ದಾರ್ಶನಿಕ ಸರ್ವಜ್ಞರ ತ್ರಿಪದಿ-ಸರಳತೆ ಜನಮಾನಸದಲ್ಲಿ ಜನಪ್ರಿಯ- ಡಾ. ಶಂಕರಣ್ಣ ವಣಕ್ಯಾಳ

ವಿಜಯಪುರ: ಸರ್ವಜ್ಞರ ತ್ರಿಪದಿಗಳು ಸರಳತೆ ಹಾಗೂ ಪ್ರಾಸಬದ್ಧತೆಯಿಂದ ಜನಮಾನಸದಲ್ಲಿ ಇಂದಿಗೂ-ಎಂದೆಂದಿಗೂ ಜನಪ್ರಿಯವಾಗಿವೆ. ಸಮಾಜದಲ್ಲಿನ ಮೌಡ್ಯತೆ, ಅಂಕು-ಡೊಂಕುಗಳನ್ನು ತಮ್ಮ ತ್ರಿಪದಿಗಳ ಮೂಲಕ ತಿದ್ದುವ ಕಾರ್ಯ ಮಾಡಿದರು ಎಂದು ಅಪರ ಜಿಲಾಧಿಕಾರಿ ಡಾ. ಶಂಕರಣ್ಣ ವಣಕ್ಯಾಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿರ್ಭೀತ, ಸತ್ಯನಿಷ್ಠುರವಾದ ವ್ಯಕ್ತಿತ್ವ, ಅಗಾಧ ಪಾಂಡಿತ್ಯ, ಅಪಾರ ಜೀವನಾನುಭವವುಳ್ಳ ಸಂತ ಕವಿ ಸರ್ವಜ್ಞ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಏಳಿಗೆಗಾಗಿ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸೋಣ ಎಂದು ಹೇಳಿದರು. ವಚನ ಸಾಹಿತ್ಯ ಅತೀ ಕಷ್ಟಕರವಾದರೂ ಸರಳ ಭಾಷೆಯಲ್ಲಿ ವಚನಗಳ ಸತ್ವದ ಮೂಲಕ ಸಮಾಜದ ಮೂಢನಂಬಿಕೆ ತೊಡೆದು ಹಾಕುವ ನಿಟ್ಟಿನಲ್ಲಿ ಸರ್ವಜ್ಞರ ತ್ರಿಪದಿಗಳು ಕನ್ನಡದ ಅತ್ಯಂತ ಜನಪ್ರೀಯ ವಚನಗಳಾಗಿ ಇಂದಿಗೂ ಪ್ರಸ್ತುತ. ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ. ಅನ್ಯರಿಗೆ ಟೀಕೆ, ಟಿಪ್ಪಣಿ, ನಿಂದನೆ ಅನುಸರಿಸದೇ ಸಾಹಿತ್ಯದ ಮೂಲಕ ಅಂದಿನ ವಚನಕಾರರು ತಮ್ಮ ಕಾಯಕದೊಂದಿಗೆ ವಚನಗಳ ಮೂಲಕ ತಮ್ಮ ಜೀವನವನ್ನು ಸಮಾಜದ ಉದ್ಧಾರಕ್ಕಾಗಿ ಮೀಸಲಿಟ್ಟು ಹಗಲಿರುಳು ಶ್ರಮಿಸಿದರು
ಎಂದು ಶಂಕರಣ್ಣ ವಣಕ್ಯಾಳ ಹೇಳಿದರು.

ಸರ್ವಜ್ಞರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಶಂಕರಣ್ಣ ವಣಕ್ಯಾಳ ಪುಷ್ಪನಮನ ಸಲ್ಲಿಸಿದರು

ಪೂಜಾ ಎಸ್. ಕುಂಬಾರ ಸಂತ ಕವಿ ಸರ್ವಜ್ಞ ಕುರಿತು ಉಪನ್ಯಾಸ ನೀಡಿ, ಸರಳವಾದ ಸುಲಭ ಶೈಲಿಯಲ್ಲಿ ಉಪಮಾನ ದೃಷ್ಟಾಂತಗಳ ಮೂಲಕ ಜನ ಸಾಮಾನ್ಯರ ಮನಸ್ಸಿಗೆ ನಾಟುವಂತ ಸಂತ ಕವಿ ಸರ್ವಜ್ಞರ ವಚನಗಳು ಮತ್ತು ತ್ರಿಪದಿಗಳು ನಮಗೆ ಇಂದಿಗೂ ಕಾಣಸಿಗುತ್ತವೆ.  ಇವರು 16 ನೇ ಶತಮಾನದ ಶ್ರೇಷ್ಠ ವಚನಕಾರರಾಗಿದ್ದು, ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರಿನಲ್ಲಿ ತಂದೆ-ಬಸವರಸ, ತಾಯಿ-ಮಲ್ಲಕ್ಕ ದಂಪತಿಗಳಿಗೆ ಜನಿಸಿದ ಸಂತ ಕವಿ ಸರ್ವಜ್ಞರ ಮೂಲ ಹೆಸರು ಪುಷ್ಪದತ್ತ. ತಮ್ಮ ವಚನಗಳ ಮೂಲಕ ಜನರಲ್ಲಿ ಮೂಡನಂಬಿಕೆ ಹೊಡೆದೊಡಿಸಿ,ದೇಶ ಸಂಚಾರ ಕೈಗೊಂಡು, ಸರಳವಾದ ಭಾμÉಯ ವಚನಗಳಿಂದ ಸಮಾಜವನ್ನು ತಿದ್ದುವ ಕಾಯಕ ಮಾಡಿದವರು ಎಂದು ಹೇಳಿದರು.

ಸಂತ ಸರ್ವಜ್ಞ ಕವಿ ಪ್ರತ್ಯೇಕ ಜಾತಿಗೆ ಸಿಮೀತವಾಗಿಲ್ಲ, ಇಡೀ ನಾಡಿನ ಜನತೆಗೆ ಸಿಮೀತವಾದವರು. ಕನ್ನಡದ ಬಗೆಗೆ ಅಪಾರ ಅಭಿಮಾನ ಹೊಂದಿದ ಇವರು, ಕನ್ನಡ ಸಾಹಿತ್ಯದಲ್ಲಿಯೇ ಸುಲಲಿತವಾದ ಹಾಗೂ ಸುಲಭ ವಚನಗಳನ್ನು ನೀಡಿದ್ದಾರೆ. ತನ್ನನ್ನು ತಾನು ಜ್ಞಾನಿ ಎಂದು ಎಂದಿಗೂ ಹೇಳಿಲ್ಲ, ಜನರಿಂದಲೇ ಸಮಾಜ ಸುಧಾರಣೆಯಾಗುವುದು ಎಂಬ ತತ್ವವನ್ನು ದೇಶಕ್ಕೆ ತ್ರಿಪದಿಗಳ ಮೂಲಕ ಸಾರಿದರು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಡಾ. ಅರವಿಂದ ಕುಂಬಾರ, ಡಾ. ಎಸ್. ಪಿ. ಕುಂಬಾರ, ಎಸ್. ಎಸ್. ಕುಂಬಾರ, ಎಂ. ಎಂ. ಬನೋಶಿ, ಕೆ. ಎಲ್. ಕಟ್ಟಿಮನಿ, ಎಸ್.ಕೆ. ಬಳಗಾನೂರ, ಸದಾಶಿವ ಕುಂಬಾರ, ಎಸ್.ಕೆ. ಭಾಗ್ಯಶ್ರೀ, ಗೀತಾ ನಾಗೂರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಮಾಲವಿಕಾ ಮಹಿಪತಿ ಜೋಶಿ ವಚನ ಗಾಯನವನ್ನು ಪ್ರಸ್ತುತಪಡಿಸಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕ ಬಿ. ನಾಗರಾಜ ಸ್ವಾಗತಿಸಿ, ವಂದಿಸಿದರು.

Leave a Reply

ಹೊಸ ಪೋಸ್ಟ್‌