ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ಫೆ. 7 ರಂದು ವಿಧಾನಸೌಧ ಚಲೋ- ರಾಜ್ಯ ಸರಕಾರಿ ನೌಕರರ ಒಕ್ಕೂಟ ರಾಜ್ಯಾಧ್ಯಕ್ಷ ಜೈಕುಮಾರ ಎಚ್. ಎಸ್.

ವಿಜಯಪುರ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ. 7 ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಸರಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಜೈಕುಮಾರ ಎಚ್. ಎಸ್. ತಿಳಿಸಿದ್ದಾರೆ.  ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ 7ನೇ ವೇತನ ಆಯೋಗವನ್ನು ವಿಳಂಬವಾಗಿ ರಚನೆ ಮಾಡಿದೆ.  ಈವರೆಗೂ ಆಯೋಗ ಸರಕಾರಕ್ಕೆ ಶಿಫಾರಸ್ಸುಗಳನ್ನು ಸಲ್ಲಿಸುವ ಮತ್ತು ರಾಜ್ಯ ಸರಕಾರವು ಬಜೆಟ್ ನಲ್ಲಿ ಇದನ್ನು ಜಾರಿಗೊಳಿಸುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಸರಕಾರಿ ನೌಕರರ ವಲಯದಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ.  […]

ವಿಜಯಪುರ ಕಾನಿಪ ಸಮ್ಮೇಳನಕ್ಕೆ ಉದ್ಘಾಟನೆಗೆ ಖಂಡಿತವಾಗಿಯೂ ಬರುತ್ತೇನೆ- ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಬಸವನಾಡು ವಿಜಯಪುರದಲ್ಲಿ ಫೆ. 4 ಮತ್ತು 5 ರಂದು ನಡೆಯಲಿರುವ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟನೆಗೆ ಖಂಡಿತವಾಗಿಯೂ ಬರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೋಮ್ಮೆ ಸ್ಪಷ್ಟಪಡಿಸಿದ್ದಾರೆ.  ಸಮ್ಮೇಳನದ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತ ಆಮಂತ್ರಣ ನೀಡಲು ಹುಬ್ಬಳ್ಳಿಗೆ ಆಗಮಿಸಿ್ದ್ದ ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಟಿ. ಚೂರಿ ನೇತೃತ್ವದ ಪತ್ರಕರ್ತರ ತಂಡಕ್ಕೆ ಸಿಎಂ ಮತ್ತೋಮ್ಮೆ ಭರವಸೆ ನೀಡಿದರು.   ನಗರದ ಆದರ್ಶ ನಗರದಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ತಮ್ಮನ್ನು […]

ರೈತನ ಬೆನ್ನೆಲುಬು ಹೋರಿಯ ಅದ್ಧೂರಿ ಬರ್ತಡೆ ಆಚರಿಸಿ ಸಂಭ್ರಮಿಸಿದ ಬಸವನಾಡಿನ ಅನ್ನದಾತ

ವಿಜಯಪುರ: ಬಸವನಾಡು ವಿಜಯಪುರ ನಾನಾ ಆಚರಣೆಗಳಿಗೆ ಹೆಸರುವಾಸಿ.  ಈ ನಾಡಿನಲ್ಲಿ ಪ್ರತಿದಿನ ಒಂದಿಲ್ಲೊಂದು ಊರಿನಲ್ಲಿ ಜಾತ್ರೆ, ಆಚರಣೆಗಳು ನಡೆಯುವುದು ವಿಶೇಷ.  ಇನ್ನು ಹುಟ್ಟು ಹಬ್ಬಗಳೆಂದರೆ ಈಗ ಅವುಗಳ ಕ್ರೇಜ್ ಹೆಚ್ಚಾಗುತ್ತಿದೆ.  ಮನೆಗಳಲ್ಲಿ ಮಕ್ಕಳು, ಮತ್ತು ಹಿರಿಯ ಬರ್ತಡೆ ಆಚರಿಸಿದರೆ, ಮನೆಯಾಚೆ ಸ್ನೇಹಿತರು, ಅಭಿಮಾನಿಗಳು ತಂತಮ್ಮ ಗೆಳೆಯರು, ನಾಯಕರು, ಮಾಲೀಕರ ಜನ್ಮದಿನಗಳನ್ನು ಆಚರಿಸಿ ಸಂಭ್ರಮಿಸುತ್ತಾರೆ.  ಇದೆಲ್ಲಕ್ಕಿಂತ ಅಪರೂಪದ ಜನ್ಮದಿನಾಚರಣೆ ಬಸವಣ್ಣನವರ ತವರು ಬಸವನ ಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ.  ರಾಸುಗಳು ಅನ್ನದಾತರ ಕುಟುಂಬ ಸದಸ್ಯರಿದ್ದಂತೆ.  ರೈತರೂ ಕೂಡ ಅವುಗಳನ್ನು ತಮ್ಮ […]