ಬಸವನ ಬಾಗೇವಾಡಿಯಲ್ಲಿ ಪ್ರಜಾಧ್ವನಿ ಯಾತ್ರೆ- ಶಾಸಕ ಶಿವಾನಂದ ಪಾಟೀಲ ಪರ ಭರ್ಜರಿ ಪ್ರಚಾರ ಕೈಗೊಂಡ ಸಿದ್ಧು, ಎಂಬಿಪಿ, ಪ್ರಕಾಶ ರಾಠೋಡ, ಯಶವಂತರಾಯಗೌಡ

ವಿಜಯಪುರ: ಬಸವಣ್ಣನವ ತವರು ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಭರ್ಜರಿಯಾಗಿ ಚಾಲನೆ ನೀಡಿದ್ದಾರೆ. 

ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಹಾಗೂ ಇತರ ನಾಯಕರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೇಳಿದರು. ಮೂರು ತಾಸು ತಡವಾಗಿ ಬಂದಿದ್ದೇವೆ.  ನಿಮ್ಮ ತಾಳ್ಮೆ, ಸಹನೆ, ಶಾಂತಿ ನೋಡಿದರೆ ಎಷ್ಟು ನಮಸ್ಕಾರ ಹೇಳಿದರೂ ಕಡಿಮೆ.  ಸಮಯ 9.50 ಆಗಿದೆ.  ನೀವೆಲ್ಲ ಅರ್ಧ ಗಂಟೆ ಇರ್ತಿವಿ ಅಂದ್ರೆ ಮಾತಾಡ್ತಿನಿ.  ಸಮಯ ಆಗಿದೆ ಎಂದ್ರೆ ಕಡಿಮೆ ಮಾತಾಡ್ತಿನಿ ಎಂದು ಹೇಳಿದರು.

ನಾವು 169 ಭರವಸೆ ಕೊಟ್ಟಿದ್ದೆವು.  ಐದು ವರ್ಷಗಳಲ್ಲಿ 158 ಭರವಸೆ ಇಡೇರಿಸಿದ್ದೇವೆ. ಅಲ್ಲದೆ, 30 ಹೆಚ್ಚುವರಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ.  ಸರಕಾರಿ ಕಚೇರಿಗಳಲ್ಲಿ ಮಹಾತ್ಮಾಗಾಂಧಿ, ಅಂಬೇಡ್ಕರ್ ಫೋಟೊ ಇತ್ತು.  ನಾನು ಸಿಎಂ ಆದ ನಂತರ ಅದರ ಜೊತೆಗೆ ಬಸವಣ್ಣನವರ ಫೋಟೊ ಇರಬೇಕು ಎಂದು ಆದೇಶ ಮಾಡಿದ್ದೇನೆ ಎಂದು ಅವರು ಹೇಳಿದರು.

ಬಸವನ ಬಾಗೇವಾಡಿಯಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೋಂಡ ಕಾಂಗ್ರೆಸ್ ಮುಖಂಡರು

ನಿಮ್ಮೆಲ್ಲರ ಜನಪ್ರೀಯ ಶಾಸಕ ಶಿವಾನಂದ‌ ಪಾಟೀಲ.  ನಾನು ಸಿಎಂ ಆಗಿದ್ದಾಗ ಸಮಿತಿ ಮಾಡಿದ್ದೆ.  ಆ ಸಮಿತಿ ಅನುಭವ ಮಂಟಪವನ್ನು ಪುನರ್ ನಿರ್ಮಾಣ ಮಾಡಲು ರೂ. 650 ಕೋ. ಹಣ ಖರ್ಚು ಮಾಡಿ ನಿರ್ಮಿಸಬೇಕು ಎಂದು ವರದಿ ಕೊಟ್ಟಿದ್ದರು.  ಕರ್ನಾಟಕದಲ್ಲಿ ಶೇ. 100ಕ್ಕೆ 100ರಷ್ಟು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ.  ಅರ್ಧವಾಗಿರುವ ಅನುಭವ ಮಂಟಪವನ್ನು ಪೂರ್ಣಗೊಳಿಸಿ ನಾನೇ ಅದನ್ನು ಉದ್ಘಾಟನೆ ಮಾಡುತ್ತೇನೆ.  ಜೆ. ಎಚ್. ಪಟೇಲ ಕಾಲದಲ್ಲಿ ನಾವೇ ಕೂಡಲ ಸಂಗಮ ಅಭಿವೃದ್ಧಿ ಮಾಡಿದ್ದೇವೆ.  ನಾವು ದೆಹಲಿಯಲ್ಲಿರುವ ಅಕ್ಷರಧಾಮದ ಮಾದರಿಯಲ್ಲಿ ಕೂಡಲ‌ ಸಂಗಮದಲ್ಲಿ ಮಾಡಲು ಹಣ ಬಿಡುಗಡೆ ಮಾಡಿದ್ದೇವೆ.  ನಾವು ಅಧಿಕಾರಕ್ಕೆ ಬಂದಮೇಲೆ ಮೊದಲ ಕೆಲಸವೇ ಬಸವನ‌ ಬಾಗೇವಾಡಿಯ ಬಸವಣ್ಣನ ಅಭಿವೃದ್ಧಿ ಪ್ರಾಧಿಕಾರ ಮಾಡೋಣ ಎಂದು ಸಿದ್ಧರಾಮಯ್ಯ ಆಶ್ವಾಸನೆ ನೀಡಿದರು.

ನಾನು ಬಸವಣ್ಣನವರ ವಿಚಾರಧಾರೆಯಿಂದ ನಾನು ಆಕರ್ಷಿತನಾಗಿದ್ದೇವೆ.  ನಾನು ಬಸವಣ್ಣನವರ ಅನುಯಾಯಿ‌.  ಬುದ್ದ, ಬಸವ, ಅಂಬೇಡ್ಕರ್, ಗಾಂಧೀಜಿ ಹೇಳಿದಂತೆ ಮಾಡುವುದು ನಮ್ಮ ಕರ್ತವ್ಯ.  ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ.  ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ‌ ಇಲ್ಲ.  ಅದಕ್ಕೆ ಮಹಾತ್ಮಾ‌ ಗಾಂಧಿಜಿಯನ್ನು ಕೊಂದಿದ್ದಾರೆ.  ಗೋಡ್ಸೆ ಮೂಲಕ ಮುಗಿಸಿಬಿಟ್ಟಿದ್ದಾರೆ.  ಇವರಿಗೆ ಮನುಷ್ಯತ್ವವೇ ಇಲ್ಲ.  ಇನ್ನೊಬ್ಬರನ್ನು ಪ್ರೀತಿಸುವ, ಗೌರವಿಸುವ ಮನಸ್ಥಿತಿ‌ ಇಲ್ಲ.  ಇವರದ್ದು ಹೊಡಿ, ಬಡಿ,‌ ಕಡಿ‌ ಸಂಸ್ಕ್ರತಿ.  ಮೊನ್ನೆ ಮಂತ್ರಿ ಹೇಳಿದ್ದಾನೆ.  ಟಿಪ್ಪು ಸುಲ್ತಾನ್ ಮುಗಿಸಿದಂಗೆ ಸಿದ್ರಾಮಯ್ಯನನ್ನು‌ ಮುಗಿಸಿ ಎಂದು ಹೇಳಿದ್ದಾನೆ.  ನಾಡಿನ‌ ಜನತೆಗೆ ರಕ್ಷಣೆ ಕೊಡಬೇಕಾದ ಮಂತ್ರಿ, ಕಾನೂನು ಬಗ್ಗೆ ಗೌರವ ಇಲ್ಲದೆ ಸಿದ್ದರಾಮಯ್ಯನ ಮುಗಿಸಬೇಕು ಅಂತಾನೆ.  ನನ್ನನ್ನು ಯಾವ ತಪ್ಪಿಗೋಸ್ಕರ ಮುಗಿಸಬೇಕು ಅಂತೀರಿ? ಎಂದು ಅವರು ಪ್ರಶ್ನಿಸಿದರು.

ನಾ ಮಾಡಿದ್ದ ತಪ್ಪೇನು ಗೊತ್ತಾ? ಬಡವರ ಪರ, ದೀನ ದಲಿತರ ಪರ, ನೊಂದವರ ಪರ ನ್ಯಾಯ ಒದಗಿಅಉವ ಕೆಲಸ ಮಾಡಿದ್ದು ತಪ್ಪಾ? ಸಾಯಲಿಕ್ಕೆ‌ ನಾನು ರೆಡಿ, ನಾಡಿನ ಏಳು ಕೋಟಿ ಜನ್ರ ಆಶೀರ್ವಾದ ಇರುವವರೆಗೂ ಏನೂ ಮಾಡೋಕಾಗಲ್ಲ.  ಗಾಂಧೀಜಿ ಕೊಲೆ ಮಾಡಿದವರು ಬಿಜೆಪಿಯವರು.  ಧರ್ಮದ ಬಗ್ಗೆ ಮಾತನಾಡುವವರು ಕೊಲೆ ಮಾಡೋ ಬಗ್ಗೆ ಮಾತನಾಡುತ್ತಾರೆ.  ಓರ್ವ ಸಚಿವ ನನ್ನ ಮುಗಿಸಿ ಬಿಡಬೇಕು ಎಂದು ಹೇಳುತ್ತಾನೆ.  ನಾನು ಸಾವಿಗೆ ಹೆದರಲ್ಲ.  ನನ್ನ ಸಾಯಿಸಲು ನೀವು ಬಿಡ್ತೀರಾ? ನಾನು ಬಡವರ ಪರವಾಗಿ ಕೆಲಸ ಮಾಡಿದ್ದೇನೆ.  ಬಡವರ ರೈತರ ಪರ ಕೆಲಸ ಮಾಡಿದ್ದೇವೆ.  ಹಲವರು ಭಾಗ್ಯಗಳನ್ನು ಎಲಾ ಕೋಮಿನ‌ ಜನರಿಗಾಗಿ ಜಾರಿ ಮಾಡಿದ್ದೇನೆ.  ಎಸ್ಸಿಎಸ್ಟಿ ಸಮುದಾಯಕ್ಕೆ ವಿಶೇಷ ಅನುದಾನ ನಿಯಮ ಜಾರಿ ಮಾಡಿದ್ದೇನೆ.  2018 ರಲ್ಲಿ ನಾನು‌ ಕೊನೆ ಬಜೆಟ್ ಮಂಡಿಸಿದ್ದೆ.  ಈಗ ಎಸ್ಇಪಿ ಟಿಎಸ್ಪಿಗೆ ಇಟ್ಟ ಹಣ ಕಡಿಮೆಯಾಗಿದೆ.  ರೂ. 50000 ಕೋ. ಹಣ ಬಜೆಟ್ ನಲ್ಲಿ ಇಡಬೇಕಿತ್ತು.  ಆದರೆ ಬಿಜೆಪಿಯವರು ಇಟ್ಟಿಲ್ಲ ಎಂದು ಅವರು ಆರೋಪಿಸಿದರು.

ಅಲ್ಪಸಂಖ್ಯಾತರಿಗೂ ಅನ್ಯಾಯ ಮಾಡಿದ್ದಾರೆ.  ನಿಮ್ಮ ಆಶಿರ್ವಾದಿಂದ ಅಧಿಕಾರಕ್ಕೆ ಬಂದರೆ ರೂ. 5000 ಕೋ. ಅಲ್ಪಸಂಖ್ಯಾತರಿಗೆ ನೀಡುತ್ತೇವೆ.  ಜನರಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದೇವೆ.  ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ.  ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ.  ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಹಣ ನೀಡುತ್ತೇವೆ.  ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿವೆ.  ಮೋದಿ ಅವರ ಅಚ್ಚೇ ದಿನ್ ಬರಲಿಲ್ಲ.  ಎಲ್ಲಿದೆ ಮೋದಿ ಅವರ ಅಚ್ಚೆರ ದಿನ್ ಎಂದು ಅವರು ‌ವ್ಯಂಗ್ಯವಾಡಿದರು.

ಉಚಿತ ಅಕ್ಕಿಯನ್ನು ನಾವು ನೀಡಿದ್ದನ್ನು ಕಡಿಮೆ ಮಾಡಿದ್ದಾರೆ.  ಇವರ ಮನೆ ಹಾಲಾಗಾ ಎಂದು‌ ವಾಗ್ದಾಳಿ‌ ನಡೆಸಿದ ಸಿದ್ದರಾಮಯ್ಯ.  ನಾವು ಅಧಿಕಾರಕ್ಕೆ ಬಂದ ಕೂಡಲೇ ಹತ್ತು ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ.  ಇನ್ನೂ ಹೆಚ್ವಿನ ನೀರಾವರಿ ಯೋಜನೆಗಳನ್ನು ಜಾರಿ ಮಾಡುತ್ತೇವೆ.  ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳಿಗೆ ಹಾಗೂ ತುಂಗಭದ್ರಾ ಹೂಳು ತೆಗೆಯಲು ಎರಡು ಲಕ್ಷ ಕೋಟಿ ಹಣ ಖರ್ಚು ಮಾಡುತ್ತೇವೆ.  ಈ ಹಿಂದೆಯೂ ನೀರಾವರಿ ಯೋಜನೆಯಲ್ಲಿ‌ ನುಡಿದಂತೆ  ನಡೆದಿದ್ದೇವೆ.  ಈಗ ನುಡಿದಂತೆ ನಡೆಯದೇ ಇದ್ದರೆ ಅಧಿಕಾರಲ್ಲಿ ಇರಲ್ಲ.  ಮೋದಿ ನ‌ಖಾವೂಂಗಾ ನ ಖಾನೇದೋಂಗಾ ಎನ್ನುತ್ತಾರೆ.  ಆದರೆ ರಾಜ್ಯದಲ್ಲಿ ಬಿಜೆಪಿಯವರು ಮಾಡುತ್ತಿರೋದು ಏನು? ಎಲ್ಲಿ ಹೋದರೂ‌ ಲಂಚ ಲಂಚವಾಗಿದೆ.  ವಿಧಾನಸೌಧನ ಗೋಡೆಗಳು ಸಹ‌ ಲಂಚ ಲಂಚ ಲಂಚ ಎನ್ನುತ್ತಿವೆ.  ಈ ಬಾರಿ ಬಸವನಬಾಗೇವಾಡಿ ಕ್ಷೇತ್ರಕ್ಕೆ ಹಾಲಿ ಶಾಸಕ‌ ಶಿವಾನಂದ ಪಾಟೀಲ್ ಗೆ ಆಶಿರ್ವಾದ ಮಾಡಿ.  ಶಿವಾನಂದ ಪಾಟೀಲ ಅವರಿಗೆ ಮತ ಹಾಕಿದರೆ ಅದು ನನಗೆ ಮತ ಹಾಕಿದಂತೆ.  ಮತ್ತೊಮ್ಮೆ ಶಿವಾನಂದಗೆ ಅವಕಾಶ ನೀಡಿ ಎಂದು ಸಿದ್ಧರಾಮಯ್ಯ ಮನವಿ ಮಾಡಿದರು.

 

ಎಂ. ಬಿ. ಪಾಟೀಲ ಭಾಷಣ

ಕೆಪಿಸಿಸಿ ಪ್ರಚಾರ ಸಮೀತಿ ಅದ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ‌ ವೈಫಲ್ಯಗಳ ಬಗ್ಗೆ ತಿಳಿಸಲು ಪ್ರಜಾಧ್ವನಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.  ದೇಶ ಕಟ್ಟಿದ್ದು ಕಾಂಗ್ರೆಸ್.  ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್.  ದೇಶದಲ್ಲಿರುವ 2000 ಅಣೆಕಟ್ಟು ಕಟ್ಟಿದೆ.  ಪ್ರಾಥಮಿಕ ಶಾಲೆಯಿಂದ ಹಿಡಿದು ಐಐಟಿ ಮಾಡಿದ್ದು ಕಾಂಗ್ರೆಸ್ ನಿರ್ಮಿಸಿದೆ.  2014 ರಲ್ಲಿ ಮೋದಿ ದೊಡ್ಡ ಪ್ರಚಾರ ಮಾಡಿದರು.  ಅಚ್ಚೇ ದಿನ ಆಯೇಂಗೆ ಎಂದು ಹೇಳಿದರು.  ಯಾವುದು‌ ಅಚ್ಚೇ ದಿನ ಬರಲಿಲ್ಲ ಎಂದು ಆರೋಪಿಸಿದ ಅವರು, ಪೆಟ್ರೋಲ್, ಡಿಸೈಲ್, ಅಡುಗೆ ಅನಿಲ, ಅಡುಗೆ ಎಣ್ಣಿ ಮಕ್ಕಳ ನೋಟ್ ಬುಕ್ ಮೇಲೆ ಬಿಜೆಪಿಯವರು ಜಿ ಎಸ್ ಟಿ ಹಾಕಿದ್ದಾರೆ.  ಎರಡು ಕೋಟಿ ಉದ್ಯೋಗ ಪ್ರತಿ ವರ್ಷ ನೀಡುವ ಘೋಷಷೆ ಮಾಡಿದ್ದಾರೆ.  ಆದೇ ಇಲ್ಲಿವರೆಗೆ ಉದ್ಯೋಗ ನೀಡಿಲ್ಲ.  ಕೆಲಸ ಇರುವವರು ಉದ್ಯೋಗ ಕಳೆದುಕೊಂಡರು.  ರೈತರ ಆದಾಯ ದ್ಚಿಗುಣವಾಗಲಿಲ್ಲ.  ನಾ‌ ಖಾವೂಂಗಾ‌ ನ‌ಖಾನೆದೋಂಗಾ ಎಂದಿದ್ದರು.  ರಾಜ್ಯದಲ್ಲಿ 40 ಪರ್ಸೆಂಟ್ ಸರಕಾರ ಇದೆ.  40 ಪರ್ ಸೆಂಟ್ ಕಡಿಮೆಯಾಯ್ತಾ? ಹಿಂಬಾಗಿಲಿನಿಂದ ಸರಕಾರ ಮಾಡಿದ್ದಾರೆ.  ನೀರಾವರಿಗೆ ನಾವು ರೂ. 56000 ಕೋ. ಹಣ ಖರ್ಚು ಮಾಡಿದ್ದೇವೆ.  ಘೋಷಣೆ ಮಾಡಿದ ಬರವಣೆ ಈಡೇರಿಸಿದ್ದೇವೆ.  ನಾವು ಮತ್ತೇ ಅಧಿಕಾರಕ್ಕೆ ಬರುತ್ತೇವೆ.  ಜನರು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.

ಯಶವಂತರಾಯಗೌಡ ಪಾಟೀಲ ಹೇಳಿಕೆ

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, 2023ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಲು ಜನತೆ ನಿರ್ಧರಿಸಿದ್ದಾರೆ.  ಜನರ ಧ್ವನಿಯಾಗಿ, ಬಸವಣ್ಣನ ತತ್ವ ಸಿದ್ದಾಂತಗಳನ್ನು ಪಾಲಿಸುವ ಪಕ್ಷ ಇದ್ರೆ ಅದು ಕಾಂಗ್ರೆಸ್ ಮಾತ್ರ.  ಬಿಜೆಪಿ ಹಾಗೂ ಅವರ ವಿಚಾರ ಧಾರೆಯನ್ನು ಎಲ್ಲರೂ ವಿರೋಧಿಸಬೇಕು.  ಸಮಾಜದಲ್ಲಿ ಒಡೆದು ಆಳುವ ನೀತಿಯಿಂದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಶಿವಾನಂದ ಪಾಟೀಲ, ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಮಾಜಿ ಸಚಿವ ಎಚ್. ಸಿ. ಮಹಾದೇವಪ್ಪ, ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌