ವಿಜಯಪುರ: ಚಡಚಣ ತಾಲೂಕಿನ ದೇವರ ನಿಂಬರಗಿ ಮತ್ತು ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮಗಳಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಮತ್ತು ಬೃಹತ್ ಚಿಕಿತ್ಸಾ ಶಿಬಿರ ನಡೆಯಿತು.
ದೇವರ ನಿಂಬರಗಿ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದ ಆವರಣದಲ್ಲಿ ನಡೆದ ಶಿಬಿರದಲ್ಲಿ 998 ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ 12 ಜನರು ರಕ್ತದಾನ ಮಾಡಿದರು. ಈ ಶಿಬಿರದಲ್ಲಿ ಬಿ.ಎಲ್.ಡಿ.ಇ. ಆಸ್ಪತ್ರೆಯ ಔಷಧೀಯ ವಿಭಾಗದ ಡಾ. ಬಿ.ಡಿ.ಕಟಗೇರಿ, ಶಸ್ತ್ರಚಿಕಿತ್ಸಾ ವಿಭಾಗದ ಡಾ. ಪ್ರದೀಪ ಜಾಜು, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ಶೋಭಾ ಶಿರಗೂರ, ಎಲುಬು ಮತ್ತು ಕೀಲು ವಿಭಾಗದ ಡಾ. ಪ್ರಶಾಂತ ಕೆಂಗನಾಳ, ಚಿಕ್ಕಮಕ್ಕಳ ವಿಭಾಗದ ಡಾ. ಆರ್.ಎಚ್.ಗೊಬ್ಬುರ, ದಂತ ವೈದ್ಯ ವಿಭಾಗದ ಡಾ. ಆನಂದ ವಿ. ನಿಂಬಾಳ, ಚರ್ಮರೋಗ ತಜ್ಞ ಡಾ. ಸನ್ಮಿತ್ರ ಐಹೊಳ್ಳಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಜಾಲಗೇರಿ ಶಿಬಿರ
ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಬಿರದಲ್ಲಿ 411 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಶಿಬಿರದಲ್ಲಿ ಔಷಧ ವಿಭಾಗದ ವೈದ್ಯರಾದ ಡಾ. ರಾಹುಲ ಬಿರಾದಾರ, ಶಸ್ತ್ರ ಚಿಕಿತ್ಸಾ ವಿಭಾಗದ ಡಾ. ಅನಿಕೇತನ ಕೆ.ವಿ., ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಡಾ. ನೀಲಮ್ಮ ಪಾಟೀಲ, ಕಿವಿ, ಮೂಗು ಮತ್ತು ಗಂಟಲು ವಿಭಾಗದ ಡಾ. ಮನಾಲಿ ಭಟ್, ಎಲುಬು ಮತ್ತು ಕೀಲು ತಜ್ಞ ಡಾ. ಶ್ರೀಕಾಂತ, ಚಿಕ್ಕಮಕ್ಕಳ ತಜ್ಞ ಡಾ. ಅನೀಲಕುಮಾರ ಸಜ್ಜನ, ಚರ್ಮರೋಗ ವಿಭಾಗದ ಡಾ. ಶೃತಿ ಕುಲಕರ್ಣಿ, ದಂತವೈದ್ಯಕೀಯ ವಿಭಾಗದ ಡಾ. ಆನಂದ ಸಜ್ಜನ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭೂತಾಳಸಿದ್ಧ ಒಡೆಯರ, ರಾಘವೇಂದ್ರ ಕುಲಕರ್ಣಿ, ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮು ಚವ್ಹಾಣ, ಸದಸ್ಯರಾದ ವೀರನಗೌಡ ಬಿರಾದಾರ, ಸುಭಾಷ ಕಾಂಬಳೆ, ಉಮೇಶ ಚವ್ಹಾಣ, ಮನೋಹರ ಜಾದವ, ಕಾಶೀನಾಥ ಚವ್ಹಾಣ ಉಪಸ್ಥಿತರಿದ್ದರು.