ವಿಜಯಪುರ: ನಾನಾಗಲಿ ಅಥವಾ ಎಂ. ಬಿ. ಪಾಟೀಲ ಆಗಲಿ ಎಲ್ ಓ ಸಿ ನೀಡಲು ಐದು ಪೈಸೆ ಲಂಚ ತಿಂದಿದ್ದರೆ ರಾಜಕೀಯ ನಿವೃತ್ತಿಯಾಗಿ ಸನ್ಯಾಸತ್ವ ತೆಗೆದುಕೊಳ್ಳುತ್ತೇವೆ ಸಿದ್ಧರಾಮಯ್ಯ ಸವಾಲು ಹಾಕಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಈಗಿನ ಸರಕಾರ 40 ಪರ್ಸೆಂಟ್ ಲಂಚ ಪಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಆದರೆ, ಈವರೆಗೆ ಈ ಪ್ರಕರಣದಲ್ಲಿ ಯಾವುದೇ ಕ್ರಮವಾಗಿಲ್ಲ ಎಂದು ರಾಜ್ಯ ಸರಕಾರದ ಭ್ಷ್ರಷ್ಟಾಚಾರದ ವಿರುದ್ಧ ಹರಿಹಾಯ್ದರು.
ನರೇಂದ್ರ ಮೋದಿಜಿ ನಿಮಗೆ ಕಲಸ ಮಾಡೋಕೆ ಆಗಲ್ವಾ? ಬೊಮ್ಮಾಯಿ ಸರಕಾರ 40 ಪರ್ಸೆಂಟ್ ಕೇಳಿ ನಮ್ಮ ರಕ್ತ ಕುಡಿತಾರೆ. ದಯಮಾಡಿ ನಮ್ಮನೆರವಿಗೆ ಬನ್ನಿ ಎಂದು ಒಂದೂವರೆ ವರ್ಷದ ಹಿಂದೆ ಪತ್ರ ಬರದ್ರೂ ಮೋದಿ ಕ್ರಮ ಕೈಗೊಂಡಿಲ್ಲ. ನಾ ಖಾವೂಂಗಾ ನಾ ಖಾನೆ ದೂಂಗಾ ಎಂದು ಹೇಳಿದ್ರಿ. ಈಗ ಯಾಕೆ ಸುಮ್ಮನಿದ್ದೀರಿ? ನರೇಂದ್ರ ಮೋದಿ ಜೂಟ್ ಕ್ಯೂಂ ಬೋಲೆಂ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.
ನಾವು ಅಧಿಕಾರಲ್ಲಿ ಇದ್ದಾಗ ನೀರಾವರಿಗೆ ಏನು ಮಾಡಿದ್ದೇವೆ. ಮುಂದೆ ಏನು ಮಾಡ್ತೆವೆ ಎಂದು ತಿಳಿಸಲು ಸಮಾವೇಶ ಮಾಡಿದ್ದೆವು. ನಾವು ಹೊಸಪೇಟೆಯಿಂದ ಪಾದಯಾತ್ರೆ ಮಾಡಿದ್ದೆವು, ಅದು ಕೂಡಲಸಂಗಮದಲ್ಲಿ ಮುಕ್ತಾಯ ಆಗಿತ್ತು. ನಾವು ಅಧಿಕಾರಕ್ಕೆ ಬಂದ್ರೆ ಐದು ವರ್ಷದಲ್ಲಿ ರೂ. 50 ಸಾವಿರ ಕೋ. ಖರ್ಚು ಮಾಡುತ್ತೇವೆ ಎಂದು ಹೇಳಿ ಕೊಟ್ಟ ಮಾತಿನಂತೆ ರೂ. 56 ಸಾವಿರ ಕೋ. ಖರ್ಚು ಮಾಡಿ ಜನರಿಗೆ ನೀರು ಕೊಡುವ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.
ಆದರೆ, ಬಿಜೆಪಿಯವರು ಒಂದೂವರೆ ಲಕ್ಷ ಕೋಟಿ ಖರ್ಚು ಮಾಡಿ ಬಿಜೆಪಿ ಎಲ್ಲ ನೀರಾವರಿ ಯೋಜನೆ ಮುಗಿಸ್ತೆವೆ ಎಂದಿದ್ದರು. ಆದ್ರೆ ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನಾವು ಮತ್ತೆ ವಿಜಯಪುರದಲ್ಲಿ ಮಾತು ಕೊಟ್ಟಿದ್ದೇವೆ. ನೀವೆಲ್ಲ ನಮಗೆ ಆಶೀರ್ವದಿಸಿದ್ರೆ ನೀರಾವರಿ ಪೆಂಡಿಂಗ್ ಪ್ರಾಜೆಕ್ಟ್ ಗಳನ್ನು ಪೂರ್ಣ ಗೊಳಿಸುತ್ತೇವೆ. ಐದು ವರ್ಷದಲ್ಲಿ ರೂ. 2 ಲಕ್ಷ ಕೋ. ಖರ್ಚು ಮಾಡಿ ನೀರಾವರಿ ಯೋಜನೆ ಮುಗಿಸುತ್ತೇವೆ. ಬಸವಣ್ಣನ ಮಾತಿನಂತೆ ಕೊಟ್ಟ ಮಾತು ಜಾರಿ ಮಾಡ್ತೆವೆ. ಒಂದು ಕೊಡೋಕೆ ಆಗದಿದ್ರೆ ಒಂದು ಸೆಕೆಂಡ್ ಖುರ್ಚಿ ಮೇಲೆ ನಾವು ಇರಲ್ಲ ಎಂದು ಮಾಜಿ ಸಿಎಂ ಹೇಳಿದರು.
ನಾನು 12 ವರ್ಷ ಹಣಕಾಸಿನ ಮಂತ್ರಿ, ಐದು ವರ್ಚ ಎಂಬಿಪಿ ನೀರಾವರಿ ಮಂತ್ರಿಯಾಗಿದ್ದರು. ನಾನಾಗಲೀ, ಎಂ. ಬಿ. ಪಾಟೀಲ ಆಗಲಿ ಎನ್ ಓ ಸಿ ರಿಲೀಸ್ ಮಾಡಲು ಐದು ಪೈಸೆ ತಗೊಂಡಿದ್ರೆ ರಾಜಕೀಯ ನಿವೃತ್ತಿ ಮಾಡಿ, ಸನ್ಯಾಸತ್ವ ತಗೋತಿನಿ. ತಪ್ಪಿದ್ದರೆ ಯಾವುದೇ ಶಿಕ್ಷೆಗೂ ರೆಡಿಯಿದ್ದೇವೆ ಎಂದು ಹೇಳಿದ ಅವರು, ಈಗ ಸರಕಾರದಲ್ಲಿ ಯಾವುದೇ ಕೆಲಸಕ್ಕೂ ಲಂಚಾ, ಲಂಚಾ, ಲಂಚಾ ಲಂಚಾ ಎನ್ನಲಾಗುತ್ತಿದೆ. ಇವರ ಬಿಜೆಪಿ ಸರಕಾರ ಅಲಿಬಾಬಾ ಔರ್ ಚಾಲೀಸ್ ಚೋರ್ ಸರಕಾರ. ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಬಿಜೆಪಿಯಂಥ ಭ್ರಷ್ಟ್ ಸರಕಾರವನ್ನು ನನ್ನ ಜೀವನದಲ್ಲಿ ನೋಡಿಯೇ ಇರಲಿಲ್ಲ. ದುಡ್ಡನ್ನೆಲ್ಲ ತಿನ್ನೋಕೆ ಶುರು ಮಾಡಿದ ಮೇಲೆ ಎಲ್ಲಿಂದ ನೀರು ಕೊಡ್ತಾರೆ? ನಾನು ಚೌಕಿದಾರ್ ಎನ್ನುವ ಮೋದಿ ಅವರೆ ಇಂಥ ಸರಕಾರ ಬೇಕಾ? ಎಂದು ಅವರು ಪ್ರಶ್ನಿಸಿದರು.