ಬಿಜೆಪಿ ಬೆನ್ನು ಹತ್ತಿದವರು ಉದ್ಧಾರವಾಗಿಲ್ಲ- ಅವರನ್ನು ಬೆಂಬಲಿಸಿ ಹಾಳಾದವರ ಪಟ್ಟಿ ನನ್ನ ಬಳಿಯಿದೆ- ಸುನೀಲಗೌಡ ಪಾಟೀಲ

ವಿಜಯಪುರ: ಬಿಜೆಪಿಯ ಬೆನ್ನುಹತ್ತಿದವರು ಯಾರೂ ಉದ್ಧಾರವಾಗಿಲ್ಲ.  ಅವರನ್ನು ಬೆಂಬಲಿಸಿ ಹಾಳಾದವರ ಪಟ್ಟಿ ನನ್ನ ಬಳಿ ಇದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಬಿಜೆಪಿ ದೌರ್ಜನ್ಯ ಮತ್ತು ಗೂಂಡಾಗಿರಿಯಿಂದ ಬೇಸತ್ತು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ಹೊನವಾಡದವರ ವಸ್ತಿಯ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.

ಬಿಜೆಪಿಯವರನ್ನು ಬೆನ್ನು ಹತ್ತಿದವರು ಯಾರಾದರೂ ಉದ್ಧಾರವಾಗಿದ್ದರೆ ಅವರ ಹೆಸರು ಹೇಳಿ.  ಅವರಿಂದ ಹಾಳಾದವರ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ.  ಗ್ರಾ. ಪಂ. ಚುನಾವಣೆಯಲ್ಲಿ ಇವರಿಂದ ಬೆಂಬಲ ಪಡೆದು ಪರಾಜಿತರಾದ ಅಭ್ಯರ್ಥಿಗಳು ಸಾಲಗಾರರಾಗಿದ್ದಾರೆ.  ಆದರೆ, ಇವರು ಮಾತ್ರ ಮೂರು ಚುನಾವಣೆಗೆ ಸ್ಪರ್ಧಿಸಿದ ನಂತರವೂ ಹೊಸದಾಗಿ ಹೊಲ ಖರೀದಿ ಮಾಡುತ್ತಿದ್ದಾರೆ.  ದೊಡ್ಡ ವಾಹನ ಖರೀದಿಸುತ್ತಿದ್ದಾರೆ.  ಇವರ ಮಕ್ಕಳು ರೂ.  50 ಲಕ್ಷ ಮೌಲ್ಯದ ಬೈಕ್ ಖರೀದಿಸುತ್ತಾರೆ.  ಬಿಜೆಪಿ ಕಾರ್ಯಕರ್ತರು ಯಾರಾದರೂ ರೂ. 20 ಲಕ್ಷ ಮೌಲ್ಯದ ಬೈಕ್ ಖರೀದಿಸಿದ್ದೀರಾ? ಇಂದು ಬಿಜೆಪಿ ಕಾರ್ಯಕರ್ತರ ಪರಿಸ್ಥಿತಿ ಏನಾಗಿದೆ? ಕಾರ್ಯಕರ್ತರ ಕಡೆಯಿಂದ ಇವರು ದೇಣಿಗೆ ಸಂಗ್ರಹಿಸುತ್ತಾರೆ.  ಬಂದ ಹಣದ ಜೊತೆಗೆ ಪಾರ್ಟಿ ಫಂಡ್ ಕೂಡ ಇಟ್ಟುಕೊಂಡು ದೊಡ್ಡ ವಾಹನ, ಹೊಲ, ಆಸ್ತಿ ಖರೀದಿ ಮಾಡುತ್ತ ಹೋಗುತ್ತಾರೆ.  ಇದರ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ.  ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಅವರು ಅವರು ಹೇಳಿದರು.

ನಿಮ್ಮ ಕಡೆಯಿಂದ ಒಳ್ಳೆಯ ಕೆಲಸ ಮಾಡುವ ಯೋಗ್ಯತೆ ಇಲ್ಲದಿದ್ದರೆ, ಜನರಿಗೆ ಕೆಡಕನ್ನು ಮಾಡಬೇಡಿ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲವೆಂದರೆ ಕಡೆಪಕ್ಷ ಸುಮ್ಮನಿರಿ.  ಅದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಪಡಿಸಬೇಡಿ.  ಸಮಾಜ ಸೇವೆ ಮಾಡುತ್ತೇವೆ.  ಒಳ್ಳೆಯದನ್ನು ಮಾಡುತ್ತೇವೆ ಎಂದು ಫೋಸು ಕೊಡುವುದನ್ನು ನಿಲ್ಲಿಸಿ ಎಂದು ಅವರು ಸಲಹೆ ನೀಡಿದರು.

ಕನ್ನಡಕ ಹಾಕಿಕೊಂಡರೆ ನಿಮ್ಮ ಗೂಂಡಾ ಇಮೇಜ್ ಸ್ವಲ್ಪ ಬದಲಾಗಬಹುದು ಎಂದು ಬಿಜೆಪಿ ನಾಯಕರಿಗೆ ಅವರ ಆಪ್ತ ಮಾರ್ಗದರ್ಶಕರೊಬ್ಬರು ಸಲಹೆ ನೀಡಿದ್ದಾರೆ.  ಹೀಗಾಗಿ ಆ ನಾಯಕರು ಈಗ ಚಸ್ಮಾ ಹಾಕಿಕೊಳ್ಳುತ್ತಿದ್ದಾರೆ.  ಈಗ ಸಂಭಾವಿತರ ರೀತಿ ಬಿಂಬಿಸಿಕೊಳ್ಳುವ ಅವರ ಪ್ರಯತ್ನ ನಗೆಪಾಟಲಿಗೀಡಾಗಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

ಬಾಬಾನಗರದ ಹೊನವಾಡದವರ ವಸ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ನಂತರ ಸುನೀಲಗೌಡ ಪಾಟೀಲ ಮಾತನಾಡಿದರು

ಈಗ ಬಾಬಾನಗರ ಶಾಂತವಾಗಿದೆ.  ಎಲ್ಲ ಕಡೆ ನೀರು ಬಂದಿದೆ.  ರೈತರು ಉತ್ತಮ ಬೆಳೆ ಬೆಳೆಯುತ್ತಿದ್ದಾರೆ.  ಇಂಥ ವಿರೋಧಿಗಳಿಗೆ ಮತ ಹಾಕಿದರೆ ನೀವೆಲ್ಲರೂ ಪೆÇಲೀಸ್ ಠಾಣೆಗಳಿಗೆ ಅಲೆದಾಡಬೇಕಾಗುತ್ತದೆ.  ಈ ಹಿಂದೆ ನಡೆದ ಜಗಳ, ಹೊಡೆದಾಟಂಥ ಘಟನೆಗಳು ಮರುಕಳಿಸುತ್ತವೆ.  ದಿನವಿಡೀ ಪೊಲೀಸ್ ಠಾಣೆಯ ಎದುರೇ ಇರಬೇಕಾಗುತ್ತದೆ.  ಹಗಲು ಕಂಡ ಭಾವಿಯಲ್ಲಿ ರಾತ್ರಿ ಬಿದ್ದಂತಾಗುತ್ತದೆ.  ಇಂಥ ಗೂಂಡಾಗಳನ ದೂರವಿಟ್ಟು ಒಳ್ಳೆಯವರಿಗೆ ಮತ ನೀಡಿದರೆ ನೆಮ್ಮದಿಯ ಬದುಕು ನಿಮ್ಮದಾಗುತ್ತದೆ.  ಬಾಬಾನಗರ ತಮ್ಮ ತವರುಮನೆ ಎಂದು ಈ ಹಿಂದೆ ಹೇಳುತ್ತಿದ್ದರು.  ಈಗ ಅವರ ತವರು ಮನೆ ಬೇರೆಯದಾಗಿದೆ ಎಂದರು.

ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಂಚಿದರೆ, ಮತಕ್ಷೇತ್ರದ ಬಡಜನರನ್ನು ನಿಮಗೆ ಸ್ಕೂಲ್ ಬ್ಯಾಗ್ ಖರೀದಿಸಲು ಯೋಗ್ಯತೆ ಇಲ್ಲವೇ ಎಂದು ಬಿಜೆಪಿಯವರು ಹಿಯಾಳಿಸುತ್ತಾರೆ ಎಂದು ಟೀಕಿಸಿದ ಸುನೀಲಗೌಡ ಪಾಟೀಲ ಅವರು, ಬಿಜೆಪಿಯವರೇ ನಿಮಗೆ ಅದನ್ನು ಕೊಡುವ ಯೋಗ್ಯತೆ ಇಲ್ಲ.  ಜನರನ್ನು ದಾರಿ ತಪ್ಪಿಸುವುದೇ ನಿಮ್ಮ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

ನೀರಾವರಿ ಯೋಜನೆಗಳಿಂದ ಗ್ರಾಮ, ಅಡವಿ ವಸ್ತಿಗಳು ಅಭಿವೃದ್ಧಿಯಾಗುತ್ತಿದ್ದರೇ ಅವರು ಇದೇ ಪ್ರದೇಶಗಳಿಗೆ ಬಂದು ಮದ್ಯದ ಅಂಗಡಿ ಹಾಕಲು ಮುಂದಾಗುತ್ತಾರೆ.  ಈ ಮೂಲಕ ತಾಳಿ ಹರಿಯುವ ಕೆಲಸವನ್ನು ಅವರು ಮಾಡುತ್ತಾರೆ.  ಕುಡಿತದಿಂದಾಗಿ ಬಹಳಷ್ಟು ಕುಟುಂಬಗಳು ಹಾಳಾಗಿವೆ.  ಎಷ್ಟೋ  ಒಳ್ಳೆಯ ಮನೆತನಗಳೂ ಬೀದಿಗೆ ಬಂದಿವೆ.  ಮದ್ಯ ಮಾರಾಟ ಬಿಟ್ಟರೆ ನೀವು ಬೇರೆ ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದೀರಾ? ಇವರು ಒಂದಾದರೂ ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ಸಾಬೀತು ಪಡಿಸಿದರೆ ಎಂ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಬಿಜೆಪಿ ತೊರೆದ ಮುಖಂಡರಾದ ಅರುಣ ಹೊನವಾಡ, ಬೀರಪ್ಪ ಗುಗದಡ್ಡಿ, ಮಾಳಪ್ಪ ವಿಜಾಪುರ, ವಿಠ್ಠಲ ಉಟಗಿ, ಸಾಬು ಖೋತ, ಕೆಂಚಪ್ಪ ಹೊನವಾಡ, ಪ್ರಜ್ವಲ ಹೊನವಾಡ, ಶಿವು ವಿಜಾಪುರ, ಸಾಬು ವಿಜಾಪುರ, ಶಿವಪ್ಪ ಸೊರಡಿ, ಸಾಬು ದನಗೊಂಡ, ಕಾಂತೇಶ ಎಸ್. ಹಂಜಗಿ, ರಸೂಲ ಗೌಂಡಿ, ಭೀಮು ಸಿಂದಗಿ, ಸತ್ಯೆಪ್ಪ ಉಟಗಿ, ಆಕಾಶ ಹೊನವಾಡ, ದರ್ಶನ ನಾವಿ, ಪ್ರಶಾಂತ ಹೂಗಾರ, ರಾವಸಾಬ ಬಿರಾದಾರ ಸೇರಿದಂತೆ 50ಕ್ಕೂ ಹೆಚ್ಚು ಜನರು ಕಾಂಗ್ರೆಸ್ಗಿಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಸುನೀಲಗೌಡ ಪಾಟೀಲ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಶುಭ ಕೋರಿದರು.

Leave a Reply

ಹೊಸ ಪೋಸ್ಟ್‌