ವಿಜಯಪುರ ಕಾನಿಪ ಸಮ್ಮೇಳನಕ್ಕೆ ಉದ್ಘಾಟನೆಗೆ ಖಂಡಿತವಾಗಿಯೂ ಬರುತ್ತೇನೆ- ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಬಸವನಾಡು ವಿಜಯಪುರದಲ್ಲಿ ಫೆ. 4 ಮತ್ತು 5 ರಂದು ನಡೆಯಲಿರುವ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟನೆಗೆ ಖಂಡಿತವಾಗಿಯೂ ಬರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೋಮ್ಮೆ ಸ್ಪಷ್ಟಪಡಿಸಿದ್ದಾರೆ. 

ಸಮ್ಮೇಳನದ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತ ಆಮಂತ್ರಣ ನೀಡಲು ಹುಬ್ಬಳ್ಳಿಗೆ ಆಗಮಿಸಿ್ದ್ದ ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಟಿ. ಚೂರಿ ನೇತೃತ್ವದ ಪತ್ರಕರ್ತರ ತಂಡಕ್ಕೆ ಸಿಎಂ ಮತ್ತೋಮ್ಮೆ ಭರವಸೆ ನೀಡಿದರು.

 

ನಗರದ ಆದರ್ಶ ನಗರದಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ತಂಡದಿಂದ ಆಮಂತ್ರಣ ಪತ್ರಿಕೆ ಸ್ವೀಕರಿಸಿದ ಅವರು, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ ನಡೆಯಬೇಕು.  ಅದು ಜಿಲ್ಲೆಯ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಬೇಕು ಎಂದು ಆಶಿಸಿದ್ದರು.  ಹೀಗಾಗಿ ಅವರ ಆಸೆಯಂತೆ ಸಮ್ಮೇಳನವನ್ನು ಚೆನ್ನಾಗಿಯೇ ಮಾಡೋಣ.  ವಿಜಯಪುರದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಲಿ ಎಂಬ ಸದಾಶಯ ನನ್ನದಾಗಿದೆ.  ನಾನು ಸಮ್ಮೇಳನ ಉದ್ಘಾಟಿಸಲು ಆನಂದದಿಂದ ಆಗಮಿಸುವುದಾಗಿ ಪದಾಧಿಕಾರಿಗಳಿಗೆ ಬಸವರಾಜ ಬೊಮ್ಮಾಯಿ ಸ್ಪಷ್ಟ ಭರವಸೆ ನೀಡಿದರು.

ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಕಾನಿಪ ಸಮ್ಮೇಳನದ ಆಮಂತ್ರಣ ಪತ್ರಿಕೆ ನೀಡಿದ ವಿಜಯಪುರ ಕಾನಿಪ ಪದಾಧಿಕಾರಿಗಳು

ಇದೇ ವೇಳೆ ಮುಖ್ಯಮಂತ್ರಿಯವರನ್ನು ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ ಆಪ್ಟೆ, ಸಹಖಜಾಂಚಿ ದೀಪಕ ಶಿಂತ್ರೆ, ಜಿಲ್ಲಾ‌ ಕಾರ್ಯದರ್ಶಿ ಅವಿನಾಶ ಬಿದರಿ, ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅಮರೇಗೌಡ ಗೋನವಾರ ಸೇರಿದಂತೆ ಹುಬ್ಬಳ್ಳಿಯ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌