ಇನ್ನೊಂದು ತಿಂಗಳಲ್ಲಿ ಬಿಜೆಪಿ ಅಂಗಡಿ ಬಂದ್ ಆಗುತ್ತದೆ- ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅಭಿವೃದ್ಧಿಗೆ ನಾಂದಿ ಹಾಡಲಿದೆ- ಎಂ. ಬಿ. ಪಾಟೀಲ

ವಿಜಯಪುರ: ಇನ್ನೊಂದು ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಬಿಜೆಪಿ ಅಂಗಡಿ ಬಂದ್ ಆಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಶಾಸಕರು ಮೊದಲು ದೇವರ ಹಿಪ್ಪರಗಿಯಲ್ಲಿ ಇದ್ದರು.  ಇಲ್ಲಿಗೆ ಗುಳೆ ಬಂದಿದ್ದಾjz.  ಮುಂದೆ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ.  ರಾಜಕಾರಣದಲ್ಲಿ ರಾಜಕೀಯವಾಗಿ ರಾಜಕಾರಣ ಮಾಡೋಣ.  ಅವರದ್ದು ಒಂದು ಪಕ್ಷ, ನಮ್ಮದು ಒಂದು ಪಕ್ಷ ಇರುತ್ತದೆ.  ಆದರೆ, ಪೊಲೀಸರನ್ನು ಬಿಟ್ಟು ದಬ್ಬಾಳಿಕೆ‌ ಮಾಡಿಸುವುದು ನಡೆಯುವುದಿಲ್ಲ.  ಇನ್ನೊಂದು ತಿಂಗಳಲ್ಲಿ‌ ನೀತಿ ಸಂಹಿತೆ ಬರುತ್ತದೆ, ಬಿಜೆಪಿ ಅಂಗಡಿ ಬಂದ್ ಆಗುತ್ತದೆ.  ಇಲ್ಲಿ ಸೇರಿದವರು ಒಂದೊಂದು ಓಟ್ ಹಾಕಿ ಎರಡೆರಡು ಓಟ್ ಹಾಕಿಸಿದರೆ ಸಾಕು ನಾಡಗೌಡರು ಗೆದ್ದು ಬರುತ್ತಾರೆ ಎಂದು ಹೇಳಿದರು.

ಪೀರಾಪುರ-ಬೂದಿಹಾಳ ನೀರಾವರಿ ಯೋಜನೆ ಮಾಡಿದ್ದು ನಾವು, ಅದಕ್ಕೆ ಬೊಮ್ಮಾಯಿ ಬಂದು ಅಡಿಗಲ್ಲು ಹಾಕುತ್ತಾರೆ.  ನಾವು ಮಾಡಿದ ಕೆಲಸಗಳಿಗೆ ಬಿಜೆಪಿಯವರು ಬಂದು ಪೂಜೆ ಮಾಡುತ್ತಾರೆ.  ಈಗ ಗಾಳಿ ಬೀಸಿದೆ, ನಾಡಗೌಡರಯ ಇದರಲ್ಲಿ ಕಡ್ಯಾಕ ಆಗುತ್ತಾರೆ.  ಇಷ್ಟೊಂದು ಜನ ಬಂದಿದ್ದು ನೋಡಿದರೆ ಬದಲಾವಣೆ ಬಯಸಿದ್ದೀರಿ ಎಂಬುದು ವಿಶ್ವಾಸ ಇದೆ ಎಂದು ಅವರು ಹೇಳಿದರು.

ಇಲ್ಲಿಯ ಜನಸ್ತೋಮ‌ ನೋಡಿದರೆ ಕಾಂಗ್ರೆಸ್ ಗೆಲುವು ಪಕ್ಕಾ ಆಗಿದೆ.  ಸಿದ್ದರಾಮಯ್ಯ ಸಾಹೇಬರು ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಕೊಟ್ಟ ಭಾಗ್ಯಗಳು ಜನರ ಮನದಲ್ಲಿವೆ.  ಭ್ರಷ್ಟಾಚಾರ ಬಿಜೆಪಿಯಲ್ಲಿ 40 % ಇದೆ, ಈಗ 50% ಆಗಿದೆ, ಚುನಾವಣೆ ಬಂದಾಗ 60-70 ಆಗುತ್ತದೆ.  ಗ್ಯಾಸ್, ಪೆಟ್ರೋಲ್, ಎಣ್ಣೆ ಎಲ್ಲಾ ಬೆಲೆ ಜಾಸ್ತಿ ಆಗಿವೆ.  ಮೋದಿಯವರ ಅಚ್ಚೆದಿನ್ ಬರಲಿಲ್ಲಾ, ಜನರು ತತ್ತರಿಸಿದ್ದಾರೆ.  ನೋಟಬುಕ್, ಪೆನ್ ಮೇಲೂ ಜಿ ಎಸ್ ಟಿ ಹಾಕಿದ್ದಾರೆ.  ಉದ್ಯೋಗ ಸಿಕ್ಕಿಲ್ಲ, ರೈತರಿಗೆ ಅನುಕೂಲ ಆಗಿಲ್ಲ.  ಮುದ್ದೇಬಿಹಾಳ ಕ್ಷೇತ್ರದ ಪಡೇಕನೂರ ಕರೆ ತುಂಬಿದ್ದರಿಂದ ಐದು ಹಳ್ಳಿ ಸೇರಿ ನೂರು ಕೋಟಿ ರೂಪಾಯಿ ಕಬ್ಬನ್ನು ರೈತರು ಬೆಳೆಯುವಂತಾಗಿದೆ ಎಂದು ಹೇಳಿದರು.

ಶಿವಾನಂದ ಪಾಟೀಲ ಹೇಳಿಕೆ

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಹಸಿದ ಹೊಟ್ಟೆಗೆ 10 ಕೆಜಿ ಅಕ್ಕಿ ಕೊಡುವ ಮೂಲಕ ಅನ್ನ ಕೊಟ್ಟವರು ಸಿದ್ದರಾಮಯ್ಯ.  ಆದರೆ ಬಿಜೆಪಿ ಬಂದು 5 ಕೆಜಿಗೆ ತಂದಿದೆ.  ಮೋದಿ 10 ಕೆಜಿ ಕೊಡುತ್ತೇವೆ ಅಂತಿದಾರೆ.  2013 ರಲ್ಲೆ ಸಿದ್ದರಾಮಯ್ಯ 10 ಕೆಜಿ ಕೊಟ್ಟಿದಾರೆ.  ನೀವು ಮನೆಗೆ ಹೋಗಿ ಎಂದು ಅವರಿಗೆ ಹೇಳಬೇಕು.  ಬರುವ ದಿನದಲ್ಲಿ ಕಾಂಗ್ರೆಸ್ ಗೆ ಅಧಿಕಾರ, ಅವಕಾಶ ಕೊಟ್ಟರೆ ರೂ. 2 ಲಕ್ಷ ಕೋಟಿ ಖರ್ಚುಮಾಡಿ ನೀರಾವರಿ ಅಭಿವೃದ್ಧಿ ಮಾಡಲಿದ್ದಾರೆ.  ನಾವು ಬಂದ 24 ಗಂಟೆಯಲ್ಲಿ ಕೃಷ್ಣಾ ವ್ಯಾಜ್ಯ ಬಗೆ ಹರಿಸುತ್ತೇವೆ ಎಂದು ಬೊಮ್ಮಾಯಿ, ಯಡಿಯೂರಪ್ಪ ಸರಕಾರ ಹೇಳಿತ್ತು.  ಆದರೆ ನಾಲ್ಕು ವರ್ಷ ಮುಗಿದೇ ಹೋಯ್ತು, ಅವರಿಂದ ಏನು ಮಾಡೋಕೆ ಆಗಿಲ್ಲ ಎಂದು ಹೇಳಿದರು.

ಮುದ್ದೇಬಿಹಾಳದ ಶಾಸಕರೇ ಕಾಂಟ್ರಾಕ್ಟರ್, ಶಾಸಕರದ್ದೆ ಖಡಿ ಮಶೀನ್ ಆಗಿವೆ.  ಅದು ಹಾಗೇ ಆಗಬಾರದು.  ನಿಮ್ಮ ಕ್ಷೇತ್ರದಲ್ಲೂ ಸೀರೆ, ವಾಚ್ ಬಂದಿವೆ, ಇನ್ಮುಂದೆ ಕುಕ್ಕರ್ ಬರಬಹುದು.  ಮನೆಯಲ್ಲಿ ಕೂತರೂ ಸಿ. ಎಸ್. ನಾಡಗೌಡ ಆರಿಸಿ ಬರ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಮುದ್ದೇಬಿಹಾಳ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೋಂಡ ಕಾಂಗ್ರೆಸ್ ಮುಖಂಡರು

ಜಮೀರ್ ಅಹ್ಮದ ಖಾನ್ ಹೇಳಿಕೆ

ಶಾಸಕ ಜಮೀರ್ ಅಹಮ್ಮದ್ ಖಾನ್ ಉರ್ದುವಿನಲ್ಲಿ ಭಾಷಣ ಮಾಡಿದರು.  ಚುನಾವಣೆ ಬಂದಾಗ ಅಭಿವೃದ್ಧಿ ಕೆಲಸ ತೋರಿಸಿ ನಾವು ಓಟ್ ಕೇಳುತ್ತೇವೆ.  ಆದರೆ ಬಿಜೆಪಿ ಹಿಂದೂ ಮುಸಲ್ಮಾನ್ ಜಗಳ ಹಚ್ಚುತ್ತದೆ.  ಸಿದ್ದರಾಮಯ್ಯ ಸಿಎಂ ಆಗುವ ಮೊದಲು ಅಲ್ಪಸಂಖ್ಯಾತರ ಅನುದಾನ ರೂ. 400 ಕೋಟಿ ಅನುದಾನ ಇತ್ತು.  ನಂತರದಲ್ಲಿ ಸಿದ್ದರಾಮಯ್ಯ ಸಿಎಂ ಆದ ಬಳಿಕ ರೂ. 100 ಕೋಟಿ ಅನುದಾನ ಕೊಟ್ಟರು.  ಸಿದ್ದರಾಮಯ್ಯ ಸಿಎಂ ಆಗುವ ಮೊದಲು ಶಾದಿ ಮಹಲ್‌ಗೆ ಅನುದಾನ ಕೊಟ್ಟಿರಲಿಲ್ಲ.  ಸಿಎಂ ಆದ ಬಳಿಕ ತಾಲೂಕಿಗೊಂದರಂತೆ ಒಂದೊಂದು ಕೋಟಿ ರೂಪಾಯಿ ವಚ್ಚದಲ್ಲಿ ಶಾದಿ ಮಹಲ್ ಕೊಟ್ಟಿದ್ದಾರೆ.  ಬಡವರಿಗೆ ಶಾದಿ ಭಾಗ್ಯ ಕೊಟ್ಟಿದಾರೆ.  ಟಿಪ್ಪು ಜಯಂತಿ ಮಾಡಿದ್ದು ನಮ್ಮ ಸಿದ್ದರಾಮಯ್ಯ.  ಮುಂದೆ ಟಿಪ್ಪು ಸುಲ್ತಾನ ಜಯಂತಿ ಅದ್ದೂರಿಯಿಂದ ಮಾಡುತ್ತೇವೆ ಎನ್ನೊ ಮೂಲಕ ಮತ್ತೇ ಅಧಿಕಾರಕ್ಕರ ಬರುವ ಭರವಸೆ ಇದೆ.  ಹಿಜಾಬ್, ಲೌಡ್ ಸ್ಪೀಕರ್, ಹಲಾಲ್ ಕಟ್ ಈ ಎಲ್ಲಾ ವಿಚಾರ ಮಾತನಾಡುವವರು ಸಿದ್ದರಾಮಯ್ಯ.  ಬಿಜೆಪಿಯವರು ಹಿಂದೂ ಮುಸ್ಲಿಂ ಅಂತಾರೆ ಎಂದು ಹೇಳಿದರು.

ವಿಜಯಾನಂದ ಕಾಶಪ್ಪನವರ ಹೇಳಿಕೆ

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಬಡವರ ಭಾಗ್ಯವಿಧಾತ ಯಾರಾದರೂ ಇದ್ದರೂ ಅದು ಸಿದ್ದರಾಮಯ್ಯ.  ಐದು ವರ್ಷದ ಹಿಂದೆ ಮುದ್ದೇಬಿಹಾಳದಲ್ಲಿ ಕೋಣ ಬಿಟ್ಟುಕೊಂಡಿರಿ.  ಅದು ತಿಂದು ಕೊಬ್ಬಿದೆ. ಇನ್ನೆರಡು ತಿಂಗಳಲ್ಲಿ ದ್ಯಾಮವ್ವನ ಜಾತ್ರೆ ಇದೆ.  ಆಗ ಅವಗ ಸುಣ್ಣದ ನೀರು ಕುಡಸರಿ.  ಎಲ್ಲರಿಗೂ ಅಂವಾ ಸುಣ್ಣದ ನೀರು ಕುಡಿಸಿದ್ದ, ಈಗ ನೀವು ಅವಗ ನೀರು ಕುಡಸರಿ.  ಮತ್ತೆ ನಮ್ಮ ಟಗರು ಬಂದೇ ಬರುತ್ತದೆ.  ಆಗ ನಾವು ಬರ್ತಿವಿ, ಈ ಕೊಣವನ್ನು ನೋಡಿಕೊಳ್ಳೋಣ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ಮುಖಂಡರಾದ ಎಐಸಿಸಿ ಕಾರ್ಯದರ್ಶಿ ವಿಶ್ವನಾಥ, ಪಕ್ಷದ ಜಿಲ್ಲಾಧ್ಯಕ್ಷ ರಾಜು ಆಲಗೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರು ತಾರನಾಳ, ಮಹಿಬೂಬ ಚೋರಗಸ್ತಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಎಂ.ಎ.ಮುದ್ದೇಬಿಹಾಳ, ಆರ್.ಬಿ.ಪಾಟೀಲ, ಶಶಿಕಾಂತ ಮಾಲಗತ್ತಿ, ಶಿವು ಶಿವಪೂರ, ಪಲ್ಲವಿ ನಾಡಗೌಡ, ಶೋಭಾ ಶಳ್ಳಗಿ, ಸಂಗೀತಾ ನಾಡಗೌಡ, ನೀಲಮ್ಮ ಮೇಟಿ, ಸಿದ್ದಣ್ಣ ಮೇಟಿ, ಬಾಪೂರಾಯ ದೇಸಾಯಿ, ಶಿವಪ್ಪಗೌಡ ತಾತರಡ್ಡಿ, ಐ.ಬಿ.ಪಾಟೀಲ, ಕಶೆಟ್ಟಿ, ಸದ್ದಾಂ ಕುಂಟೋಜಿ, ಮಹ್ಮದರಫೀಕ ಶಿರೋಳ, ಪೃಥ್ವಿರಾಜ ನಾಡಗೌಡ, ಚಿನ್ನು ನಾಡಗೌಡ, ಅಲ್ಲಾಭಕ್ಷ ನಾಯ್ಕೋಡಿ, ಅಲ್ಲಾಭಕ್ಷ ಢವಳಗಿ, ಕಾಮರಾಜ ಬಿರಾದಾರ, ಎಂ.ಕೆ.ಮುತ್ತಣ್ಣವರ್, ಶೋಭಾ ಕಟ್ಟಿಮನಿ, ರಾಜು ಕಲಬುರ್ಗಿ, ನಿವೃತ್ತ ಎಸ್ಪಿ ಕಟ್ಟಿಮನಿ, ಸತೀಶ ಓಸ್ವಾಲ, ಪ್ರಭು ಮದರಕಲ್, ಬಿ.ಎಸ್.ಪಾಟೀಲ ಯಾಳಗಿ, ಪ್ರಭುಗೌಡ ಪಾಟೀಲ, ಆನಂದಗೌಡ ದೊಡಮನಿ, ಟಿಕೇಟ್ ಆಕಾಂಕ್ಷಿಗಳಾಗಿರುವ ಎಂ.ಎನ್.ಮದರಿ, ಎಸ್.ಎಸ್.ಹುಲ್ಲೂರ, ಕಾಶಿಮಪಟೇಲ ಪಾಟೀಲ, ಅಮರೇಶ ಗೂಳಿ, ರಾಮಣ್ಣ ರಾಜನಾಳ, ವೆಂಕಟೇಶ ಪಾಟೀಲ, ಬಿ.ಎಂ.ಸಜ್ಜನ ಸೇರಿ 65 ಜನ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌