ಹೊನಗನಹಳ್ಳಿಯಲ್ಲಿ ಕಲಿಕಾ ಹಬ್ಬ- ಶಿಕ್ಷಣ ಸಂಯೋಜಕ ಸುಭಾಷ ರಾಠೋಡ ಉದ್ಘಾಟನೆ

ವಿಜಯಪುರ: ಮಕ್ಕಳಲ್ಲಿ ವಿಜ್ಞಾನ, ಗಣಿತ, ಇತಿಹಾಸ ಮತ್ತು ಸಾಂಸ್ಕøತಿಕ ಅಭಿರುಚಿಯನ್ನು ಬೆಳೆಸಲು ಕಲಿಕಾ ಚೇತರಿಕೆಯ ಒಂದು ಭಾಗವಾಗಿ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಸುಭಾಸ ರಾಠೊಡ ಹೇಳಿದರು.

ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹೊನಗನಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶೀತಲ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಹೊನಗನಹಳ್ಳಿ ಕ್ಲಸ್ಟರಿನ 120 ಮಕ್ಕಳು ನಾನಾ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.  ಮೊದಲಿಗೆ ಅಲಂಕೃತ ಎತ್ತಿನ ಬಂಡಿ ಮತ್ತು ಕುಂಭವನ್ನು ಹೊತ್ತ ಮಕ್ಕಳೊಂದಿಗೆ ಗ್ರಾಮದಲ್ಲಿ ಮಕ್ಕಳು ಮತ್ತು ಶಿಕ್ಷಕರು ಕಲಿಕಾ ಹಬ್ಬದ ಮೆರವಣಿಗೆಯನ್ನು ಮಾಡಿದರು.

ಜುಮನಾಳ ಗ್ರಾಮದಲ್ಲಿ ಹೊನಗನಹಳ್ಳಿ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು

ಜಟ್ಟಿಂಗೇಶ್ವರ ದೇವಸ್ಥಾನದ ಪೂಜಾರಿ ಶರಣಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.  ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಸುಭಾಸ ಚಲವಾದಿ ಅಧ್ಯಕ್ಷತೆ ವಹಿಸಿದ್ದರು.  ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಎಸ್ ಡಿ ಎಂ ಸಿ ಅಧ್ಯಕ್ಷ ಸುಭಾಸ ಚಲವಾದಿ, ಸಂಜು ಕಬಾಡೆ, ಗೈಬುಸಾಬ ಕೋಲಾರ, ಕಾಶೀನಾಥ ಅಮರಪ್ಪಗೋಳ, ಗ್ರಾಮದ ಗಣ್ಯರಾದ ಯಮನಪ್ಪ ಸಾತಿಹಾಳ, ಹಣಮಂತ ಗೋಡೇಕಾರ, ಖಾಜೇಸಾಬ ಮಿರ್ದೆ, ಶಂಕರ ತೋರಾವತ, ಹಣಮಂತ ಉಮರಾಣಿ, ಶಾರದಾ ಹಾದಿಮನಿ, ಪಾರ್ವತಿ ಅಮರಪ್ಪಗೋಳ, ಸಂತೋಷ ಕೃಷ್ಣಗೌಡ ಬಗಲಿ, ಪಿಡಿಓ ಮುಕ್ಕಣ್ಣ ನಾಯಿಕ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಿ. ಬಿ. ಮಠಪತಿ, ರಮೇಶ ಕ್ಷತ್ರಿ, ಅನಿಲ ಉಮದಿ, ಎ. ಎಂ. ಮಿರ್ಜಾ, ಪಿ. ಕೆ. ಹಿರೇಮನಿ, ರೂಪಾ ಭಟ್, ಶೋಭಾ ಮೇಡೆಗಾರ, ಲಕ್ಷ್ಮೀ ಜಂಬಗಿ, ಸಿ. ಆರ್. ಪಿ. ಶೀತಲ ದೊಡಮನಿ, ಉರ್ದು ಸಿ ಆರ್ ಪಿ ರೂಗಿ, ಕಾರ್ಯಕ್ರಮದ ನೋಡಲ್ ಆದ ಭಾರತಿ ಕಾಂಬಳೆ, ಶಿಕ್ಷಕರಾದ ಸತೀಶ ಬಿರಾದಾರ, ಎಸ್. ಬಿ. ಅಂಗಡಿ, ಎಂ. ಆಯ್. ಬಿರಾದಾರ, ಆರ್ ಐ ಖುರೇಶಿ, ಯರನಾಳ, ಬಳಬಟ್ಟಿ, ದಿವಟಗಿ, ಇಂಡಿಕರ, ಆರ್. ಎಸ್. ದೀಕ್ಷಿತ, ಅನಿಲ ಬಬಲೇಶ್ವರ, ಅಲ್ಲದೇ ಕ್ಲಸ್ಟರ್ ಸಮಸ್ತ ಶಿಕ್ಷಕರು ಉಪಸ್ಥಿತರಿದ್ದರು.

ಮಕ್ಕಳು ಕಲಿಕಾ ಹಬ್ಬ ಹಾಡಿದರು.  ಕೋರೆಗೋಳ ಸ್ವಾಗತಿಸಿದರು.  ಮುಖ್ಯ ಶಿಕ್ಷಕಿ ಭಾರತಿ ಉಪಾಸೆ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌