ವಿಜಯಪುರ: ಶಿಕ್ಷಣ ನಮ್ಮ ಜೀವನದ ಬಹು ಮುಖ್ಯ ಘಟ್ಟ. ಹೀಗಾಗಿ ನಿವೇಲ್ಲರೂ ಅತ್ಯುತ್ತಮವಾಗಿ ಕಲೆತು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ವಿಸ್ಮಯ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷೆ ಕಾಂತಾ ನಾಯಕ ಮಕ್ಕಳಿಗೆ ಕರೆ ನೀಡಿದರು.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಟಿ ಮಾತನಾಡಿದ ಅವರು, ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು. ನೀವೆಲ್ಲರೂ ನಮ್ಮ ರಾಷ್ಟ್ರದ ಭವಿಷ್ಯ ಬರೆಯುವಂತಹ ಶಕ್ತಿ ಹೊಂದಿದವರು. ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿ ಸಾಧನೆ ಮಾಡುವ ಮೂಲಕ ಮುಂದೆ ಬರಬೇಕು. ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಶ್ರಮ ವಹಿಸಿ ಕಲಿಯಿರಿ ಎಂದು ಹೇಳಿದರು.
ಓದು ಕೇವಲ ನಿಮ್ಮ ಸ್ವಂತಕ್ಕಾಗಿ ಇರದೇ ಅದು ರಾಷ್ಟ್ರವನ್ನು ಕಟ್ಟುವುದಕ್ಕಾಗಿಯೂ ಮತ್ತು ನಾವು ಬೆಳೆಯುವುದರ ಜೊತೆಗೆ ಮತ್ತೊಬ್ಬರನ್ನು ಬೆಳೆಸುವಂಥ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕಾಂತಾ ನಾಯಕ ವಿದ್ಯಾರ್ಥಿಯರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ನಾನಾ ದೇಶಭಕ್ತಿಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ಈ ಕಾರ್ಯಕ್ರಮದಲ್ಲಿ ಮುಖೋಪಾಧ್ಯಾಯರು, ಕೀರ್ತಿ ಚವ್ಹಾಣ, ಸತೀಶ ಉಟಗಿ, ಶಾಲಾ ಶಿಕ್ಷಕರು, ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.