ಮೊಬೈಲ್ ಗೀಳು- ಕವನದ ಮೂಲಕ ವಾಸ್ತವಿಕ ಪರಿಸ್ಥಿತಿಯನ್ನು ಬಿಚ್ಚಿಟ್ಟ ಖ್ಯಾತ ವೈದ್ಯ ಡಾ. ಅರುಣ ಚಂ. ಇನಾಮದಾರ

ವಿಜಯಪುರ: ಮೊಬೈಲ್ ಗೀಳು ಈಗ ಸರ್ವವ್ಯಾಪಿಯಾಗಿದೆ.  ಹಲವಾರು ರೀತಿಯಲ್ಲಿ ಬಹುಪಯೋಗಿಯಾಗಿದ್ದರೂ, ಅನೇಕ ರೀತಿಯಲ್ಲಿ ತರಹೇವಾರಿ ಸಮಸ್ಯೆಗಳ ಸೃಷ್ಠಿಗೂ ಕಾರಣವಾಗಿದೆ.

ಎಲ್ಲ ವಯೋಮಾನದವರನ್ನು ತನ್ನ ಮೇಲೆ ಅವಲಂಬಿತರಾಗುವಂತೆ ಮಾಡುತ್ತಿರುವ ಮೊಬೈಲ್ ಗೀಳು ಮತ್ತು ಅದರ ವಾಸ್ತವ ಪರಿಸ್ಥಿತಿ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಮತ್ತು ಚರ್ಮರೋಗ ಖ್ಯಾತ ವೈದ್ಯ ಡಾ. ಅರುಣ ಚಂ. ಇನಾಮದಾರ ಕವನದ ಮೂಲಕ ಬಿಚ್ಚಿಟ್ಟಿದ್ದಾರೆ.

ಡಾ. ಅರುಣ ಚಂ. ಇನಾಮದಾರ ರಚಿಸಿರುವ ಇಂದಿನ ಕಟು ಸತ್ಯ ಶಿರ್ಷಿಕೆ ಯ ಕವನ ಇಲ್ಲಿದೆ.

 

ಡಾ. ಅರುಣ ಇನಾಮದಾರ ರಚಿಸಿರುವ ಮೊಬೈಲ್ ಗೀಳಿನ ಕವನ

ಮೊಬೈಲ್ ಇದ್ದರೇನೆ… ಊಟ

ಆಟ, ಪಾಠ…

ನಿಸ್ತಂತು ಜಂಗಮ

ಸಂಪರ್ಕ ವಾಹಕ…

ನಿರ್ಜೀವ Emoji ಗಳ..

ಕಳಿಸುವ ಯಂತ್ರ..

ಸಂಪರ್ಕ ಸಾಧಿಸುವ ನೆಪದಲ್ಲಿ

ನಿಸ್ತೇಜ ಸುದ್ದಿಯ ಮೂಲ..

ಸ್ಥಾವರ ಸಂಬಂಧಗಳನ್ನು

ಕಡಿದು ಹಾಕಿದ ಅಫೀಮು..

ಸ್ಥಾವರಕ್ಕಳಿವುಂಟು..

ಜಂಗಮಕ್ಕಳಿವಿಲ್ಲ!

ಇಂದಿನ ಮೋಬಾಯಿಲ್ ಮಕ್ಕಳು

ನಾಳಿನ ‘ಡಿಜಿಟಲ್’ ಪ್ರಜೆಗಳು.

ಜೈ ಹೋ ಮೋಬೈಲ್!

 

ಡಾ. ಅರುಣ ಇನಾಮದಾರ.

Leave a Reply

ಹೊಸ ಪೋಸ್ಟ್‌