ಜಂಗಮ ಶಬ್ದಕ್ಕೆ ಅರ್ಥ ಬರುವಂತೆ ಜೀವನ ಸಾಗಿಸಿದ ಸಿದ್ದೇಶ್ವರ ಶ್ರೀಗಳು- ಶ್ರೀ ಗುರು ಬಸವಲಿಂಗ ಸ್ವಾಮೀಜಿ
ವಿಜಯಪುರ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವತಿಯಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಹಾಗೂ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದ ಆನಂದ ಮಹಲ್ ಸ್ಮಾರಕದಲ್ಲಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಜಯಪುರದ ಶ್ರೀ ಗುರು ಬಸವಲಿಂಗ ಸ್ವಾಮೀಜಿಗಳು ಗುರು ನಮನ ಸಲ್ಲಿಸಿ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಕರ್ಮಭೂಮಿ ವಿಜಯಪುರ ನಗರದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ […]
ನಾನೂ ಹಿಂದು, ನಮ್ಮಪ್ಪ ಹಿಂದು, ನನಗೆ ಸಿದ್ಧರಾಮಯ್ಯ ಎಂದು ಹೆಸರಿಟ್ಟಿದ್ದಾರೆ- ಸಿ. ಟಿ. ರವಿ ಹೇಳಿದಾಕ್ಷಣ ನಾನು ಮುಸ್ಲಿಮ್ ಆಗಿಬಿಡುತ್ತೇನಾ? ಸಿದ್ಧರಾಮಯ್ಯ ವಾಗ್ದಾಳಿ
ವಿಜಯಪುರ: ನಾನೂ ಹಿಂದು. ನಮ್ಮಪ್ಪನೂ ಹಿಂದು. ನನಗೆ ಸಿದ್ಧರಾಮಯ್ಯ ಎಂದು ಹೆಸರಿಟ್ಟಿದ್ದಾರೆ. ಸಿ. ಟಿ. ರವಿ ಹೇಳಿದಾಕ್ಷಣ ನಾನು ಮುಸ್ಲಿಂ ಆಗಿಬಿಡುತ್ತೇನಾ? ಎಂದು ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ನಾನು ಹಿಂದು. ನಮ್ಮಪ್ಪ ಹಿಂದು. ನಾನು ಹಿಂದು ಅಲ್ಲವಾ? ನಮ್ಮವ್ವ- ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? […]
ಸಾಮಾಜಿಕ ಜಾಲತಾಣಗಳು ನಿರಂತರ ವೈದ್ಯಕೀಯ ಶಿಕ್ಷಣ ಪ್ರಸರಣಕ್ಕೆ ಬಹುಪಯೋಗಿಯಾಗಿವೆ- ಡಾ. ವೈ. ಎಂ. ಜಯರಾಜ
ವಿಜಯಪುರ: ವೈದ್ಯಕೀಯ ಶಿಕ್ಷಣ ಮತ್ತು ಈ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳನ್ನು ಸಾಮಾಜಿಕ ಜಾಲತಾಣಗಳ ಕ್ರಾಂತಿಯಿಂದಾಗಿ ಅತೀ ಹೆಚ್ಚು ಜನರನ್ನು ಸಂಪರ್ಕಿಸಲು ಸಾಧ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಲಾಯಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೆಡಿಸೀನ್, ನ್ಯೂರಾಲಾಜಿ ಮತ್ತು ನ್ಯೂರೊಸರ್ಜರಿ ವಿಭಾಗದ ಆಶ್ರಯದಲ್ಲಿ ನಡೆದ ಮೂರ್ಛೆರೋಗದ ಜೊತೆ ಜೀವನ ಸಾಗಿಸುವ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(ಸಿಎಂಇ) ಕಾರ್ಯಕ್ರಮ ಉದ್ಘಾಟಿಸಿ […]
ಮಕ್ಕಳನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ- ಉಮಾಶ್ರಿ
ವಿಜಯಪುರ: ಮಕ್ಕಳನ್ನು ಸನ್ಮಾರ್ಗದಡೆಗೆ ಕರೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಚಿತ್ರ ನಟಿ ಮತ್ತು ಮಾಜಿ ಸಚಿವೆ ಉಮಾಶ್ರಿ ಹೇಳಿದ್ದಾರೆ. ನಗರದಲ್ಲಿ ಆಕ್ಸಫರ್ಡ್ ಐಐಟಿ ಓಲಂಪಿಯಾಡ್ ಶಾಲೆ ಆಯೋಜಿಸಿದ್ದ ದಿ ಇವನಿಂಗ್ ಆಫ್ ಮರ್ಯಾಲಿಟಿ ಹೆಸರಿನ ವಿಶೇಷ ಪರಿಕಲ್ಪನೆಯ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಮಕ್ಕಳಿಗೆ ಜನ್ಮ ನೀಡಿದರೆ ಸಾಲದು. ಅವರಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಂಸ್ಕಾರವಂತ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರು, ಶಿಕ್ಷಕರು, ಶಿಕ್ಷಣ […]
ಅಡುಗೆ ತಯಾರಿ ಕೇವಲ ಶಾಸ್ತ್ರವಷ್ಟೇ ಅಲ್ಲ, ಕಲೆಯೂ ಹೌದು: ಡಾ. ಎಂ. ಎಸ್. ಮದಭಾವಿ
ವಿಜಯಪುರ: ಮನುಷ್ಯನ ಬದುಕಿಗೆ ಅಗತ್ಯವಾದ ಅಡುಗೆ ತಯಾರಿ ಒಂದು ಶಾಸ್ತ್ರ ಅಷ್ಟೇ ಅಲ್ಲ ಕಲೆಯೂ ಹೌದು ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿ ಹೇಳಿದರು. ಇಂಟ್ಯಾಚ್ ಮತ್ತು ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಖಾನಾ ಖಜಾನಾ ಮೈ ಫುಡ್ ಹೇರಿಟೇಜ್ ಚಿತ್ರ ಬಿಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿನ ಅವಿಭಾಜ್ಯ ಅಂಗವಾದ ಆಹಾರ ತಯಾರಿಕೆಯ ಕಲೆಯನ್ನು ಚಿತ್ರದ ಮೂಲಕ ವ್ಯಕ್ತಪಡಿಸುವುದು […]