ಬಸವ ನಾಡಿನಲ್ಲಿ ಜೆ. ಪಿ. ನಡ್ಡಾ ಪ್ರವಾಸ- ಜ್ಞಾನಯೋಗಾಶ್ರಮಕ್ಕೆ ಭೇಟಿ- ಲಿಂ. ಸ್ವಾಮಿ ಸಿದ್ಧೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

ವಿಜಯಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಸವನಾಡು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಭರ್ಜರಿಯಾಗಿಯೇ ಕಮಲ ಪಾಳೆಯದಲ್ಲಿ ಹೊಸ ಹುಮ್ಮಸ್ಸು ತುಂಬಿದ್ದಾರೆ. 

ದೆಹಲಿಯಿಂದ ಕಲಬುರಗಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರು, ನಂತರ ಕಲಬುರಗಿಯಿಂದ ವಿಜಯಪುರಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು.  ಸೈನಿಕ ಶಾಲೆಯ ಅವರಣದಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರು ನಡ್ಡಾ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು.

ವಿಜಯಪುರ ಸೈನಿಕ ಶಾಲೆಯಿಂದ ನೇರವಾಗಿ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ಅವರು, ಪ್ರಣವ ಮಂಟಪಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಹಾಕಿದರು.  ಪ್ರಣವ ಮಂಟಪಕ್ಕೆ ತೆಳಿದ ಅವರು, ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಗೆ ತೆರಳಿ ಆರತಿ ಬೆಳಗಿ ಪ್ರಾರ್ಥಿಸಿ ನಮನ ಸಲ್ಲಿಸಿದರು.  ನಂತರ ಸಿದ್ದೇಶ್ವರ ಸ್ವಾಮೀಜಿ ಪಾರ್ಥಿವ ಶರೀರ ಇಟ್ಟು ಮೆರವಣಿಗೆ ನಡೆಸಿದ ಮಂಟಪ ವೀಕ್ಷಣೆ ಮಾಡಿದರು.  ಬಳಿಕ ಬಿಜೆಪಿ ನಾಯಕರೊಂದಿಗೆ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ ನಡೆಸಿದ ಸ್ಥಳದತ್ತ ತೆರಳಿದ ಅವರು, ಆಶ್ರಮದ ಆವರಣದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.  ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಲಿಂ. ಸಿದ್ದೇಶ್ವರ ಸ್ವಾಮೀಜಿ ರಚಿಸಿರುವ ಇಂಗ್ಲೀಷ ಭಾಷೆಯ ಪುಸ್ತಕ ನೀಡಿದರು.  ಉಳಿದ ಗಣ್ಯರಿಗೂ ಕೂಡ ನಾನಾ ಶ್ರೀಗಳು ಪುಸ್ತಕ ನೀಡಿದರು.

ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಪ್ರಣವ ಮಂಟಪಕ್ಕೆ ತೆರಳಿ ನಮನ ಸಲ್ಲಿಸಿದ ಜೆ. ಪಿ. ನಡ್ಡಾ, ಯಡಿಯೂರಪ್ಪ, ಅಪ್ಪು ಪಟ್ಟಣಶೆಟ್ಟಿ, ಡಾ. ಸಿ. ಎನ್. ಅಶ್ವತ್ಥನಾರಾಯಣ

 

ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ಆರ್. ಎಸ್. ಪಾಟೀಲ ಕೂಚಬಾಳ, ಗೋಪಾಲ ಗೋವಿಂದ ಕಾರಜೋಳ, ಉಮೇಶ ಕಾರಜೋಳ, ಪ್ರಕಾಶ ಅಕ್ಕಲಕೋಟ ಸೇರಿದಂತೆ ನಾನಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆ. ಪಿ. ನಡ್ಡಾ ಅವರು, ಲಿಂ. ಸಿದ್ದೇಶ್ವರ ಶ್ರೀಗಳು ಆಶ್ರಮಕ್ಕೆ ಬರುವ ಸೌಭಾಗ್ಯ ನನಗೆ ಸಿಕ್ಕಿದೆ.  ಸಿದ್ದೇಶ್ವರ ಸ್ವಾಮೀಜಿಗಳು ಮಹಾನ್ ಸಂತರು‌.  ಸಿದ್ದೇಶ್ವರ ಶ್ರೀಗಳ ಶಕ್ತಿ ನನ್ನನ್ನು ಇಲ್ಲಿಗೆ ಕರೆ ತಂದಿದೆ.  ನಮಗೆ ಸಿದ್ದೇಶ್ವರ ಶ್ರೀಗಳು ಪ್ರೇರಣೆಯಾಗಿದೆ ಎಂದು ಹೇಳಿದರು.

ಇಲ್ಲಿ ಆದ್ಮಾತ್ಮಕತೆ, ಮಾನವೀತೆಯ ಕೆಲಸ ಮಾಡುತ್ತಿದೆ.  ಶ್ರೀಗಳ ಆಶಯದಂತೆ ಜಾಗೃತ ಸಮಾಜ ನಿರ್ಮಾಣ ‌ಮಾಡಲು‌ ಕ್ರಮ ಕೈಗೊಳ್ಳುತ್ತೇವೆ.  ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬಂತೆ ‌ನಡೆಯುತ್ತೇವೆ ಎಂದು ಹೇಳಿದರು.

 

Leave a Reply

ಹೊಸ ಪೋಸ್ಟ್‌