ಯಶಸ್ವಿ ಮಹಿಳೆಯರು ಯುವತಿಯರಿಗೆ ಆದರ್ಶವಾಗಬೇಕು- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ದೇಶದ ನಾನಾ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಷ್ಟೇ ಸರಿಸಮನಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ರಂಗಗಳ ಯಶಸ್ವಿ ಮಹಿಳೆಯರು ಯುವತಿಯರಿಗೆ ಆದರ್ಶವಾಗಬೇಕು ಎಂದು ಲೋಕಸಭಾ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವರಾದ ರಮೇಶ ಜಿಗಜಿಣಗಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಕೇಂದ್ರ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‍ಎಸ್‍ಎಸ್ ಪ್ರಾದೇಶಿಕ ನಿರ್ದೇಶನಾಲಯಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ವತಿಯಿಂದ ವಿವಿಯ ಆವರಣದಲ್ಲಿ ಆಯೋಜಿಸಿರುವ ಐದು ದಿನಗಳ ರಾಜ್ಯ ಮಟ್ಟದ ಯುವಜನೋತ್ಸವ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ನೀವೆಲ್ಲಾ ಯಶಸ್ವಿ ಮಹಿಳೆಯರ ಜೀವನ ಸಾಧನೆಗಳನ್ನು ನಿಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರದಲ್ಲಿ ಇರುವುದು ಒಂದು ರೀತಿಯ ಹೆಮ್ಮೆಯ ವಿಷಯ.  ನಾನೊಬ್ಬ ಎನ್‍ಎಸ್‍ಎಸ್ ಸ್ವಯಂ ಸೇವಕನಾಗಿದ್ದೆ.  ನನಗೆ ಇವತ್ತು ಇಷ್ಟೆಲ್ಲಾ ಸ್ಥಾನಮಾನಗಳು ದೊರೆಯುವುದಕ್ಕೆ ಎನ್‍ಎಸ್‍ಎಸ್ ಕೂಡಾ ಕಾರಣ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಅವರು ಹೇಳಿದರು.

ಮಹಿಳಾ ವಿವಿಯಲ್ಲಿ ನಡೆಯುತ್ತಿರುವ ಐದು ದಿನಗಳ ಯುವಜನೋತ್ಸವ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು

ರಾಜ್ಯ ಎನ್ ಎಸ್ ಎಸ್ ಸಲಹಾ ಸಮಿತಿಯ ಸದಸ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಷ್ಕೃತ ಡಾ. ಜಾವಿದ ಜಮಾದಾರ ಮಾತನಾಡಿ, ಭಾರತ ದೇಶ ಅತೀ ಹೆಚ್ಚು ಯುವ ಜನಸಂಖ್ಯೆ ಹೊಂದಿರುವ ದೇಶ. ಯುವಕರ ಬೆಳವಣಿಗೆ ದೃಷ್ಠಿಯಿಂದ ಎನ್‍ಎಸ್‍ಎಸ್‍ನಂತಹ ಸಂಸ್ಥೆಗಳು ಮಹತ್ವದ ಕಾರ್ಯ ಮಾಡುತ್ತಿವೆ. ಉತ್ತಮ ತರಬೇತಿ ನೀಡಿ ರಾಷ್ಟ್ರ ಸೇವೆಗೆ ಅಣಿ ಮಾಡುವುದು ಎನ್ ಎಸ್ ಎಸ್ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ದೇಶದ ಅಭಿವೃದ್ದಿಯಲ್ಲಿ ನಮ್ಮ ಪಾಲು ನೀಡಬೇಕು. ಗಾಂಧೀಜಿಯವರ ಶ್ರಮದಾನ ಕಾಯಕದಂತೆ 1960 ರ ದಶಕದಲ್ಲಿ ಎನ್‍ಎಸ್‍ಎಸ್ ಕೋಶ ಆರಂಭವಾಗಿದ್ದು, ಇಲ್ಲಿಯವರೆಗೂ ಯುವಕರಲ್ಲಿ ಸೇವಾ ಮನೋಭಾವ ಬೆಳೆಸುತ್ತಿದೆ ಎಂದು ಹೇಳಿದ ಅವರು, ಪ್ರತಿಯೊಬ್ಬರು ಜೀವನದಲ್ಲಿ ಸೇವಾ ಮನೋಭಾವನೆ ಬೆಳಸಿಕೊಳ್ಳಿ. ಆದರ್ಶಯುತ ಸೇವಾ ಮನೋಭಾವನೆ ಬೆಳಸಿಕೊಂಡರೆ ಮಾತ್ರ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ.  ಸಮಯ ಪ್ರಜ್ಞೆ, ಶಿಸ್ತು, ದೃಢ ನಿರ್ಧಾರ ಮುಖ್ಯವಾದವು. ರಾಷ್ಟ್ರೀಯ ಸೇವಾ ಯೋಜನೆ ಕೋಶದಲ್ಲಿ ಇಚ್ಚಾಶಕ್ತಿ ತುಂಬಾ ಮುಖ್ಯ. ಸ್ವ-ಇಚ್ಛೆಯಿಂದ ಸ್ವಯಂ ಸೇವಕರಾಗಬೇಕು ಎಂದು ಅವರು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಅವರು, ಈ ದೇಶದ ಭವಿಷ್ಯ ಯುವಜನರ ಮೇಲಿದೆ.  ಯುವಜನತೆಗೆ ಕೌಶಲ್ಯ ತರಬೇತಿ ಮತ್ತು ಸಾಮಥ್ರ್ಯ ಗುರುತಿಸಲು ಬೇಕಾಗುವ ಕಾರ್ಯಗಳನ್ನು ಎನ್ ಎಸ್ ಎಸ್ ಕೋಶ ಮಾಡುತ್ತದೆ ಎಂದು ಹೇಳಿದರು.

ಎನ್ ಎಸ್ ಎಸ್ ಕೌಶಲ್ಯಗಳ ಅಭಿವೃದ್ದಿಗಾಗಿ ಹೊಸ ತಂತ್ರಜ್ಞಾನ, ಪಠ್ಯೇತರ ಚಟುವಟಿಕೆಗಳುÉ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೂ ಹೆಚ್ಚಿನ ಒತ್ತನ್ನು ನೀಡುತ್ತದೆ. ಸದೃಢ ವ್ಯಕ್ತಿತ್ವದಿಂದ ಜವಾಬ್ದಾರಿ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ನಿಕಾಯದ ಡೀನ್ ಪ್ರೊ. ರಾಜಕುಮಾರ್ ಮಾಲಿಪಾಟೀಲ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ. ತಹಮೀನಾ ಕೋಲಾರ, ಡಾ. ಕೆ. ಪಿ. ಸುರೇಶ, ಡಾ. ಅಮರನಾಥ ಪ್ರಜಾಪತಿ ಮತ್ತಿತರರು ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರರಿಂದ ಎನ್ ಎಸ್ ಎಸ್ ಗೀತೆ ಮತ್ತು ಮಹಿಳಾ ಧ್ಯೇಯಗೀತೆ ಹಾಡಿದರು.  ಕುಲಸಚಿವ ಪ್ರೊ. ಬಿ. ಎಸ್. ನಾವಿ ಸ್ವಾಗತಿಸಿದರು.  ಮುಖ್ಯ ನಿಲಯಪಾಲಕಿ ಡಾ. ಜ್ಯೋತಿ ಉಪಾಧ್ಯ ಪರಿಚಯಿಸಿದರು.  ಎನ್ ಎಸ್ ಎಸ್ ಕೋಶದ ಸಂಯೋಜನಾಧಿ ಪ್ರೊ. ಶಾಂತಾದೇವಿ ಟಿ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಅಶ್ವಿನಿ ಕೆ. ಎನ್. ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌