ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ವಾಗತ- ಹೆಚ್ಚಿಗೆ ಅನುದಾನ ಮೀಸಲಿಡಲು ಸಮಾಜ ಮುಖಂಡರ ಆಗ್ರಹ

ವಿಜಯಪುರ: ರಾಜ್ಯ ಸರಕಾರ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸಂತಸ ತಂದಿದ್ದು, ಈ ನಿಗಮಕ್ಕೆ ಹೆಚ್ಚಿಗೆ ಅನುನಾದ ಮೀಸಲಿಡಬೇಕು ಎಂದು ಜಿಲ್ಲಾ ಗಾಣಿಗ ಸಂಘದ ಜಿಲ್ಲಾಧ್ಯಕ್ಷ ಬಿ. ಬಿ. ಪಾಸೋಡಿ ಮತ್ತು ಸಮಾಜದ ಮುಖಂಡ ಮಲ್ಲಿಕಾರ್ಜುನ ಲೋಣಿ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಜಗತ್ತಿಗೆ ಜ್ಯೋತಿ ನೀಡಿದ ಗಾಣಿಗ ಸಮಾಜದ ಬಹುದಿನಗಳ ಬೇಡಿಕೆಯನ್ನು ಗಾಣಿಗ ನಿಗಮ ಸ್ಥಾಪನೆಯ ಘೋಷಣೆಯ ಮೂಲಕ ಈಡೇರಿಸಿದೆ.  ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ.  ಈ ನಿಗಮ ಸ್ಥಾಪಿಸಲು ಪ್ರಯತ್ನಿಸಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ, ಜಮಖಂಡಿ ಶಾಸಕ ಆನಂದ ನ್ಯಾಮಗೊಂಡ, ಸಿಂದಗಿ ಶಾಸಕ ರಮೇಶ ಭೂಸನೂರ, ಸಮಾಜದ ಮುಖಂಡರಾದ ದಿನಕರ ಶೆಟ್ಟಿ, ಬಿ. ಕೆ. ಸಂಗಮೇಶ, ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ, ವೈ. ಆರ್. ಸುದರ್ಶನ, ಮಾಜಿ ಸಚಿವರಾದ ಎಸ್. ಕೆ. ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಎಸ್. ನ್ಯಾಮಗೌಡ, ಬಿ. ಜಿ. ಪಾಟೀಲ ಹಲಸಂಗಿ ಹಾಗೂ ನಿಗಮ ಸ್ಥಾಪಿಸಲು ಸರಕಾರದ ಮೇಲೆ ಒತ್ತಡ ಹೇರಲು ಇಡೀ ರಾಜ್ಯ ಎಲ್ಲ ಒಳಪಂಗಡಗಳನ್ನು ಕೂಡಿಸಿ ಹೋರಾಟದ ರೂಪರೇಷಗಳನ್ನು ಸಿದ್ಧಪಡಿಸಿ ಸಮಾಜವನ್ನು ಸಂಘಟಿಸಿರುವ ಗಾಣಿಗೆ ಗುರುಪೀಠಾಧ್ಯಕ್ಷರಾದ ಡಾ. ಜಯಬಸವಕುಮಾರ ಮಹಾಸ್ವಾಮಿ, ರಾಜ್ಯ ಗಾಣಿಗ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿಯವರಿಗೂ ಸಂಘಟನಾ ಕಾರ್ಯದರ್ಶಿ ಗುರಣ್ಣಾ ಗೋಡಿ, ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.

ಹಿಂದುಳಿದ ವರ್ಗ 2ಎ ಗೆ ಸೇರಿದ ಗಾಣಿಗ ಸಮಾಜವು ನಿಜವಾಗಿಯೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ.  ಈ ಸಮಾಜಕ್ಕೆ, ಪ್ರತ್ಯೇಕ ನಿಗಮ ಮಾಡಿಕೊಟ್ಟಿರುವ ಜೊತೆಗೆ ಹೆಚ್ಚಿನ ಹಣವನ್ನು ಅಭಿವೃದ್ಧಿಗಾಗಿ ಘೋಷಣೆ ಮಾಡಲು ಮುಖ್ಯ ಮಂತ್ರಿಗಳಿಗೂ ಹಾಗೂ ಸಂಪುಟದ ಎಲ್ಲ ಸಚಿವರಿಗೂ ಸಮಾಜದ ಪರವಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಬಿ. ಎಂ. ಪಾಟೀಲ ಕತ್ನಳ್ಳಿ, ಉಪಾಧ್ಯಕ್ಷ ಶರಣಪ್ಪ, ಶ್ಯಾಪೇಟಿ, ಕಾರ್ಯಾಧ್ಯಕ್ಷ ಅಶೋಕ ತರಡಿ. ಖಜಾಂಜಿ ಬಿ. ಕೆ. ಚೌದರಿ, ಸಹಕಾರ್ಯದರ್ಶಿ ಎಸ್. ಬಿ. ಪು,ಟ್ಟಿ, ಶಿರeಡೋಣ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಉಟಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌