಾಜಕೀಯಕ್ಕೆ ಬಂದಿದ್ದೇವೆ. ನೀವು ಅಧಿಕಾರಕ್ಕಾಗಿ ಯಾರ ಮನೆಗೆ ಬೇಕಾದರೂ ಹೋಗಿ ಕಾಲು ಹಿಡಿಯುತ್ತೀರಿ. ‌ಅಕ್ರಮ ಹಣದಿಂದ ಯಾರನ್ನು ಬೇಕಾದರೂ ಖರೀದಿ ಮಾಡುತ್ತೀರಿ. ನಳಿನ್ ಕುಮಾರ್ ಕಟೀಲ್ ಅವರೇ ನಿಮ್ಮ ನಾಲಿಗೆ ಮೇಲೆ ಹಿಡಿತ ಇರಲಿ. ಯತ್ನಾಳ ಮತ್ತು ನಿರಾಣಿ ಮಾತನಾಡುವ ಭಾಷೆಯನ್ನು ನಾವು ಮಾತನಾಡಲು ಆಗಲ್ಲ. ನಿಮ್ಮ ಮನೆಯಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಯಾವ ರೀತಿ ಇದ್ದೀರಿ?ಮಾತನಾಡುವಾಗ ಎಚ್ಚರಿಕೆ ಇರಲಿ. ರಾಜ್ಯಕ್ಕೆ ಏನು ಕೊಟ್ಟಿದ್ದೀರಿ ಎಂಬುದರ ಅರಿವಿರಲಿ ಎಂದು ಮಾಜಿ‌ ಮುಖ್ಯಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌