ಬಸವನ ಬಾಗೇವಾಡಿಯಲ್ಲಿ ಪ್ರಜಾಧ್ವನಿ ಯಾತ್ರೆ- ಶಾಸಕ ಶಿವಾನಂದ ಪಾಟೀಲ ಪರ ಭರ್ಜರಿ ಪ್ರಚಾರ ಕೈಗೊಂಡ ಸಿದ್ಧು, ಎಂಬಿಪಿ, ಪ್ರಕಾಶ ರಾಠೋಡ, ಯಶವಂತರಾಯಗೌಡ

ವಿಜಯಪುರ: ಬಸವಣ್ಣನವ ತವರು ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಭರ್ಜರಿಯಾಗಿ ಚಾಲನೆ ನೀಡಿದ್ದಾರೆ.  ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಹಾಗೂ ಇತರ ನಾಯಕರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೇಳಿದರು. ಮೂರು ತಾಸು ತಡವಾಗಿ ಬಂದಿದ್ದೇವೆ.  ನಿಮ್ಮ ತಾಳ್ಮೆ, ಸಹನೆ, ಶಾಂತಿ ನೋಡಿದರೆ ಎಷ್ಟು ನಮಸ್ಕಾರ ಹೇಳಿದರೂ ಕಡಿಮೆ.  ಸಮಯ […]

ಇನ್ನೊಂದು ತಿಂಗಳಲ್ಲಿ ಬಿಜೆಪಿ ಅಂಗಡಿ ಬಂದ್ ಆಗುತ್ತದೆ- ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅಭಿವೃದ್ಧಿಗೆ ನಾಂದಿ ಹಾಡಲಿದೆ- ಎಂ. ಬಿ. ಪಾಟೀಲ

ವಿಜಯಪುರ: ಇನ್ನೊಂದು ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಬಿಜೆಪಿ ಅಂಗಡಿ ಬಂದ್ ಆಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಶಾಸಕರು ಮೊದಲು ದೇವರ ಹಿಪ್ಪರಗಿಯಲ್ಲಿ ಇದ್ದರು.  ಇಲ್ಲಿಗೆ ಗುಳೆ ಬಂದಿದ್ದಾjz.  ಮುಂದೆ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ.  ರಾಜಕಾರಣದಲ್ಲಿ ರಾಜಕೀಯವಾಗಿ ರಾಜಕಾರಣ ಮಾಡೋಣ.  ಅವರದ್ದು ಒಂದು ಪಕ್ಷ, ನಮ್ಮದು ಒಂದು ಪಕ್ಷ ಇರುತ್ತದೆ.  ಆದರೆ, ಪೊಲೀಸರನ್ನು […]

ಬೊಮ್ಮಾಯಿ ಆ್ಯಂಡ ಟೀಂ ಅಲಿಬಾಬಾ ಹಾಗೂ ಚಾಲೀಸ್ ಚೋರ್ ರೀತಿ ಇದೆ- ಸಿದ್ಧರಾಮಯ್ಯ- ಇದು ನನ್ನ ಕೊನೆಯ ಚುನಾವಣೆ- ಸಿ. ಎಸ್. ನಾಡಗೌಡ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಟೀಂ ಅಲಿಬಾಬಾ ಹಾಗೂ ಚಾಲೀಸ್ ಚೋರ್ ರೀತಿ ಇದೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ಮಾತನಾಡಿದ ಅವರು, ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದರು. ಬೊಮ್ಮಾಯಿ ಆ್ಯಂಡ್ ಟೀಂ ಎಂದರೆ ಅಲಿಬಾಬಾ ಹಾಗೂ ಚಾಲೀಸ್ ಚೋರ್ ರೀತಿ ಇದೆ.  ಪೊಲೀಸ್ ನೇಮಕಾತಿಯಲ್ಲಿ ಲಂಚ, ವರ್ಗಾವಣೆಯಲ್ಲಿ ಲಂಚ, ಓಲ್ಲಿ ಹೋದರೂ ಲಂಚಾ, ಲಂಚಾ […]

ಈ ವರ್ಷ ಉತ್ತಮ ಮಳೆಯಿದೆ, ಕೊರೊನಾ, ವೃದ್ಧಾಶ್ರಮಗಳು ಕಡಿಮೆಯಾಗಲಿವೆ, ಭೂಕಂಪ, ಪ್ರಳಯದ ಆತಂಕವಿದೆ, ಸೈನಿಕರಿಗೆ ಗೆಲುವಿದೆ- ಬಬಲಾದಿ ಕಾರ್ಣಿಕ ಭವಿಷ್ಯ

ವಿಜಯಪುರ: ಕಾಲಜ್ಞಾನದ ಭವಿಷ್ಯಕ್ಕೆ ಹೆಸರಾಗಿರುವ ಬಸವನಾಡು ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದ ಹೊಳೆ ಬಬಲಾದಿ ಶ್ರೀ ಸದಾಶಿವ ಮಠಾಧೀಶ ಶ್ರೀ ಸಿದ್ಧರಾಮಯ್ಯ 2023-24ರ ಭವಿಷ್ಯ ನುಡಿದಿದ್ದು, ಅದರಲ್ಲಿನ ಬಹುತೇಕ ಅಂಶಗಳು ಜನಸಾಮಾನ್ಯರಿಗೆ ನೆಮ್ಮದಿ ತರುವಂತಿವೆ. ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಶ್ರೀ ಸದಾಶಿವ ಮುತ್ಯಾನ ಜಾತ್ರೆ ಪ್ರತಿ ವರ್ಷ ಮಹಾಶಿವರಾತ್ರಿಯಂದು ನಡೆಯುತ್ತಿದ್ದ, ಇಲ್ಲಿ ಮದ್ಯಾರಾಧನೆ ತಲೆತಲಾಂತರಗಳಿಂದಲೂ ಮುಂದುವರೆದುಕೊಂಡು ಬಂದಿದೆ.  ಈ ಹಿಂದೆ ಕೊರೊನಾ, ನಾನಾ ಬೆಂಕಿ, ಭೂಕಂಪ, ಜಲಪ್ರಳಯಗಳು, ರಾಜಕೀಯ ಪಲ್ಲಟಗಳ ಕುರಿತು ಇಲ್ಲಿನ ಕಾರ್ಣಿಕರು ನುಡಿದಿದ್ದ […]

ಓದಿನತ್ತ ಲಕ್ಷ್ಯ ವಹಿಸಿ ಉತ್ತಮ ಅಂಕ ಗಳಿಸಿ- ವಿದ್ಯಾರ್ಥಿಗಳಿಗೆ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಕರೆ

ವಿಜಯಪುರ: ಎಸ್. ಎಸ್. ಎಲ್. ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬಿಟ್ಟು ಪಠ್ಯಕ್ರಮದತ್ತ ಲಕ್ಷ್ಯ ವಹಿಸಿದರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು ಎಂದು ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಹೇಳಿದರು. ನಗರದ ಶ್ರೀ ಅಭಿನವ ವಿದ್ಯಾ ಸಂಸ್ಥೆಯ ಶ್ರೀ ಅಭಿನವ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಈಗ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ.  ಶೈಕ್ಷಣಿಕ ದೃಷ್ಟಿಯಿಂದ ಇದು ಸರಿಯಲ್ಲ. […]

ಲಡಾಖ್ ನಲ್ಲಿ -25°C ತಾಪಮಾನ, ಹೆಪ್ಪುಗಟ್ಟಿದ ಸರೋವರದ ಮೇಲೆ 21 ಕಿ. ಮೀ. ಮ್ಯಾರಾಥನ್: ರಾಜ್ಯದ ಸಿಪಿಐ ಮಹಾಂತೇಶ ಧಾಮಣ್ಣವರ ಮತ್ತೀತರರು ಭಾಗಿ

ವಿಜಯಪುರ: ಲಡಾಖ್ ನಲ್ಲಿ ನಡೆದ ಮೊದಲ ಫ್ರೋಜನ್ ಲೇಕ್ ಮ್ಯಾರಾಥಾನ್ ನಲ್ಲಿ ಕರ್ನಾಟಕದ ಪೊಲೀಸ್ ಅಧಿಕಾರಿ ಸಿಪಿಐ‌ ಮಹಾಂತೇಶ ಧಾಮಣ್ಣವರ ಸೇರಿ 15 ಜನ ಭಾಗಿಯಾಗಿದ್ದು, ಈ ಟ್ರಯಲ್ ರನ್ನಿಂಗ್ ಸ್ಪರ್ಧೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಸಮುದ್ರ ಮಟ್ಟದಿಂದ 13,852 ಕಿ. ಮೀ. ಎತ್ತರದಲ್ಲಿ ಮತ್ತು -25°C ತಾಪಮಾನ ಅಂದರೆ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಈ ಸ್ಪರ್ಧೆ ನಡೆಸಿದೆ. ಅದರಲ್ಲೂ ಭಾರತ ಮತ್ತು ಚೀನಾ ಗಡಿಯಲ್ಲಿರುವ ಪ್ಯಾಂಗಾಂಗ್ ಸರೋವರ ಸುಮಾರು 700 […]