ಗಡಿಗ್ರಾಮ ಸಿದ್ಧಾಪುರ(ಅ) ದಲ್ಲಿ ಮಹಿಳೆಯರು, ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯಪುರ: ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ ಗಡಿ ಭಾಗದ ತಿಕೋಟಾ ತಾಲೂಕಿನ ಸಿದ್ಧಾಪುರ(ಅ) ಗ್ರಾಮದಲ್ಲಿ ನಡೆಯಿತು.

ವಿಜಯಪುರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ಹಾಗೂ ಮಕ್ಕಳ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.

ಸಿದ್ದಾಪುರ(ಅ) ಗ್ರಾಮದಲ್ಲಿ ನಡೆದ ಶಿಬಿರದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯರಾದ ಡಾ. ಲಕ್ಷ್ಮಿ ಸಂಗೊಳ್ಳಿ, ಡಾ. ವೈ. ಸುಷ್ಮಿತಾ, ಡಾ. ಶಾಲಿನಿ ಆರೋಗ್ಯ ತಪಾಸಣೆ ನಡೆಸಿದರು

ಈ ಸಂದರ್ಭದಲ್ಲಿ ರೋಗಿಗಳಿಗೆ ಅಗತ್ಯವಾಗಿರುವ ಔಷಧಿಯನ್ನು ಉಚಿತವಾಗಿ ವಿತರಿಸಲಾಯಿತು. ಅಲ್ಲದೇ, ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿರುವವರಿಗೆ ವಿಜಯಪುರದ ಬಿ. ಎಲ್. ಡಿ. ಇ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಲು ಶಿಫಾರಸು ಮಾಡಲಾಯಿತು. ಈ ಸಂದರ್ಭದಲ್ಲಿ 187 ಮಕ್ಕಳು ಮತ್ತು 72 ಮಹಿಳೆಯರು ಸೇರಿದಂತೆ ಒಟ್ಟು 259 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.

ಬಿ ಎಲ್ ಡಿ ಇ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯರಾದ ಡಾ. ಲಕ್ಷ್ಮಿ ಸಂಗೊಳ್ಳಿ, ಡಾ. ವೈ. ಸುಷ್ಮಿತಾ, ಡಾ. ಶಾಲಿನಿ, ಮಕ್ಕಳ ವೈದ್ಯರಾದ ಡಾ. ದೀಪಾ ಕುಂದರಗಿ, ಡಾ. ದೀಪಿಕಾ, ಡಾ. ಹಿತೇಶ ಆರೋಗ್ಯ ತಪಾಸಣೆ ನಡೆಸಿದರು. ಗಡಿ ಭಾಗದಲ್ಲಿರುವ ಸಿದ್ಧಾಪುರ(ಅ) ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಬೃಹತ್ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Leave a Reply

ಹೊಸ ಪೋಸ್ಟ್‌