ಸಾಮಾಜಿಕ ಜಾಲತಾಣಗಳು ನಿರಂತರ ವೈದ್ಯಕೀಯ ಶಿಕ್ಷಣ ಪ್ರಸರಣಕ್ಕೆ ಬಹುಪಯೋಗಿಯಾಗಿವೆ- ಡಾ. ವೈ. ಎಂ. ಜಯರಾಜ

ವಿಜಯಪುರ: ವೈದ್ಯಕೀಯ ಶಿಕ್ಷಣ ಮತ್ತು ಈ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳನ್ನು ಸಾಮಾಜಿಕ ಜಾಲತಾಣಗಳ ಕ್ರಾಂತಿಯಿಂದಾಗಿ ಅತೀ ಹೆಚ್ಚು ಜನರನ್ನು ಸಂಪರ್ಕಿಸಲು ಸಾಧ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಲಾಯಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೆಡಿಸೀನ್, ನ್ಯೂರಾಲಾಜಿ ಮತ್ತು ನ್ಯೂರೊಸರ್ಜರಿ ವಿಭಾಗದ ಆಶ್ರಯದಲ್ಲಿ ನಡೆದ ಮೂರ್ಛೆರೋಗದ ಜೊತೆ ಜೀವನ ಸಾಗಿಸುವ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(ಸಿಎಂಇ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿಎಂಇ ಕಾರ್ಯಕ್ರಮಗಳು ಇಂದು ವೈದ್ಯರಿಗೆ ಬಹುಪಯೋಗಿಯಾಗಿವೆ.  ಇಂಥ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದರಿಂದ ಈ ಕಾರ್ಯಾಗಾರಗಳಲ್ಲಿ ಭೌತಿಕವಾಗಿ ಪಾಲ್ಗೋಳ್ಳಲು ಸಾಧ್ಯವಾಗದ ವರಿಗೆ ಅನುಕೂಲವಾಗಿ ಮಾರ್ಪಟ್ಟಿವೆ.  ಇದರಿಂದ ಈ ಕ್ಷೇತ್ರಕ್ಕೆ ಸಂಂಧಿಸಿದ ವೈದ್ಯರು ಮತ್ತು ವಿದ್ಯಾರ್ಥಿಗಳಿಗೆ ಇಂದಿನ ಆಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ವಿದ್ಯಮಾನಗಳು, ಸಂಶೋಧನೆಗಳ ಜ್ಞಾನವನ್ನು ತಲುಪಿಸಲು ಅನುಕೂಲವಾಗಿದೆ ಎಂದು ಹೇಳಿದರು.

ಬಿ.ಎಲ್.ಡಿ.ಇ ಆಸ್ಪತ್ರೆಯ ಮೆಡಿಸೀನ್ ವಿಭಾಗದ ಮುಖ್ಯಸ್ಥ ಮತ್ತು ಸಿಎಂಇ ಸಂಘಟನಾ ಅಧ್ಯಕ್ಷ ಡಾ. ಶರಣ ಬಡಿಗೇರ ಮಾತನಾಡಿ, ಸಿಎಂಇ ಕಾರ್ಯಕ್ರಮಗಳಿಂದಾಗಿ ಮೂರ್ಛೆರೋಗದ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.

ಬೆಂಗಳೂರಿನ ರಾಮಯ್ಯ ವೈದ್ಯಕೀಯ ಕಾಲೇಜಿನ ನ್ಯೂರೊಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಬರಿ ಗಿರಿಶನ್ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ನ್ಯೂರೊಸರ್ಜನ್ ಡಾ. ಶಿವಶಂಕರ ಮರಜಕೆ ಅವರು ಮಾತನಾಡಿ, ಮೂರ್ಛೆರೋಗದ ಪತ್ತೆಯ ಮಹತ್ವ, ಅದರ ನಿರ್ವಹಣೆ ಮತ್ತು ಶಸ್ತ್ರಚಿಕಿತ್ಸೆಯ ಕುರಿತು ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಎಎನ್ಎಸ್ ಡೀನ್ ಡಾ. ಎಸ್. ವಿ. ಪಾಟೀಲನಾನಾ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಿ.ಎಲ್.ಡಿ.ಇ ಆಸ್ಪತ್ರೆಯ ಡಾ. ಬಸವರಾಜ ಬಡದಾಳ ವಂದಿಸಿದರು.

Leave a Reply

ಹೊಸ ಪೋಸ್ಟ್‌