ದೇವರ ನಿಂಬರಗಿ, ಜಾಲಗೇರಿಗಳಲ್ಲಿ ಉಚಿತ ಆರೋಗ್ಯ ತಪಾಸಣೆ, ಬೃಹತ್ ಚಿಕಿತ್ಸಾ ಶಿಬಿರ ಸಾವಿರಾರು ಜನರಿಗೆ ಆರೋಗ್ಯ ತಪಾಸಣೆ
ವಿಜಯಪುರ: ಚಡಚಣ ತಾಲೂಕಿನ ದೇವರ ನಿಂಬರಗಿ ಮತ್ತು ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮಗಳಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಮತ್ತು ಬೃಹತ್ ಚಿಕಿತ್ಸಾ ಶಿಬಿರ ನಡೆಯಿತು. ದೇವರ ನಿಂಬರಗಿ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದ ಆವರಣದಲ್ಲಿ ನಡೆದ ಶಿಬಿರದಲ್ಲಿ 998 ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ 12 ಜನರು ರಕ್ತದಾನ ಮಾಡಿದರು. ಈ ಶಿಬಿರದಲ್ಲಿ ಬಿ.ಎಲ್.ಡಿ.ಇ. […]
ವಿಜಯಪುರ ಕಾನಿಪ ಸಮ್ಮೇಳನ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮ್ಮೇಳನದ ನಾನಾ ಸಮಿತಿಗಳ ಸಭೆ
ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ಫೆ. 4 ಮತ್ತು 5 ರಂದು ನಡೆಯಲಿರುವ ಕಾರ್ಯನಿತರ ಪತ್ರಕರ್ತರ 37ನೇ ರಾಜ್ಯ ಮಟ್ಟದ ಸಮ್ಮೇಳನ ಅಂಗವಾಗಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಮ್ಮೇಳನದ ಯಶಸ್ವಿಗಾಗಿ ರಚಿಸಲಾಗಿರುವ ನಾನಾ ಸಮಿತಿಗಳ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಪ್ರಮುಖವಾಗಿ ವಸತಿಯ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಗರದಲ್ಲಿ ಇದೇ ಮೊದಲ ಬಾರಿಗೆ […]
ಮೊಬೈಲ್ ಗೀಳು- ಕವನದ ಮೂಲಕ ವಾಸ್ತವಿಕ ಪರಿಸ್ಥಿತಿಯನ್ನು ಬಿಚ್ಚಿಟ್ಟ ಖ್ಯಾತ ವೈದ್ಯ ಡಾ. ಅರುಣ ಚಂ. ಇನಾಮದಾರ
ವಿಜಯಪುರ: ಮೊಬೈಲ್ ಗೀಳು ಈಗ ಸರ್ವವ್ಯಾಪಿಯಾಗಿದೆ. ಹಲವಾರು ರೀತಿಯಲ್ಲಿ ಬಹುಪಯೋಗಿಯಾಗಿದ್ದರೂ, ಅನೇಕ ರೀತಿಯಲ್ಲಿ ತರಹೇವಾರಿ ಸಮಸ್ಯೆಗಳ ಸೃಷ್ಠಿಗೂ ಕಾರಣವಾಗಿದೆ. ಎಲ್ಲ ವಯೋಮಾನದವರನ್ನು ತನ್ನ ಮೇಲೆ ಅವಲಂಬಿತರಾಗುವಂತೆ ಮಾಡುತ್ತಿರುವ ಮೊಬೈಲ್ ಗೀಳು ಮತ್ತು ಅದರ ವಾಸ್ತವ ಪರಿಸ್ಥಿತಿ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಮತ್ತು ಚರ್ಮರೋಗ ಖ್ಯಾತ ವೈದ್ಯ ಡಾ. ಅರುಣ ಚಂ. ಇನಾಮದಾರ ಕವನದ ಮೂಲಕ ಬಿಚ್ಚಿಟ್ಟಿದ್ದಾರೆ. ಡಾ. ಅರುಣ ಚಂ. ಇನಾಮದಾರ ರಚಿಸಿರುವ ಇಂದಿನ […]
ಸಮಾಜ ಕಲುಷಿತವಾಗಲು ನಾವೇ ಹೊಣೆಗಾರರು- ತಿಂಥಣಿ ಶ್ರೀಗಳ ಅಭಿಮತ
ವಿಜಯಪುರ: ಇಂದು ಸಮಾಜ ವಿವೇಕದ ಹಿಂದೆ ಹೋಗದೆ ಸಮೂಹ ದಾಂಗುಡಿ ಹಾಕುತ್ತ ಕಲುಷಿತಗೊಳ್ಳಲು ನಾವೇ ಹೊಣೆಗಾರರು ಎಂದು ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ದಿ. ಸಂಗಪ್ಪ ಕಮದಾಳ ಅವರ 26ನೆಯ ಪುಣ್ಯಸ್ಮರಣೆ ಅಂಗವಾಗಿ ಅವರ ಜೀವನ-ಸಾಧನೆ ಕುರಿತಾದ ದಾಂಗುಡಿ ಎಂಬ ಸಂಸ್ಮರಣ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಇಂದು ಸರಕಾರಿ ನೌಕರರು, ಅಧಿಕಾರಿಗಳು ಸಾಮಾಜಿಕ ಕಾಳಜಿಯನ್ನು ಕಳೆದುಕೊಂಡು ಸ್ವಾರ್ಥಕ್ಕೋಸ್ಕರ ಕೆಲಸ ಮಾಡುತ್ತಿದ್ದಾರೆ. ಮನುಷ್ಯನಿಗೆ ಹಣ […]