ಅರಕೇರಿ ಗ್ರಾಂ. ಪಂ. ಗೆ ನೂತನ ಅಧ್ಯಕ್ಷರಾಗಿ ಅನುಸೂಯ ಗೋವಿಂದ ರಾಠೋಡ, ಉಪಾಧ್ಯಕ್ಷರಾಗಿ ಕುಸುಮಾ ಪ್ರಕಾಶ ರಾಠೋಡ ಅವಿರೋಧ ಆಯ್ಕೆ

ವಿಜಯಪುರ: ತಿಕೋಟಾ ತಾಲೂಕಿನ ಅರಕೇರಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅನುಸೂಯ ಗೋವಿಂದ ರಾಥೋಡ ಮತ್ತು ಉಪಾಧ್ಯಕ್ಷರಾಗಿ ಕುಸುಮಾ ಪ್ರಕಾಶ್ ರಾಥೋಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಥೋಡ, ಜಿಓಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ನಿಂಗರಾಜ ಬೆಳ್ಳುಬ್ಬಿ, ಮಾಜಿ ಮಂಡಲ್ ಪ್ರಧಾನ ಸಿದ್ದಣ್ಣ ಸಕ್ರಿ, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹುಸೇನಸಾಬ ಮನಗೂಳಿ, ಗೋವಿಂದ ರಾಥೋಡ, ಸುರೇಶ ಭಂಡಾರಿ, ಸೀತಾರಾಮ ರಾಠೋಡ ಮುಂತಾದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

Leave a Reply

ಹೊಸ ಪೋಸ್ಟ್‌