ಕಾನಿಪ ಸಮ್ಮೇಳನ: ಪತ್ರಕರ್ತ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಪ್ರಸಾದಾಲಯದಲ್ಲಿ ಊಟದ ವ್ಯವಸ್ಥೆ ಪರಿಶೀಲನೆ

ವಿಜಯಪುರ: ಕಾರ್ಯನಿರತ ಪತ್ರಕರ್ತರ 37ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದ ದರಬಾರ ಹೈಸ್ಕೂಲ್ ಒಳಾಂಗಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಭೋಜನಾಲಯಕ್ಕೆ ಪತ್ರಕರ್ತ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಹೆಸರನ್ನು ಹೆಸರಿಡಲಾಗಿದೆ.  ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ನೇತೃತ್ವದಲ್ಲಿ ಸಂಘದ ನಾನಾ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸುವ ಪತ್ರಕರ್ತರಿಗೆ ಉತ್ತರ ಕರ್ನಾಟಕ ವಿಜಯಪುರ ಶೈಲಿಯ ರುಚಿಕಟ್ಟಾದ ಆಹಾರ ಸೇವೆ ಒದಗಿಸಲು ಸಮ್ಮೇಳನದ ಆಹಾರ ಸಮಿತಿ ಎಲ್ಲ ತಯಾರಿ ಮಾಡಿಕೊಂಡಿದೆ ಎಂದು ಸಮಿತಿ ಮುಖಂಡ ಪ್ರದೀಪ ಕುಲಕರ್ಣಿ ಮಾಹಿತಿ ನೀಡಿದರು.

ಕಾನಿಪ ಸಮ್ಮೇಳನ ಭೋಜನಾಲಯದಲ್ಲಿ ಅಡುಗೆ ವ್ಯವಸ್ಥೆ ಪರಿಶೀಲನೆ ನಡೆಸಿದ ಶಿವಾನಂದ ತಗಡೂರು, ಮತ್ತೀತರ ಪತ್ರಕರ್ತರು

ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ತಗಡೂರ, ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಲ್ಲದೇ, ನೋಂದಣಿ ವ್ಯವಸ್ಥೆ ಹಾಗೂ ಇತರ ವ್ಯವಸ್ಥೆಗಳನ್ನೂ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಬೆನ್ನೂರ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರಗೌಡ ಪಾಟೀಲ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಾದ ಬಸವರಾಜ ಉಳ್ಳಾಗಡ್ಡಿ, ಅರವಿಂದ ಖಡೆಖಡೆ, ಶಿವಾನಂದ ಭುಂಯ್ಯಾರ, ಸಿ. ಬಿ. ವಾಡೇದ, ಮಾಧವರಾವ ಕುಲಕರ್ಣಿ, ವಿಜಯ ಸಾರವಾಡ, ಗುರು ಗದ್ದನಕೇರಿ, ಶಶಿಧರ ಮೆಂಡೆಗಾರ, ಶಾರದಳ್ಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌