ವಿಜಯಪುರ: ನಗರದ ಪ್ರತಿಷ್ಠಿತ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಾತಾ-ಪಿತಾ ಪಾದಪೂಜಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜ್ಞಾನಯೋಗಾಶ್ರಮದ ಶ್ರೀ ಪ್ರಜ್ಞಾನಂದ ಸ್ವಾಮಿಗಳು, ವಿದ್ಯಾರ್ಥಿಗಳಿಗೆ ಪಾದಪೂಜೆಯ ವಿಧಿ-ವಿಧಾನಗಳನ್ನು ತಿಳಿಸಿದರು. ಅಲ್ಲದೇ, ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ನೀಡಲು ಅನುಕಾಲವಾಗುತ್ತದೆ. ಮಕ್ಕಳು ತಂದೆ, ತಾಯಿ, ಗುರು, ಹಿರಿಯರಿಗೆ ಗೌರವವನ್ನು ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪೂಜೆ ಪ್ರಾರ್ಥನೆ ಮೊದಲಾದವುಗಳನ್ನು ಕಲಿಯಬೇಕು. ನಮ್ಮ ಭಾರತೀಯ ಸಂಸ್ಕತಿ ಸಂಪ್ರದಾಯವನ್ನು ಮರೆಯಬಾರದು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಶೀಲಾ ಸುರೇಶ ಬಿರಾದಾರ ಮಾತನಾಡಿ, ಭಾರತ ಪ್ರಪಂಚದ ಪ್ರಾಚೀನ ಸಂಸ್ಕತಿಯನ್ನು ಹೊಂದಿದೆ. ತಂದೆ- ತಾಯಿಯರನ್ನು ದೇವರೆಂದು ಪೂಜಿಸುತ್ತೇವೆ. ಪಾಲಕರು ಮಕ್ಕಳಲ್ಲಿ ನಮ್ಮ ಆಚಾರ ವಿಚಾರ ಪೂಜಾ ಪದ್ದತಿ ಒಳ್ಳೆಯ ಸಂಪ್ರದಾಯಗಳನ್ನು ಬೆಳೆಸಬೇಕು ಎಂದು ಹೇಳಿದರು.
ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ ಎಲ್ಲರಿಗೂ ಶುಭಾಶಯ ಕೋರಿದರು. ಶಿಕ್ಷಕರ ಪಾಲಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗೆ ಸನ್ಮಾನಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಂತಮ್ಮ ತಂದೆ- ತಾಯಿಯರ ಪಾದ ಪೂಜೆ ಮಾಡಿ ಸಿಹಿ ಹಂಚಿ ನಮಸ್ಕರಿಸಿ ಆಶೀರ್ವಾದ ಪಡೆದರು. ವಿದ್ಯಾರ್ಥಿನಿಯರಾದ ಪಲಕ ಬಾಫ್ನಾ, ಪ್ರತೀಕ್ಷಾ ಅಂಬಿಗೇರ ಮಾತನಾಡಿದರು. ಮಕ್ಕಳು ಶಿವ, ಪಾರ್ವತಿ, ಗಣಪತಿ, ಷಣ್ಮುಖ, ಶಿವಾಜಿ, ಜಿಜಾಬಾಯಿ ಇವರ ಛದ್ಮವೇಷ ಹಾಕಿ ಗಮನ ಸೆಳೆದರು.
ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ. ಎಚ್. ಸಗರ, ಅಶ್ವೀನ್, ಶಶಿಧರ ಲೋನಾರಮಠ, ಅನೀಲ, ಜ್ಯೋತಿ, ಮೊಹಸಿನಾ, ಅಪ್ಸರಾ, ರಾಜೇಶ್ವರಿ, ಶ್ವೇತಾ ಪಾಟೀಲ, ತಬಸ್ಸಮ್, ಸೀಮಾ ಸದಲಗಾ, ಹೀನಾಕೌಸರ, ಶ್ವೇತಾ ಜಿಂಗಾಡೆ, ಬೊರಮ್ಮ ಅಕ್ಕಿ, ಸರೋಜಾ ಕರ್ಕಳಿ, ಶಿಲ್ಪಾ, ಪ್ರೀತಿ, ದೀಪಾ ಮುಂತಾದವರು ಉಪಸ್ಥಿತರಿದ್ದರು.
ಪ್ರಾಚಾರ್ಯ ಶ್ರೀಧರ ಕುರಬೆಟ ಸ್ವಾಗತಿಸಿದರು. ಬಸವರಾಜ ರೆಬಿನಾಳ ನಿರೂಪಿಸಿದರು. ಮಧುಮತಿ ಪಡ್ತಾರೆ ವಂದಿಸಿದರು.