ಎಲ್ಲಿಂದ ಸ್ಪರ್ಧಿಸಬೇಕು ಎಂದು ನಾನು ನಿರ್ಧರಿಸುವೆ, ಅವರಲ್ಲ- ಬಿ. ಎಸ್. ವೈಗೆ ಆಯುಷ್ಯ, ಆರೋಗ್ಯ ಸಿಗಲಿ- ಎಸ್. ಸಿದ್ಧರಾಮಯ್ಯ

ವಿಜಯಪುರ: ಮುಂಬರುವ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸಬೇಕು ಎಂದು ನಾನು ತೀರ್ಮಾನ ಮಾಡುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತೆ. ಇದನ್ನು ಕೇಳಲು ಬಿ. ಎಸ್. ಯಡಿಯೂರಪ್ಪ ಯಾರು ಎಂದು ಮಾಜಿ ಸಿಎಂ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಯಮ್ಯ ಹೇಳಿದ್ದಾರೆ.

ಕಾಂಗ್ರೆಸ್ ಕೈಗೊಂಡಿರುವ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಬಸವನಾಡು ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು, ದೇವರ ಹಿಪ್ಪರಗಿ ಕಾರ್ಯಕ್ರಮಕ್ಕೆ ತೆರಳುವ ಮುಂಚೆ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಬುಧವಾರ ವಿಧಾನ ಸಭೆಯಲ್ಲಿ ಮಾತನಾಡಿದ್ದ ಬಿ. ಎಸ್. ಯಡಿಯೂರಪ್ಪ, ಸಿದ್ಧರಾಮಯ್ಯ ಕ್ಷೇತ್ರ ಬದಲಾವಣೆ ಕುರಿತು ಟೀಕಿಸಿದ್ದರು. ಗೆದ್ದು ಬಂದ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದಿಲ್ಲ ಎಂದರೆ ಏನರ್ಥ? ಏನೂ ಕೆಲಸ ಮಾಡಿಲ್ಲವೇ ಅಥವಾ ಗೆಲ್ಲುವ ವಿಶ್ವಾಸ ಇಲ್ವಾ? ಹೊಸ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಜನ ಹೇಗೆ ನಂಬುತ್ತಾರೆ? ಸೋಲಿನ ಭೀತಿಯಿಂದ ಕ್ಷೇತ್ರ ಬದಲಾವಣೆ ಮಾಡುತ್ತಿದ್ಸಾರೆ ಎಂಬುದು ಇದರ ಅರ್ಥ. ಗೆಲ್ಲಿಸಿದ ಜನರ ಋಣ ತೀರಿಸಬೇಕಾದರೆ ಈಗ ಪ್ರತಿನಿಧಿಸುವ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬೇಕು. ಇಲ್ಲದಿದ್ದರೆ ಅದುಆ ಕ್ಷೇತ್ರದ ಜನರಿಗೆ ಮಾಡುವ ವಿಶ್ವಾಸದ್ರೋಹ. ಈ ಹಿನ್ನೆಲೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧಿಸಲು ಎಸ್. ಸಿದ್ಧರಾಮಯ್ಯ ಚಿಂತಿಸಬೇಕು ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದ್ದರು.  ಅಲ್ಲದೇ, ಇದು ತಮ್ಮ ಕೊನೆಯ ಅಧಿವೇಶನ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದೂ ಬಿ. ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು.

ವಿಜಯಪುರದಲ್ಲಿ ಮಾಜಿ ಸಿಎಂ ಎಸ್. ಸಿದ್ಧರಾಯಮ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು

ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್. ಸಿದ್ಧರಾಮಯ್ಯ, ಬಿ. ಎಸ್. ಯಡಿಯೂರಪ್ಪ ಅವು ಇದು ತಮ್ಮ ಕೊನೆಯ ಅಧಿವೇಶನ ಎಂದು ಭಾಷಣ ಮಾಡಿದ್ದಾರೆ. ಪಾಪ ನನ್ನ ಮೇಲೆ ಬಹಳ ಪ್ರೀತಿಯಿಂದಾಗಿ ಬಾದಾಮಿಯಲ್ಲಿ ನಿಲ್ಲಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ನಾನು ಬಾದಾಮಿಯಲ್ಲಿ ಗೆಲ್ಲುವುದಿಲ್ಲ ಎಂಬಂತಿಲ್ಲ. ಶೇಕಡ 100 ರಷ್ಟು ಬಾದಾಮಿಯಲ್ಲಿ ಗೆದ್ದೇ ಗೆಲ್ಲುತ್ತೇನೆ. ಬಾದಾಮಿ ಜನರಿಂದಾಗಿಯೇ ನಾನು ಐದು ವರ್ಷ ಶಾಸಕರಾಗಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಹೀಗಾಗಿ ಬಾದಾಮಿ ಜನರಿಗೆ ದ್ರೋಹ ಮಾಡುವ ಪ್ರಶ್ನೆ ಬರಲ್ಲ ಎಂದು ಮಾಜಿ ಸಿಎಂ ಸ್ಪಷ್ಟಪಡಿಸಿದರು.

ಬಿ. ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ. ಅವರಿಗೆ ಆಯುಷ್ಯ, ಆರೋಗ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ತಿಳಿಸಿದರು‌.

ನಾನು ಎಲ್ಲಿಂದ ನಿಲ್ಲಬೇಕು ಎಂಬುದನ್ನು ನಾನು ತೀರ್ಮಾನ ಮಾಡುತ್ತೇನೆ. ಬಿ. ಎಸ್. ಯಡಿಯೂರಪ್ಪ ತೀರ್ಮಾನ ಮಾಡುವುದಲ್ಲ. ಎಲ್ಲಿಂದ ಸ್ಪರ್ಧಿಸಬೇಕು ಬೇಕು ಎಂದು ನಾನು ಹೇಳುತ್ತೇನೆ. ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತದೆ. ಈ ಬಗ್ಗೆ ತೀರ್ಮಾನ ಮಾಡಲು ಬಿ. ಎಸ್. ಯಡಿಯೂರಪ್ಪ ಯಾರು? ಎಂದು ಅವರು ಪ್ರಶ್ನಿಸಿದರು.

ಮಾಜಿ ಸಿಎಂ ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಿ. ಎಸ್. ಯಡಿಯೂರಪ್ಪ ಅವರಿಗೆ ಆಯುಷ್ಯ ಆರೋಗ್ಯ ಸಿಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ‌ ಪ್ರಕಾಶ ರಾಠೋಡ, ಶಾಸಕ‌‌ ಜಮೀರ್ ಅಹ್ಮದ್ ಖಾನ, ಕಾಂಗ್ರೆಸ್ ಮುಖಂಡ  ಎಸ್. ಎಂ. ಪಾಟೀಲ ಗಣಿಹಾರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌