ಜಂಗಮ ಶಬ್ದಕ್ಕೆ ಅರ್ಥ ಬರುವಂತೆ ಜೀವನ ಸಾಗಿಸಿದ ಸಿದ್ದೇಶ್ವರ ಶ್ರೀಗಳು- ಶ್ರೀ ಗುರು ಬಸವಲಿಂಗ ಸ್ವಾಮೀಜಿ

ವಿಜಯಪುರ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವತಿಯಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಹಾಗೂ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದ ಆನಂದ ಮಹಲ್ ಸ್ಮಾರಕದಲ್ಲಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಶ್ರೀ ಸಿದ್ಧೇಶ್ವರ ಸ್ವಾಮೀಗಳಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿದರು

ಈ ಸಂದರ್ಭದಲ್ಲಿ ವಿಜಯಪುರದ ಶ್ರೀ ಗುರು ಬಸವಲಿಂಗ ಸ್ವಾಮೀಜಿಗಳು ಗುರು ನಮನ ಸಲ್ಲಿಸಿ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಕರ್ಮಭೂಮಿ ವಿಜಯಪುರ ನಗರದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ವಿಶೇಷ ಮುತುವರ್ಜಿ ವಹಿಸಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವತಿಯಿಂದ ಸಾಂಸ್ಕತಿಕ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಂಡು ಪೂಜ್ಯ ಗುರುಗಳ ನೆನಪು ತರುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸಿದ್ದೇಶ್ವರ ಶ್ರೀಗಳು ಈ ನಾಡು ಕಂಡ ಸಂತರು, ಮಾತೃಹೃದಯಿಗಳು ಮಾತನಾಡುವ ಮಹಾದೇವರು, ಜ್ಞಾನಯೋಗಿಗಳಾಗಿ ಜಗತ್ತಿಗೆ ಜ್ಞಾನದ ಬೆಳಕನ್ನು ಮಾನವ ಕುಲಕ್ಕೆ ನೀಡಿ ಬಯಲಿನಲ್ಲೇ ಬಯಲಾಗಿ, ಎಲ್ಲರ ಅಂತರಂಗದಲ್ಲಿ ಸದಾ ಸ್ಮರಣೀಯರಾಗಿದ್ದಾರೆ. ಪೂಜ್ಯರ ಬದುಕು ನಮ್ಮೆಲ್ಲರಿಗೂ ಆದರ್ಶ. ಶರಣ ಸಾಹಿತ್ಯದಲ್ಲಿ ಬರುವ ಜಂಗಮ ಎಂಬ ಶ್ರೇಷ್ಠ ಶಬ್ದ.ಪೂಜ್ಯ ಸಿದ್ದೇಶ್ವರ ಶ್ರೀಗಳು. ಅವರು ತಮ್ಮ ಜೀವನದ 65 ವರ್ಷಗಳ ಕಾಲ ಈ ನಾಡನ್ನು ಸುತ್ತಿ ಜ್ಞಾರ್ನಾಜನೆ ಮಾಡಿದ ಮಹಾತ್ಮರು. ಜಂಗಮ ಎಂದರೆ, ಜನನ-ಮರಣ ರಹಿತವಾಗಿರುವಂತಹ ಸದಾ ಸಂಚರಿಸಿ ಜನರಿಗೆ ಜ್ಞಾನ ಬೋಧನೆ ಮಾಡುವಂತಹ ಮಹಾತ್ಮರಿಗೆ ಜಂಗಮ ಎನ್ನುತ್ತಾರೆ. ಈ ಜಂಗಮ ಶಬ್ದಕ್ಕೆ ಅರ್ಥ ಬರುವಂತೆ ಜೀವನ ಸಾಗಿಸಿದವರು ಯಾರಾದರಿದ್ದರೆ ಅದು ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.

ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಸಂಚರಿಸಿ ಸದಾ ಜ್ಞಾನವನ್ನು ಬೋಧಿಸುವ ಮೂಲಕ ಶರಣ ಸಾಹಿತ್ಯದಲ್ಲಿ ಬರುವ ಶ್ರೇಷ್ಠವಾದ ಜಂಗಮ ಶಬ್ದಕ್ಕೆ ಅರ್ಥ ಕಲ್ಪಿಸಿ ಜೀವನ ಸಾಗಿಸಿದ ಸಿದ್ದೇಶ್ವರ ಶ್ರೀಗಳು ಹಳ್ಳಿಗೆ ಹೋಗಿ ಯಾವುದೊಂದು ಬಯಸದೇ ಜನರ ಮನದಲ್ಲಿ ಮನೆ ಮಾಡಿರುವ ಅಂಧಕಾರವನ್ನು ಹೊಡೆದೋಡಿಸಿ, ಜ್ಞಾನದ ದೀಪವನ್ನು ಹಚ್ಚಿ, ಮಾನವ ಕುಲದ ಮಲೀನವನ್ನು ತೊಳೆದು ಹಾಕಿದಂತಹ ಸಿದ್ದೇಶ್ವರ ಶ್ರೀಗಳ ಸಾಂಸ್ಕøತಿಕ ನಮನ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ಇತಿಹಾಸವನ್ನು ಮೆಲುಕು ಹಾಕಿ ನೋಡಿದಾಗ, 12ನೇ ಶತಮಾನದಲ್ಲಿ ಜಗಕ್ಕೆ ಬೆಳಕು ನೀಡಿದ ಬಸವೇಶ್ವರರು, ಜಿಲ್ಲೆಗೆ ಸೀಮಿತವಾಗದೇ ಜಗವನ್ನೇ ಬೆಳಗುವ ಜಗಜ್ಯೋತಿಯಾಗಿ, ಜಿಲ್ಲೆಯ ವಿಶೇಷತೆ, ಬೆಳಕಿಸಿದ್ದಾರೆ. ಈ ಜಿಲ್ಲೆ ಹತ್ತು ಹಲವಾರು ಮಹಾತ್ಮರ ಜಿಲ್ಲೆಯಾಗಿದೆ. ಈ ಶತಮಾನದಲ್ಲಿ ಸಿದ್ದೇಶ್ವರ ಶ್ರೀಗಳಂತಹ ಜ್ಞಾನ ಜ್ಯೋತಿ ಕೊಟ್ಟಂತಹ ವಿಜಯಪುರ ಜಿಲ್ಲೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಶರಣ ಸಿದ್ಧರಾಮರು ಹೇಳಿದಂತೆ ಮಾತು ಮತ್ತು ಕೃತಿಗಳಲ್ಲಿ ಒಂದಾಗಿದ್ದವರು ಮಹಾತ್ಮರು ಎಂಬಂತೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ತಮ್ಮ ಮೃದು ಮಾತಿನಿಂದ ಆಧಾತ್ಮಿಕ ಚಿಂತನೆಯಿಂದ ಅವರು ನಡೆದ ಆಚಾರ-ವಿಚಾರ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿವೆ. ಹೀಗಾಗಿ ಶ್ರೀಗಳನ್ನು ಸ್ಮರಿಸುವ ಮೂಲಕ ಅವರ ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಧರ್ಮವಾಗಿದೆ ಎಂದು ಹೇಳಿದರು.

ಸರಳಾತೀತ ಸರಳ ಬದುಕಿನಿಂದ ಸಮನ್ವಯ ಸಾಕಾರ ಮೂರ್ತಿಗಳಾಗಿ, ಬಿಳಿ ಖಾದಿ ಬಟ್ಟೆಯ ಕಿಸೆಯಿಲ್ಲದ ಬಿಳಿ ಅಂಗಿ, ಶಾಂತಚಿತ್ತವಾದ ನಗುಮುಖ. ಎಲ್ಲರ ವಂದನೆ ಸ್ವೀಕರಿಸಿ ಕೈ ಜೋಡಿಸಿ ಪ್ರತಿ ವಂದನೆ ಮಾಡುವಂತಹ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ಶ್ರೀಗಳನ್ನು ನಡೆದಾಡುವ ದೇವರು, ಎರಡನೇ ವಿವೇಕಾನಂದರು, ಆಧುನಿಕ ಬಸವಣ್ಣ, ಶಾಂತಮೂರ್ತಿ ಜ್ಞಾನಯೋಗಿ ಎಂದು ಹಲವಾರು ಹೆಸರಿಂದ ಕರೆಯುತ್ತಿದ್ದರು. ಪ್ರತಿನಿತ್ಯ ಈಗಲೂ ಸ್ಮರಿಸುತ್ತಿದ್ದಾರೆ ಎಂದು ಹೇಳಿದರು.

ಪ್ರತಿ ತಿಂಗಳು ಜಿಲ್ಲೆಯ ಸಂಸ್ಕøತಿ ಹಿರಿಮೆ ಉಳಿಸಿ, ಬೆಳೆಸಲು ಸಂರಕ್ಷಿಸಲು, ಸ್ಥಳೀಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಲು ಸಾಂಸ್ಕøತಿಕ ಸಂಜೆ ಕಾರ್ಯಕ್ರಮವನ್ನು ಪ್ರತಿ ತಿಂಗಳ ಮೊದಲನೇ ಶನಿವಾರ ಸಂಘಟಿಸಲಾಗುತ್ತಿದೆ. ಕಳೆದ ತಿಂಗಳು ಶ್ರೀಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಕಾರ್ಯಕ್ರಮ ಮೂಂದೂಡಲಾಗಿತ್ತು. ಮತ್ತೇ ಕಾರ್ಯಕ್ರಮವನ್ನು ಶ್ರೀಗಳಿಗೆ ಸಾಂಸ್ಕøತಿಕ ನಮನ ಸಲ್ಲಿಸುವ ಮೂಲಕ ಆರಂಭಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ಜೀವನ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ, ಈ ಸಾಂಸ್ಕೃತಿಕ ನಮನ, ಮಡಿವಾಳ ದೊಡ್ಡಮನಿ ಪಡಗಾನೂರ ಇವರಿಂದ ಹಾಗೂ ಚಿಕ್ಕ ಮಕ್ಕಳಿಂದ ‘ವಿಪಸನ ಯೋಗನಮನ’ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನದ ತುಣುಕುಗಳ ಪ್ರದರ್ಶನ, ವಿರೇಶ ವಾಲಿ ಹಾಗೂ ಸಂಗಡಿಗರಿಂದ ಸಂಗೀತ ನಮನ ಕಾರ್ಯಕ್ರಮ ಜರುಗಿತು. ಸಿದ್ದೇಶ್ವರ ಶ್ರೀಗಳಿಗೆ ಗೌರವಪೂರ್ವಕವಾಗಿ ಸಲ್ಲಿಸಿದ ಚಿತ್ರ ನಮನ ಕಾರ್ಯಕ್ರಮದಲ್ಲಿ ರಚಿಸಿದ ಕಲಾ ಕೃತಿಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.

ದೀಕ್ಷಾ ಬೀಸೆ ಹಾಗೂ ಸಂಗಡಿಗರಿಂದ ನೃತ್ಯ ಪ್ರದರ್ಶನದ ಮೂಲಕ ನಮನ, ಸಲ್ಲಿಸಿದರು. ಮುತ್ತುರಾಜ ಸಂಕಣ್ಣವರ ಅವರ ನಿರ್ದೇಶನದ ಜ್ಞಾನ ಯೋಗಿ ನಾಟಕವನ್ನು ಇಬ್ರಾಹಿಂಪುರದ ಆಕ್ಟ್ ಶಾರದಾ ಪಬ್ಲಿಕ್ ಶಾಲೆ ವತಿಯಿಂದ ಪ್ರಸ್ತುತಪ ಡಿಸಲಾಯಿತು.
ಕಾವ್ಯ ನಮನದಲ್ಲಿ ಡಾ.ಮಲ್ಲಿಕಾರ್ಜುನ ಮೇತ್ರಿ,ಹಾಗೂ ಮಂಜುನಾಥ ಜುನಗೊಂಡ ಇವರು ಕವನ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ ವಣಕ್ಯಾಳ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ. ಲೋಣಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌