ಮಣ್ಣನ ಮಕ್ಕಳ ಬೆನ್ನಿಗೆ ನಿಂತ ಜಿ. ಪಂ., ತೋಟಗಾರಿಕೆ ಇಲಾಖೆ- ರೈತರಿಂದ ನೇರವಾಗಿ ಗ್ರಾಹಕರಿಗೆ ನಮ್ಮ ವಿಜಯಪುರ ದ್ರಾಕ್ಷಿ ಬ್ರ್ಯಾಂಡ್ ಬಿಡುಗಡೆ- ಫೆ 16 ರಿಂದ 20ರ ವರೆಗೆ ದ್ರಾಕ್ಷಿ ಪ್ರದರ್ಶನ ಮಾರಾಟ

ವಿಜಯಪುರ: ದ್ರಾಕ್ಷಿ ಕಣಜ ಬಸವನಾಡು ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗೆ ಹೆಸರುವಾಸಿ.  ಇಲ್ಲಿ ಬೆಳೆಯುವ ಉತೃಷ್ಠ ಗುಣಮಟ್ಟದ ದ್ರಾಕ್ಷಿ ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಫೇಮಸ್ ಆಗಿದೆ.  ಹೀಗಾಗಿ ರೈತರು ಅಕ್ಕರೆಯಿಂದ ಬೆಳೆಯುವ ಸಕ್ಕರೆ ರುಚಿಯ ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ವಿಜಯಪುರ ತೋಟಗಾರಿಕೆ ಇಲಾಖೆ ರೈತರು ಬೆಳೆಯುವ ದ್ರಾಕ್ಷಿಯನ್ನು ನೇರವಾಗಿ ಗ್ರಾಹಕರಿಗೆ ಪೂರೈಸಲು ನಮ್ಮ ವಿಜಯಪುರ ದ್ರಾಕ್ಷಿ ಬಿಡುಗಡೆ ಮಾಡಿದೆ. ತೋಟಗಾರಿಕೆ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ ಶಿಂಧೆ ದ್ರಾಕ್ಷಿಯನ್ನು ಬಿಡುಗಡೆ ಮಾಡಿದರು. […]

ಶಾಂತಿನಿಕೇತನ ಶಾಲೆಯಲ್ಲಿ ಮಾತಾ-ಪಿತಾ ಪಾದಪೂಜಾ ಕಾರ್ಯಕ್ರಮ- ಪ್ರಜ್ಞಾನಂದ ಸ್ವಾಮೀಜಿ ಚಾಲನೆ

ವಿಜಯಪುರ: ನಗರದ ಪ್ರತಿಷ್ಠಿತ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಾತಾ-ಪಿತಾ ಪಾದಪೂಜಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜ್ಞಾನಯೋಗಾಶ್ರಮದ ಶ್ರೀ ಪ್ರಜ್ಞಾನಂದ ಸ್ವಾಮಿಗಳು, ವಿದ್ಯಾರ್ಥಿಗಳಿಗೆ ಪಾದಪೂಜೆಯ ವಿಧಿ-ವಿಧಾನಗಳನ್ನು ತಿಳಿಸಿದರು.  ಅಲ್ಲದೇ, ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ನೀಡಲು ಅನುಕಾಲವಾಗುತ್ತದೆ.  ಮಕ್ಕಳು ತಂದೆ, ತಾಯಿ, ಗುರು, ಹಿರಿಯರಿಗೆ ಗೌರವವನ್ನು ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು.  ಪೂಜೆ ಪ್ರಾರ್ಥನೆ ಮೊದಲಾದವುಗಳನ್ನು ಕಲಿಯಬೇಕು.  ನಮ್ಮ ಭಾರತೀಯ ಸಂಸ್ಕತಿ ಸಂಪ್ರದಾಯವನ್ನು ಮರೆಯಬಾರದು ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷೆ ಶೀಲಾ […]

ಬಸವನಾಡಿನಲ್ಲಿ ಮೊದಲ ಯಶಸ್ವಿ ಮೂತ್ರಪಿಂಡ ಕಸಿ- ಮೊಮ್ಮಗನಿಗೆ ಕಿಡ್ನಿ ನೀಡಿದ ಅಜ್ಜಿ- ಡಾ. ರವೀಂದ್ರ ಮದ್ದರಕಿ

ವಿಜಯಪುರ: ಬಸವನಾಡು ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ವೈದ್ಯರು ಮೂತ್ರಪಿಂಡ ಕಸಿಯನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯಶೋಧಾ ಆಸ್ಪತ್ರೆಯ ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಮದ್ದರಕಿ, ಈ ಶಸ್ತ್ರಚಿಕಿತ್ಸೆ ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಶಸ್ತ್ರಚಿಕಿತ್ಸೆಯ ಯಶಸ್ಸಿನಿಂದಾಗಿ ಈ ಭಾಗದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಬೇರೆ ಕಡೆಗೆ ಚಿಕಿತ್ಸೆಗೆ ಹೋಗುವುದನ್ನು ತಪ್ಪಿಸಲು ನರವಾಗಿದೆ.  ಅಲ್ಲದೇ, ಅಂಗಾಂಗ ಕಸಿ ಅಗತ್ಯವಿರುವವರಿಗೆ ಮತ್ತು […]

ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿ- ವಿಚ್ಛೇದನ ಕೋರಿ ಬಂದ ದಂಪತಿಗಳ ಮನವೊಲಿಕೆ ಸೇರಿ 7124 ಪ್ರಕರಣ ಇತ್ಯರ್ಥ

ವಿಜಯಪುರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿದೆ.  ಲೋಕ ಅದಾಲತ್‍ನಲ್ಲಿ ಒಟ್ಟು 7124 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ತಿಳಿಸಿದ್ದಾರೆ. ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ ದಂಪತಿಗಳಿಗೆ ತಿಳಿವಳಿಕೆ ನೀಡಿ, ಮನವೊಲಿಸುವ ಮೂಲಕ ವಿಚ್ಛೇದನದಿಂದ ಹಿಂದೆ ಸರಿದು, ಪರಸ್ಪರ ಉತ್ತಮ ಸಮನ್ವಯತೆಯಿಂದ ಜೀವನ ಸಾಗಿಸುವಂತೆ ತಿಳಿಹೇಳಿ ವ್ಯಾಜ್ಯವನ್ನು ಇತ್ಯರ್ಥಪಡಿಸಲಾಯಿತು.  ಅಲ್ಲದೇ, ಇನ್ನೊಂದು […]