ಲೋಹಗಾಂವ, ಸಿದ್ದಾಪುರ ಕೆ ಗ್ರಾ. ಪಂ. ಗಳಿಗೆ ಸಿಇಓ ರಾಹುಲ ಶಿಂಧೆ ಭೇಟಿ- ನಾನಾ ಕಾಮಗಾರಿಗಳ ಪರಿಶೀಲನೆ
ವಿಜಯಪುರ: ತಿಕೋಟಾ ತಾಲೂಕಿನ ಲೋಹಗಾಂವ ಮತ್ತು ಸಿದ್ಧಾಪುರ(ಕೆ) ಗ್ರಾ. ಪಂ. ಗಳಿಗೆ ಜಿಲ್ಲಾ ಪಂಚಾಯfತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಭೇಟಿ ನೀಡಿ ನಾನಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ ಶಿಂಧೆ ಅವರು, ಕಾಮಗಾರಿಗಳ ಗುಣ್ಣಮಟ್ಟದಲ್ಲಿ ಯಾವದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದೇ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಮುಖ್ಯವಾಗಿ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಅತ್ಯಂತ ಉತ್ತಮ ಗುಣಮಟ್ಟದಿಂದ ನಿರ್ವಹಣೆ ಮಾಡಬೇಕು. ಹೆಚ್ಚುವರಿ ಕ್ರಿಯಾ ಯೋಜನೆಗಳ ಬದಲಿಗೆ ಹಳೆ ವರ್ಷದ ಕ್ರಿಯಾ ಯೋಜನೆಗಳಲ್ಲಿರುವ […]
ಜಿ. ಪಂ. ಸಿಇಓ ರಾಹುಲ ಶಿಂಧೆ ಮುದ್ರಣಾಲಯಕ್ಕೆ ಭೇಟಿ: ಪರಿಶೀಲನೆ
ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಜಿ. ಪಂ. ಅಧೀನದಲ್ಲಿರುವ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗದ ಮುದ್ರಣಾಲಯಕ್ಕೆ ಭೇಟಿ ನೀಡಿ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿದರು. ನಗದು ಪುಸ್ತಕ, ಸ್ಟಾಕ್ ರಜಿಸ್ಟರ್, ಡೆಡ್‍ಸ್ಟಾಕ್ ರಜಿಸ್ಟರ !ಹಾಗೂ ಇತರೆ ಕಡತವನ್ನು ಪರಿಶೀಲಿಸಿದರು. ಮುದ್ರಣಾಲಯದಲ್ಲಿ ನಡೆಯುತ್ತಿರುವ ವಿವಿಧ ಪ್ರಿಂಟಿಂಗ್ ಕೆಲಸಗಳನ್ನು ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿದ್ದಲ್ಲದೆ, ಜಿಲ್ಲೆಯ ವಿವಿಧ ಕಛೇರಿಗಳಿಂದ ಬೇಕಾಗುವ ನಮೂನೆಗಳು, ಕರಪತ್ರಗಳು ಮತ್ತು ಇತರೆ ಅವಶ್ಯಕ ಪ್ರಿಂಟಿಂಗ್ ಕೆಲಸಗಳನ್ನು ಪಡೆದು ಕೆಲಸ ನಿರ್ವಹಿಸಬೇಕು […]
ಫೆ. 23ರಂದು ಬಬಲೇಶ್ವರದಲ್ಲಿ ಪ್ರಜಾಧ್ವನಿ ಯಾತ್ರೆ- ಆಧುನಿಕ ಭಗೀರಥನ ಪರ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಲಿರುವ ಸಿದ್ಧರಾಮಯ್ಯ
ವಿಜಯಪುರ: ಬಬಲೇಶ್ವರದಲ್ಲಿ ಫೆ. 23 ರಂದು ಗುರುವಾರ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಜಾಧ್ವನಿ ನಡೆಯಲಿದ್ದು, ಮತಕ್ಷೇತ್ರದ 75 ಸಾವಿರ ಜನರು ಪಾಲ್ಗೊಳ್ಳುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ಬಸ್‍ಸ್ಟ್ಯಾಂಡ್ ಹತ್ತಿರದ ನಿಡೋಣಿ ರಸ್ತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50 ಸಾವಿರ ಜನ ಕುಳಿತುಕೊಂಡು ನೋಡುವ ಬೃಹತ್ […]
ಅವಧಿ ಪೂರ್ವ ಜನಿಸಿದ, ಅತೀ ಕಡಿಮೆ ತೂಕದ ಅವಳಿ ಮಕ್ಕಳಿಗೆ ಚಿಕಿತ್ಸೆ ನೀಡಿ ಪೋಷಕರ, ಜನಮನಗೆದ್ದ ಬಿ.ಎಲ್.ಡಿ.ಇ ಆಸ್ಪತ್ರೆ ವೈದ್ಯರು
ವಿಜಯಪುರ: ಪೋಷಕರೂ ನಂಬಲು ಅಸಾಧ್ಯವಾದ ಮತ್ತು ಅವಧಿಪೂರ್ವ ಜನಿಸಿದ ಹಾಗೂ ಅತೀ ಕಡಿಮೆ ತೂಕ ಹೊಂದಿದ್ದ ಅವಳಿ ಮಕ್ಕಳನ್ನು ಅಕ್ಕರೆಯ ಆರೈಕೆಯಿಂದ ವೈದ್ಯರು ಗುಣಪಡಿಸಿ ಪೋಷಕರಿಗೆ ಹಸ್ತಾಂತರಿಸಿದ ಹೃದಯಸ್ಪರ್ಶಿ ಘಟನೆಗೆ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆ ಸಾಕ್ಷಿಯಾಗಿದೆ. ಹೆಣ್ಣು ಮಗು ಅನನ್ಯ ಮತ್ತು ಗಂಡು ಮಗು ಆಗಸ್ತ್ಯ(ಹೆಸರು ಬದಲಾಯಿಸಲಾಗಿದೆ)ರ ಆರೋಗ್ಯ ಸತತ 23 ದಿನಗಳ ಉತ್ತಮ ಆರೈಕೆಯಿಂದ ಈಗ ಸುಧಾರಿಸಿದ್ದು, ಕೆಕ್ ಕತ್ತರಿಸಿ ಪೋಷಕರಿಗೆ ಶುಭ ಕೋರಿ […]
ಶ್ರೀಹರಿ ಗೊಳಸಂಗಿಗೆ ಸಂದಿಗ್ಧತೆ- ಫೆ. 17 ಹೊರಡಿಸಲಾಗಿದ್ದ ಆದೇಶ ಫೆ. 18 ರದ್ದು- ಯಾವುದು ಗೊತ್ತಾ?
ವಿಜಯಪುರ: ಶ್ರೀಹರಿ ಗೊಳಸಂಗಿ ಅವರನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮುಂದುವರೆಸಿ ಫೆ. 17 ರಂದು ಹೊರಡಿಸಲಾಗಿದ್ದ ಆದೇಶವನ್ನು ಮರುದಿನವೇ ರದ್ದು ಪಡಿಸಿ ಮತ್ತೋಂದು ಆದೇಶ ಹೊರಡಿಸಲಾಗಿದೆ. ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮತ್ತು ಸದಸ್ಯರ ಅವಧಿಯನ್ನು ಫೆ. 17 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಸರಕಾರದ ಮುಂದಿನ ಆದೇಶದವರೆಗೆ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆತ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಆದರೆ, ಇದೇ ಅಧೀನ ಕಾರ್ಯದರ್ಶಿ ಫೆ. 18ರಂದು ಮೊದಲಿನ ಆದೇಶವನ್ನು ರದ್ದುಪಡಿಸಿ ಮತ್ತೋಂದು […]