ವಿಜಯಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೇಶದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ನಿರ್ಮಲಾ ಸೀತರಾಮನ್ ಅವರು, ಆದಾಯ ತೆರಿಗೆ ಪಾವತಿ ವಿಷಯವಾಗಿ ಜನಸಾಮಾನ್ಯರ ಹಿತವನ್ನು ಗಮನದರಲ್ಲಿಸಿಕೊಂಡು ಶ್ರೀಸಾಮಾನ್ಯನಿಗೆ ಯಾವುದೇ ತೆರಿಗೆ ಹೊರೆ ವಿಧಿಸದೇ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ ಜೊತೆಗೆ ರೂ. 2 ಲಕ್ಷ ಕೋ. ಅನುದಾನ, ಕೃಷಿ ಸಾಲಕ್ಕೆ ರೂ. 20 ಲಕ್ಷ ಕೋ. ಮೀಸಲಿರಿಸುವ ಮೂಲಕ ಅನ್ನದಾತನಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋ. ಅನುದಾನ, ಕುಶಲಕರ್ಮಿಗಳ ಪ್ರೋತ್ಸಾಹ ನೀಡಲು ವಿಶೇಷ ಪ್ಯಾಕೇಜ್ ಘೋಷಣೆ ಹೀಗೆ ಎಲ್ಲ ವಲಯಗಳ ಶ್ರೇಯೋಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸುಕೊಂಡು ದೂರದೃಷ್ಟಿಯ ಬಜೆಟ್‌ನ್ನು ಮಂಡಿಸಿದ್ದಾರೆ. ಒಟ್ಟಾರೆಯಾಗಿ ನಿರ್ಮಲಾ ಸೀತಾರಾಮನ್ ಅವರು ಜನಪರ, ರೈತಪರ, ಕಾರ್ಮಿಕರ ಪರವಾದ ಬಜೆಟ್ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಉಮೇಶ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ.