ಗಡಿಗ್ರಾಮ ಸಿದ್ಧಾಪುರ(ಅ) ದಲ್ಲಿ ಮಹಿಳೆಯರು, ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯಪುರ: ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ ಗಡಿ ಭಾಗದ ತಿಕೋಟಾ ತಾಲೂಕಿನ ಸಿದ್ಧಾಪುರ(ಅ) ಗ್ರಾಮದಲ್ಲಿ ನಡೆಯಿತು. ವಿಜಯಪುರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ಹಾಗೂ ಮಕ್ಕಳ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ರೋಗಿಗಳಿಗೆ ಅಗತ್ಯವಾಗಿರುವ ಔಷಧಿಯನ್ನು ಉಚಿತವಾಗಿ ವಿತರಿಸಲಾಯಿತು. ಅಲ್ಲದೇ, ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿರುವವರಿಗೆ ವಿಜಯಪುರದ ಬಿ. ಎಲ್. […]

ಮಹಿಳೆಯರು ಮೌಢ್ಯಗಳ ಬಗ್ಗೆ ಜಾಗೃತರಾಗಿ ಆರೋಗ್ಯದ ಕಡೆಗೆ ಗಮನ ಹರಿಸಬೇಕು- ಡಾ. ಆರ್. ಬಿ. ಕೊಟ್ನಾಳ

ವಿಜಯಪುರ: ಮಹಿಳೆಯರು ಮೌಢ್ಯಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಬಿ. ಎಲ್. ಡಿ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಹೇಳಿದ್ದಾರೆ. ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಲೈಬ್ರರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತ ಒಂದು ದಿನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಆರೋಗ್ಯ ಕುಟುಂಬ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಆರೋಗ್ಯವಾಗಿದ್ದರೆ ಕುಟುಂಬವೂ ಆರೋಗ್ಯವಾಗಿರುತ್ತದೆ. […]

ಬಿಜೆಪಿ ಗೆಲುವಿಗೆ ಜನಪರ ಯೋಜನೆಗಳೇ ಶ್ರೀರಕ್ಷೆ- ಪ್ರಕಾಶ ಅಕ್ಕಲಕೋಟ

ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳೇ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ. ವಿಜಯಪುರ ನಗರದ ವಾ. ಸಂ. 33ರಲ್ಲಿ ಬರುವ ಬೂತ್ ಸಂಖ್ಯೆ 139 ಮತ್ತು 145ರ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಪರ, ರೈತಪರ, ಕಾರ್ಮಿಕರ ಪರವಾದ ನೈಜವಾದ ಕಾಳಜಿ ಹೊಂದಿರುವ ಏಕೈಕ ಪಕ್ಷ ಬಿಜೆಪಿ, ದೇಶಾಭಿಮಾನ ಹಾಗೂ ಜನಸೇವೆಯೇ ಬಿಜೆಪಿಯೇ ಧ್ಯೇಯವಾಗಿದೆ.  ಈ ಹಿನ್ನೆಲೆಯಲ್ಲಿ […]

ಘೋಣಸಗಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತಿರುವ ಕಾರ್ಯಕ್ರಮ

ವಿಜಯಪುರ: ಬಿ ಎಲ್ ಡಿ ಇ ಆಸ್ಪತ್ರೆಯ ವೈದ್ಯರು ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಮುಂದುವರೆಸಿದ್ದಾರೆ.  ತಿಕೋಟಾ ತಾಲೂಕಿನ ಘೊಣಸಗಿ ಗ್ರಾಮದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಬೃಹತ್ ಶಿಬಿರ ನಡೆಯಿತು. ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಜನ ಮಹಿಳೆಯರು ಮತ್ತು ಮಕ್ಕಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.  ಅಲ್ಲದೇ, ಅಗತ್ಯ ರೋಗಿಗಳಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಲಾಯಿತು. ಬಿ ಎಲ್ ಡಿ ಇ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯರಾದ ಡಾ. ಗಿರೀಶ ಬಿರಾದಾರ ಪಾಟೀಲ, […]

ಪ್ಲಾಸ್ಟಿಕ್ ಬಳಕೆ ಇಡೀ ಭೂಮಂಡಲಕ್ಕೆ ಅಪಾಯ ತಂದೊಡ್ಡುವ ಅಣ್ವಸ್ತ್ರವಾಗಿದೆ- ಬ್ರಿಜೇಶ ಶರ್ಮಾ

ವಿಜಯಪುರ: ಪ್ಲಾಸ್ಟಿಕ್ ಬಳಕೆ ಕೇವಲ ಮನುಕುಲಕ್ಕೆ ಮಾತ್ರವಲ್ಲ. ಇಡೀ ಭೂಮಂಡಲದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡುವ ಅಣ್ವಸ್ತ್ರವಾಗಿದೆ. ಇದನ್ನು ನಿಲ್ಲಿಸದಿದ್ದರೆ, ಎಲ್ಲವು ನಾಶವಾಗಲಿದೆ ಅದಕ್ಕೆ ಪ್ಲಾಸ್ಟಿಕ್ ಬಳಕೆ ಬೇಡ ಎಂದು ಕಳೆದ ಮೂರು ವರ್ಷಗಳಿಂದ ಸೈಕಲ್ ಜಾಗೃತಿ ಜಾಥಾ ನಡೆಸುತ್ತಿರುವ ಮಧ್ಯಪ್ರದೇಶದ ಬ್ರಿಜೇಶ ಶರ್ಮಾ ಹೇಳಿದರು. ಬಿ. ಎಲ್. ಡಿ. ಇ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದ ಅವರು, ಹಿಂದಿನಿಂದ ಹಿರಿಯರು ವಿವಿಧ ಮಣ್ಣಿನ ನಂತರದಲ್ಲಿ ಲೋಹದ ಪಾತ್ರೆ, ಸರಂಜಾಮುಗಳನ್ನು ಬಳಸುತ್ತಿದ್ದರು. […]

ಹೊನಗನಹಳ್ಳಿಯಲ್ಲಿ ಕಲಿಕಾ ಹಬ್ಬ- ಶಿಕ್ಷಣ ಸಂಯೋಜಕ ಸುಭಾಷ ರಾಠೋಡ ಉದ್ಘಾಟನೆ

ವಿಜಯಪುರ: ಮಕ್ಕಳಲ್ಲಿ ವಿಜ್ಞಾನ, ಗಣಿತ, ಇತಿಹಾಸ ಮತ್ತು ಸಾಂಸ್ಕøತಿಕ ಅಭಿರುಚಿಯನ್ನು ಬೆಳೆಸಲು ಕಲಿಕಾ ಚೇತರಿಕೆಯ ಒಂದು ಭಾಗವಾಗಿ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಸುಭಾಸ ರಾಠೊಡ ಹೇಳಿದರು. ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹೊನಗನಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶೀತಲ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಹೊನಗನಹಳ್ಳಿ ಕ್ಲಸ್ಟರಿನ 120 ಮಕ್ಕಳು ನಾನಾ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.  ಮೊದಲಿಗೆ ಅಲಂಕೃತ ಎತ್ತಿನ ಬಂಡಿ ಮತ್ತು […]

ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕು- ಕಾಂತಾ ನಾಯಕ

ವಿಜಯಪುರ: ಶಿಕ್ಷಣ ನಮ್ಮ ಜೀವನದ ಬಹು ಮುಖ್ಯ ಘಟ್ಟ. ಹೀಗಾಗಿ ನಿವೇಲ್ಲರೂ ಅತ್ಯುತ್ತಮವಾಗಿ ಕಲೆತು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ವಿಸ್ಮಯ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷೆ ಕಾಂತಾ ನಾಯಕ ಮಕ್ಕಳಿಗೆ ಕರೆ ನೀಡಿದರು.  ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಟಿ ಮಾತನಾಡಿದ ಅವರು, ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು.  ನೀವೆಲ್ಲರೂ ನಮ್ಮ ರಾಷ್ಟ್ರದ ಭವಿಷ್ಯ ಬರೆಯುವಂತಹ ಶಕ್ತಿ ಹೊಂದಿದವರು.  ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿ ಸಾಧನೆ ಮಾಡುವ […]

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ಸತ್ಯಾಗ್ರಹ

ವಿಜಯಪುರ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.  ಈ ಸಂರ್ಭದಲ್ಲಿ ಮಾತನಾಡಿದ ನಾನಾ ಮುಖಂಡರು, 36 ತಿಂಗಳಿಂದ ಸಾರಿಗೆ ನೌಕರರ ವೇತನ ಹೆಚ್ಚಳದ ವಿಷಯ ನನೆಗುದಿಗೆ ಬಿದ್ದಿದೆ.  ಹಾಲಿ ಇರುವ ಭಾಟಾ, ಮಾಸಿಕ, ದೈನಂದಿನ(ರಾ, ಅಪಾಸ್ಟ್, ಬಟ್ಟೆ ತೊಳೆಯುವ, ರಾತ್ರಿ ಪಾಳಿ, ಪ್ರೋತ್ಸಾಹ) ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂಧಿಗಳಿಗೂ […]