ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ: ಬಸವನ ಬಾಗೇವಾಡಿ ತಾಲೂಕಿನ ಕಚೇರಿಗಳಿಗೆ ಭೇಟಿ ನೀಡಿದ ಡಾ. ದಾನಮ್ಮನವಕರ

ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಬಸವನ ಬಾಗೇವಾಡಿ ತಾಲೂಕಿಗೆ ನಾನಾ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಸವನ ಬಾಗೇವಾಡಿಯಲ್ಲಿ ಡಿಸಿ ಡಾ. ದಾನಮ್ಮನವರ ನಾನಾ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು

ಬಸವನ ಬಾಗೇವಾಡಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.  ಅಹವಾಲು ಕಾರ್ಯಕ್ರಮದಲ್ಲಿ ಜಮೀನು ಉತಾರೆ, ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ, ಅಕ್ರಮ ಮದ್ಯ ಮಾರಾಟ ತಡೆ, ಬಸ್ ವ್ಯವಸ್ಥೆ, ಬಸ್ ತಂಗುದಾಣ, ಸ್ಮಶಾನ ಭೂಮಿ ಮಂಜೂರು, ತಾಲೂಕಿನ ನಾಗೂರ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತ ನಿರ್ಮಾಣ, ಅನಧಿಕೃತ ಅಂಗಡಿಗಳ ತೆರವು, ರುದ್ರಭೂಮಿಗೆ ಮೂಲಭೂತ ಸೌಕರ್ಯ, ದಲಿತರ ಜಮೀನುಗಳಿಗೆ ರಸ್ತೆ ಹಾಗೂ ಸ್ಮಶಾನ, ಎಸ್.ಸಿ.ಪಿ/ ಟಿಎಸ್‍ಪಿ ಯೋಜನೆಯಡಿ ಸಾಲ ಮಂಜೂರು, ಸಂತೆ ಕಟ್ಟೆ ವಸೂಲಿ ರಿಯಾಯಿತಿ, ವಿಕಲಚೇತನ ವೃತ್ತಿನಿರತ ವಕೀಲರಿಗೆ ಸಹಾಯಧನ, ಕಿಡ್ನಿ ವೈಫಲ್ಯ ಮಗುವಿಗೆ ಚಿಕಿತ್ಸೆ ಸೇರಿದಂತೆ ಕಂದಾಯ, ಕೆಬಿಜೆಎನ್‍ಎಲ್, ತಾಲೂಕು ಪಂಚಾಯಿತಿ, ಅಬಕಾರಿ, ಕೆ ಕೆ ಆರ್ ಟಿ ಸಿ ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದ 30 ಅರ್ಜಿಗಳು ಸ್ವೀಕೃತವಾಗಿದ್ದು.  ಈ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಹಸೀಲ್ದಾರ ದುಂಡಪ್ಪ ಕೋಮಾರ, ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌