ಇಬ್ಬರು ಬಡ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ಪಡೆಯಲು ಎಂಬಿಪಿ ನೆರವು- ಚೆಕ್ ವಿತರಿಸಿದ ಎಂಎಲ್‌ಸಿ ಸುನೀಲಗೌಡ ಪಾಟೀಲ

ವಿಜಯಪುರ: ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಸಿಕ್ಕರೂ ಶುಲ್ಕ ಭರಿಸಲಾಗದೆ ಪರದಾಡುತ್ತಿದ್ದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುವ ಮೂಲಕ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆ. ಪಿ. ಸಿ. ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.

ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಸುರೇಶ ಜಿ. ಹಳ್ಳಿ ಮತ್ತು ಕಂಬಾಗಿ ಗ್ರಾಮದ ಬಾಲಪ್ಪ ಎಂ. ಪೂಜಾರಿ ಅವರಿಗೆ ಎಂ. ಬಿ. ಬಿ. ಎಸ್. ಕೋರ್ಸಿನ ಮೊದಲ ವರ್ಷದ ಕಾಲೇಜು ಮತ್ತು ಹಾಸ್ಟೇಲು ಶುಲ್ಕದ ಚೆಕ್ ನ್ನು ಎಂ. ಬಿ. ಪಾಟೀಲ ಅವರ ಪರವಾಗಿ ಬಿ. ಎಲ್. ಡಿ. ಇ ಸಂಸ್ಥೆಯ ನಿರ್ದೇಶಕ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ವಿತರಿಸಿದರು.

ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಇಬ್ಬರೂ ವಿದ್ಯಾರ್ಥಿಗಳ ಪರವಾಗಿ ಅವರ ತಂದೆ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದು ಚೆಕ್ ಸ್ವೀಕರಿಸಿದರು.  ಅಲ್ಲದೇ, ಕೊಡುಗೈ ದಾನಿ ಎಂ. ಬಿ. ಪಾಟೀಲ ಮತ್ತು ಬಿ. ಎಲ್. ಡಿ. ಇ ಸಂಸ್ಥೆಯ ಜನಪರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧೀಕ್ಷಕ ಎಸ್. ಎ. ಬಿರಾದಾರ(ಕನ್ನಾಳ), ಆಡಳಿತಾಧಿಕಾರಿ ಎಂ. ಎನ್. ಚೋರಗಸ್ತಿ, ಹಣಕಾಸು ವಿಭಾಗದ ಎಸ್. ಎಸ್. ಪಾಟೀಲ ಉಪಸ್ಥಿತರಿದ್ದರು.

ಉಪ್ಪಲದಿನ್ನಿ ಗ್ರಾಮದ ವಿದ್ಯಾರ್ಥಿಯ ತಂದೆಗೆ ಸುನೀಲಗೌಡ ಪಾಟೀಲ ಚೆಕ್ ವಿತರಿಸಿದರು

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಸುರೇಶ ಜಿ. ಹಳ್ಳಿ ಪಿಯುಸಿ ಪರೀಕ್ಷೆಯಲ್ಲಿ ಶೇ. 99 ಅಂಕ ಪಡೆದು ನೀಟ್ ಪಾಸಾಗಿದ್ದು, ಸರಕಾರಿ ಕೋಟಾದಡಿ ರಾಯಚೂರು ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ಕಾಲೇಜಿನಲ್ಲಿ ಎಂ. ಬಿ. ಬಿ. ಎಸ್. ಸೀಟು ಪಡೆದಿದ್ದಾರೆ.  ಇವರ ತಂದೆ ಗಿರಿಮಲ್ಲಪ್ಪ ಹಳ್ಳಿ ಕಟ್ಟಡ ಕಾರ್ಮಿಕರಾಗಿದ್ದು, ಇವರಿಗೆ ಸ್ವಂತ ಮನೆಯೂ ಇಲ್ಲ.  ಇವರ ತಾಯಿ ಚನ್ನಮ್ಮ ಹಳ್ಳಿ ಕೃಷಿ ಕಾರ್ಮಿಕರಾಗಿದ್ದಾರೆ.  ಈ ವಿದ್ಯಾರ್ಥಿಯ ಎಂ. ಬಿ. ಬಿ. ಎಸ್. ಕೋರ್ಸ್ ಪೂರ್ಣಗೊಳಿಸಲು ರೂ. ಅಗತ್ಯವಾಗಿರುವ ಒಟ್ಟು ಮೊತ್ತದ ಮೊಲದ ವರ್ಷದ ಕಾಲೇಜು ಮತ್ತು ಹಾಸ್ಟೆಲ್ ಶುಲ್ಕವಾ ರೂ. 72460 ಹಣದ ಚೆಕ್ ನ್ನು ಸುನೀಲಗೌಡ ಪಾಟೀಲ ವಿತರಿಸಿದರು.

ಈ ಸಂದರ್ಭದಲ್ಲಿ ಉಪ್ಪಲದಿನ್ನಿ ಗ್ರಾಮಸ್ಥರಾದ ಸೋಮನಾಥ ಬಿರಾದಾರ, ಮಲ್ಲಿಕಾರ್ಜುನ ರಾಜಂಗಳ, ಸಂಗಯ್ಯ ಹಿರೇಮಠ, ಮಲ್ಲಪ್ಪ ಸಂಕನಾಳ, ನಂದಬಸಪ್ಪ ಬಿರಾದಾರ, ಕುಮಾರ ಚೌಧರಿ ಮುಂತಾದವರು ಉಪಸ್ಥಿತರಿದ್ದರು.

ಕಂಬಾಗಿ ವಿದ್ಯಾರ್ಥಿಯ ಪೋಷಕರಿಗೆ ಚೆಕ್ ಹಸ್ತಾಂತರಿಸಿದ ಸುನೀಲಗೌಡ ಪಾಟೀಲ

ಮತ್ತೋರ್ವ ವಿದ್ಯಾರ್ಥಿ ಕಂಬಾಗಿ ಗ್ರಾಮದ ಬಾಲಪ್ಪ ಎಂ. ಪೂಜಾರಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 96 ರಷ್ಟು ಅಂಕ ಗಳಿಸಿದ್ದು, ನೀಟ್ ಪಾಸಾಗಿ ಗುಲಬರ್ಗಾ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ನಲ್ಲಿ ಎಂ. ಬಿ. ಬಿ. ಎಸ್. ಪ್ರವೇಶ ಗಿಟ್ಟಿಸಿದ್ದಾರೆ.  ಈ ವಿದ್ಯಾರ್ಥಿಯ ತಂದೆ ಮೇಲಪ್ಪ ಪೂಜಾರಿ ಮತ್ತು ತಾಯಿ ರುಕ್ಮಾಬಾಯಿ ಅವರಿಗೆ ಒಂದು ಎಕರೆ ಜಮೀನಿದ್ದು, ಬೇರೆಯವರ ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.  ಇವರಿಗೆ ಕಾಲೇಜು ಹಾಗೂ ಹಾಸ್ಟೇಲಿನ ಶುಲ್ಕದ ಮೊದಲ ಕಂತಿನ ಹಣ ರೂ. 94450ನ್ನು ಸುನೀಲಗೌಡ ಪಾಟೀಲ ವಿತರಿಸಿದರು.

ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಕಂಬಾಗಿ ಗ್ರಾಮಸ್ಥರಾದ ಚಂದಪ್ಪ ಹರಿಜನ ಗ್ರಾ. ಪಂ. ಕಂಬಾಗಿ, ಅಧ್ಯಕ್ಷ, ಮುದಕಪ್ಪ ಜಾನೋಜಿ, ಶಿವಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಅಮಸಿದ್ದ ಪೂಜಾರಿ, ಪಾಂಡು ಫಕೀರಪ್ಪಗೋಳ, ಬೀರಪ್ಪ ಗೋಕಾವಿ, ಶ್ರೀಶೈಲ ಶೇಗುಣಸಿ, ಸದಾಶಿವ ಸೊನ್ನದ, ವಿಠ್ಠಲ ಶಿವಣ್ಣವರ, ಶೇಖಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ಶಾಸಕ ಎಂ. ಬಿ. ಪಾಟೀಲ ಅವರು, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ.  ಈ ಇಬ್ಬರೂ ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಬಡಜನರ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿಗಳ ತಂದೆಯಾದ ಉಪ್ಪಲದಿನ್ನಿಯ ಗಿರಿಮಲ್ಲಪ್ಪ ಹಳ್ಳಿ ಮತ್ತು ಕಂಬಾಗಿಯ ಮೇಲಪ್ಪ ಪೂಜಾರಿ ಮಾತನಾಡಿ, ತಮ್ಮ ನೀಟ್ ಪಾಸಾದ ಹಾಗೂ ತಾವು ಆರ್ಥಿಕವಾಗಿ ಎದುರಿಸುತ್ತಿರುವ ಸಮಸ್ಯೆ ಕುರಿತು ಎಂ. ಬಿ. ಪಾಟೀಲ ಅವರನ್ನು ಭೇಟಿಯಾಗಿ ಗಮನ ಸೆಳೆದಾಗ ಅವರು ಕೂಡಲೇ ಸ್ಪಂದಿಸಿದ್ದಾರೆ.  ನಾಡಿನಲ್ಲಿ ಜಲ, ವೃಕ್ಷ ಮತ್ತು ಶಿಕ್ಷಣಕ್ಕೆ ಅವರು ಆದ್ಯತೆ ನೀಡುತ್ತಿದ್ದು, ಈಗ ದೇವರ ರೂಪದಲ್ಲಿ ಬಂದು ತಮ್ಮ ಮಕ್ಕಳು ವೈದ್ಯರಾಗುವ ಕನಸು ನನಸಾಗಲು ಕಾರಣರಾಗಿದ್ದಾರೆ.  ಅವರಿಗೆ ಸದಾ ಚಿರಋುಣಿಯಾಗಿರುವುದಾಗಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌