ವಿಜಯಪುರ: ಮಹಿಳೆಯರು ಮತ್ತು ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಹರನಾಳ ಗ್ರಾಮದಲ್ಲಿ ನಡೆಯಿತು.
ನಗರದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ನಡೆದ ಈ ಶಿಬಿರದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯ ಸ್ತ್ರಿರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯರಾದ ಪ್ರೊ. ನೀಲಮ್ಮ ಪಾಟೀಲ, ಡಾ. ನಮಿತಾ ಗುಪ್ತಾ ಮಹಿಳೆಯರ ಆರೋಗ್ಯ ತಪಾಸಣೆ ನಡೆಸದಿರು.
ಚಿಕ್ಕಮಕ್ಕಳ ವಿಭಾಗದ ವೈದ್ಯರಾದ ಡಾ. ತ್ರಿಮಲ್ ಕುಲಕರ್ಣಿ, ಡಾ. ಕಿರಣಕುಮಾರ, ಡಾ. ಮಾನಸಿ, ಡಾ. ನುಪುರ ದಹಿಯಾ ಚಿಕ್ಕಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ 74 ಮಹಿಳೆಯರು ಮತ್ತತು 57 ಮಕ್ಕಳು ಸೇರಿದಂತೆ ಒಟ್ಟು 131 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಅಲ್ಲದೇ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ 13 ಮಹಿಳೆಯರು ಹಾಗೂ 5 ಮಕ್ಕಳಿಗೆ ಬೇರೆ ಕಡೆ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ಅಷ್ಟೇ ಅಲ್ಲ, 28 ಜನರಲ್ಲಿ ಮಧುಮೇಹ ಇರುವುದು ಪತ್ತೆಯಾಯಿತು.
ಈ ಶಿಬಿರದಲ್ಲಿ ಸಿಬ್ಬಂದಿಯಾದ ಶೃುತಿ ಎಚ್. ಕಾಂಚನಾ ಹಂದಿಗನೂರ, ಅನಿಲಕುಮಾರ ಶಿರಹಟ್ಟಿ ಮುಂತಾದವರು ಉಪಸ್ಥಿತರಿದ್ದರು.