ದ್ರಾಕ್ಷಿ ನಾಡಿನಲ್ಲಿ ಸಂಭ್ರಮದ ಕಲಿಕಾ ಹಬ್ಬ- ಮಕ್ಕಳಲ್ಲಿರುವ ಪ್ರತಿಭಾನ್ವೇಷಣೆಗೆ ಪೂರಕವಾದ ಕಾರ್ಯಕ್ರಮ

ವಿಜಯಪುರ: ಕಲಿಕಾ ಹಬ್ಬ ಮಕ್ಕಳು ಆಟಗಳೊಂದಿಗೆ ಅಕ್ಷರ ಕಲಿಯಲು ಪ್ರೋತ್ಸಾಹ ನೀಡುತ್ತಿದೆ ಎಂದು ಎಂದು ನೊಡಲ್ ಅಧಿಕಾರಿ ಎಂ. ಎಂ. ಮಕಾನದಾರ ಹೇಳಿದರು.

ಬಸವನಾಡು ವಿಜಯಪುರ ಜಿಲ್ಲೆಯ ದ್ರಾಕ್ಷಿನಾಡು ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು‌ ಮಾತನಾಡಿದರು.

ಕಳ್ಳಕವಟಗಿ ಎಲ್. ಟಿ. ಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಂಯುಕ್ತವಾಗಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜಿಸಿದ್ದವು.

ಹಾಡು, ಕಥೆ, ಪರಿಸರ ಅಧ್ಯಯನ ಸಮುದಾಯದ ಜ್ಞಾನ ಸೇರಿದಂತೆ ನಾನಾ ಚಟುವಟಿಕೆಗಳಲ್ಲಿ ಮಕ್ಕಳು ಭಾಗಿಯಾಗಿ ಸಂತಸವಾಗಿ ಕಲಿತುಕೊಳ್ಳುತ್ತವೆ ಎಂದು ಎಂ. ಎಂ. ಮಕಾನದಾರ ಹೇಳಿದರು.

ಗ್ರಾ. ಪಂ. ಸದಸ್ಯ ಬಸವರಾಜ ನಿಡೋಣಿ ಮಾತನಾಡಿ, ಕಲಿಕೆಯ ಜೊತೆ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳನ್ನು ಹೊರತರಲು ಶಿಕ್ಷಣ ಇಲಾಖೆಯ ಇಂಥ ಕಾರ್ಯಕ್ರಮಗಳು ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಿವೆ ಎಂದು ಹೇಳಿದರು.

ಗ್ರಾಮ ದೇವರಿಗೆ ಪೂಜೆ

ಇದಕ್ಕೂ ಮೊದಲು ಕಳ್ಳಕವಟಗಿ ಗ್ರಾಮದ ಆರಾಧ್ಯ ದೈವ ಶ್ರೀ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಪ್ರೌಢ ಶಾಲೆಯವರೆಗೂ ಮಕ್ಕಳು ಜಾಥಾ ನಡೆಸಿ ನಾನಾ ನೃತ್ಯಗಳನ್ನು ಮಾಡುತ್ತ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಲಂಬಾಣಿ ಉಡುಪುಗಳನ್ನು ಧರಿಸಿದ ಮಕ್ಕಳು ವೈಶಿಷ್ಟವಾಗಿ ನೃತ್ಯ ಮಾಡುತ್ತ ಸಾರ್ವಜನಿಕರ ಗಮನ ಸೇಳೆದರು. ಅಷ್ಟೇ ಅಲ್ಲ, ಮಕ್ಕಳು ಡೋಲು ಬಡಿಯುತ್ತ, ಲೇಜಿಮ್ ನೃತ್ಯ ಪ್ರದರ್ಶಿಸಿದರು.

ಅಳಗಿನಾಳ, ಘೋಣಸಗಿ ಹಾಗೂ ಕಳ್ಳಕವಟಗಿ ಮೂರು ಗ್ರಾಮಗಳ ಒಂಬತ್ತು ಶಾಲೆಯ 120 ಕ್ಕೂ ಹೆಚ್ಚು ಮಕ್ಕಳು ಕಲಿಕಾ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

 

ನಾಲ್ಕು ಕಾರ್ನರಗಳಾದ ಹಾಡು ಆಡು, ಕಾಗದ ಕತ್ತರಿ, ಊರು ತಿಳಿಯೋಣ, ಮಾಡು ಆಡು ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ ಕಾಗದದಿಂದ ಟೋಪಿ, ಮುಖವಾಡ ತಯಾರಿ, ಹೂಗಳ ತಯಾರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಎಸ್. ಬಿ. ದುದ್ದಗಿ, ಎಸ್. ಎ. ಹತ್ತಿಕಾಳ, ವಿ. ಎಚ್.ಪುರೋಹಿತ, ಭಾರತಿ, ಬಿ.ಎಸ್‌. ಸಾವಳಗಿ ನಾನಾ ಹೊಸ ಚಟುವಟಿಕೆ ಮಾಡುತ್ತ ಮಕ್ಕಳಿಗೆ ಹೊಸ ಕಲಿಕಾ ಅನುಭವ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಿ ಆರ್ ಪಿ‌ ಜಿ. ಜಿ. ದೊಡ್ಡಿಹಾಳ, ಎಸ್ ಡಿ ಎಂ ಸಿ ಅಧ್ಯಕ್ಷ ಅಣ್ಣಾರಾಯ ಗದ್ಯಾಳ, ಪರಮೇಶ್ವರ ದೊಡಮನಿ, ಸದಾಶಿವ ಗಿಡ್ಡನ್ನವರ, ಸಿದ್ದಪ್ಪ ಗದ್ಯಾಳ, ಮಲ್ಲಪ್ಪ ರಾಸ್ಕರ, ಶೇಖಸಾಬ ಮುಲ್ಲಾ, ಮಲ್ಲಿಕಾರ್ಜುನ ಸೊರಡಿ, ರಾಘು ಕುಲಕರ್ಣಿ, ಭೀರಪ್ಪ ಕಟೆ, ಎಸ್. ಎಸ್. ಗೋಣಸಗಿ, ಎಸ್. ಎನ್. ಬಾಗಲಕೋಟ, ಎಸ್.‌ ಎನ್. ಗಗನಮಾಲಿ, ಜಿ. ಸಿ. ದೊಡಮನಿ, ಶಂಕರ ಖಂಡೆಕರ, ಮಾರುತಿ ಜಾಧವ ಉಪಸ್ಥಿತರಿದ್ದರು.

ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಕ್ಕಳು ಕಾಗದದಿಂದ ಮುಖವಾಡಗಳನ್ನು ತಯಾರಿಸಿದರು.

2.ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2022-23 ನೇ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು.

3.ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಲಂಬಾಣಿ ಉಡುಪು ಧರಿಸಿ ನೃತ್ಯ ಪ್ರದರ್ಶಿಸಿ ಸಾರ್ವಜನಿಕರ ಮನ ಗೆದ್ದರು.

Leave a Reply

ಹೊಸ ಪೋಸ್ಟ್‌