ವಿಜಯಪುರ: ರಾಜ್ಯದಲ್ಲಿ ಬಿಜೆಪಿ ದುರಾಡಳಿತವನ್ನು ಕೊನೆಗಾಣಿಸಲು ಕಾಂಗ್ರೆಸ್ ಅವಶ್ಯಕತೆ ಇದೆ. 2013ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸಿದಂತೆ ಈ ಬಾರಿಯೂ ಕೈ ಬಲಪಡಿಸಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಪ್ರಜಾಧ್ವನಿ, ಪ್ರಜೆಗಳ ಧ್ವನಿಯನ್ನು ಹೆಳುವ ಕೆಲಸ ಮಾಡುತ್ತಿದೆ. ಈಗಿನ ಸರಕಾರದ ಭಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಶುರುವಾಗಿದೆ. ಸಿದ್ದರಾಮಯ್ಯ ನೇತ್ರತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಎಲ್ಲೆಲ್ಲಿ ಹೋಗಿದೆ ಅಲ್ಲೆಲ್ಲ ಕಾಂಗ್ರೆಸ್ಸಿಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ ಭದ್ದತೆ, ಸಿದ್ದಾಂತವನ್ನು ನಾವೆಲ್ಲರೂ ಬಲ್ಲವರಾಗಿದ್ದೇವೆ. ಸ್ವಾಂತಂತ್ರ್ಯ ಪೂರ್ವದಲ್ಲಿ, ನಂತರದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಸ್ಮರಿಸಬೇಕಾಗುತ್ತದೆ. ರಾಷ್ಟ್ರದ ಪ್ರಧಾನಿಗಳನ್ನು ನೆನಸಬೇಕಾಗ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆ ಮೂಲಕ ಅತಿದೊಡ್ಡ ಜನಾಂದಲೋನ ನಡಸುತ್ತಿದ್ದಾರೆ. ಈ ದೇಶಕ್ಕೆ ಇದರ ಅವಶ್ಯಕತೆ ಇದೆ. 140 ಕೋಟಿ ಇರುವ ಮನಸ್ಸುಗಳನ್ನು ಒಂದುಗೂಡಿಸಬೇಕಾಗಿದೆ. ನಾವೆಲ್ಲ ಭಾರತೀಯರು ಒಂದಾಗಿ ಬಾಳಬೇಕಾದ್ರೆ ಕಾಂಗ್ರೆಸ್ ಅವಶ್ಯಕತೆ ಇದೆ. ಕರ್ನಾಟಕದಲ್ಲೂ ಸುದೀರ್ಘವಾಗಿ ರಾಜಕಾರಣ ಮಾಡಿದೆ. ನಿಜಲಿಂಗಪ್ಪ, ಕೆ ಸಿ ರೆಡ್ಡಿ, ದೇವರಾಜ ಅರಸು, ವಿರೇಂದ್ರ ಪಾಟೀಲ್ ಸೇರಿದಂತೆ ಅನೇಕ ಮುಖ್ಯಮಂತ್ರಿಗಳನ್ನು ನಾವು ನೆನೆಸಬೇಕು ಎಂದು ಅವರು ಹೇಳಿದರು.
ತೀರ ಇತ್ತೀಚೆಗೆ ರಾಜ್ಯದ ಜನರ ಮನದಲ್ಲಿ ಇರುವ ಸಿದ್ದರಾಮಯ್ಯ ಅವರು ಬಸವ ತತ್ವದ ಅನುಯಾಯಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ವಿಧಾನಸಭೆಗೆ ನೇರವಾಗಿ ಹೋಗಿ ಒನ್ ಮ್ಯಾನ್ ಕ್ಯಾಬಿನೆಟ್ ನಲ್ಲಿ ಅನ್ನಭಾಗ್ಯ ಕೊಟ್ಟಿದ್ದಾರೆ. ಅವರ ಅವಧಿಯಲ್ಲಿ ಐದು ವರ್ಷ ಉತ್ತಮ ಆಡಳಿತ ಕೊಟ್ಟಿದ್ದಾರೆ. ಮೇರು ನಾಯಕ, ಸರದಾರ ಎಂದರೆ ಅವರು ಸಿದ್ರಾಮಯ್ಯ. ರಾಜ್ಯದ ಜನತೆ ಸುಭಿಕ್ಷೆಯಿಂದ ಬದುಕಬೇಕಾದ್ರೆ ಸಿದ್ರಾಮಯ್ಯ ಅವರ ಅಗತ್ಯತೆ ಇದೆ ಎಂದು ಹೇಳಿದರು.
ಬಬಲೇಶ್ವರ ವಿಜಯಪುರದ ಗಂಡು ಮೆಟ್ಟಿದ ಸ್ಥಳವಾಗಿದೆ. ಎಂ. ಬಿ. ಪಾಟೀಲ ನಿಮ್ಮ ಸೇವೆ ಮಾಡಿದ್ದಾರೆ. ನಮ್ಮಲ್ಲಿ ಮತಭೇದಗಳು ಎಲ್ಲೆಡೆ ಇವೆ. ಪ್ರತಿ ಮನೆಯಲ್ಲೂ ಇದ್ದೆ ಇರುತ್ತವೆ. ಪಕ್ಷದ ಸಿದ್ಧಾಂತ ಬಂದಾಗ ನಾವೆಲ್ಲ ಒಂದೇ. ಬಿಜೆಪಿ ದುರಾಡಳಿತವನ್ನು ಕೊನೆಗಾಣಿಸಬೇಕಾದ್ರೆ ಕಾಂಗ್ರೆಸ್ ಅವಶ್ಯಕತೆ ಇದೆ. ಎಂಟು ವಿಧಾನಸಭಾ ಕ್ಷೇತ್ರದಲ್ಲಿನಾವು ಸ್ಪರ್ಧೆ ಮಾಡ್ತಿವಿ. 2013ರಲ್ಲಿ ಆಶೀರ್ವದಿಸಿದಂತೆ ಈ ಬಾರಿ ಮತ್ತೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.