ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಜಿ. ಪಂ. ಅಧೀನದಲ್ಲಿರುವ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗದ ಮುದ್ರಣಾಲಯಕ್ಕೆ ಭೇಟಿ ನೀಡಿ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿದರು.
ನಗದು ಪುಸ್ತಕ, ಸ್ಟಾಕ್ ರಜಿಸ್ಟರ್, ಡೆಡ್‍ಸ್ಟಾಕ್ ರಜಿಸ್ಟರ !ಹಾಗೂ ಇತರೆ ಕಡತವನ್ನು ಪರಿಶೀಲಿಸಿದರು. ಮುದ್ರಣಾಲಯದಲ್ಲಿ ನಡೆಯುತ್ತಿರುವ ವಿವಿಧ ಪ್ರಿಂಟಿಂಗ್ ಕೆಲಸಗಳನ್ನು ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿದ್ದಲ್ಲದೆ, ಜಿಲ್ಲೆಯ ವಿವಿಧ ಕಛೇರಿಗಳಿಂದ ಬೇಕಾಗುವ ನಮೂನೆಗಳು, ಕರಪತ್ರಗಳು ಮತ್ತು ಇತರೆ ಅವಶ್ಯಕ ಪ್ರಿಂಟಿಂಗ್ ಕೆಲಸಗಳನ್ನು ಪಡೆದು ಕೆಲಸ ನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕ ಸಿದರಾಯ ಎಂ. ಬಳೂರಗಿ ಅವರು ಮುದ್ರಣಾಲಯದಲ್ಲಿ ನಡೆಯುವ ಪ್ರಿಟಿಂಗ್ ಕೆಲಸಗಳ ಬಗ್ಗೆ ಸಿಇಓ ಅವರಿಗೆ ವಿವರಿಸಿದರು.
ಈ ವೇಳೆ ಮುದ್ರಣಾಲಯದ ಸಿಬ್ಬಂದಿ ಸಿ. ಎಸ್. ಬುರಾಣಪೂರ, ಮಹಾದೇವಿ ಅ. ಬಜಂತ್ರಿ ಮತ್ತು ವಿಜಯಪುರ ತಾಲೂಕ ಕೈಗಾರಿಕೆ ವಿಸ್ತರಣಾಧಿಕಾರಿ ಎಸ್. ಎಂ. ಪಾಟೀಲ ಉಪಸ್ಥಿತರಿದ್ದರು.