ವಿಜಯಪುರ: ರಾಜ್ಯದಲ್ಲಿ ಬಬಲೇಶ್ವರವನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡುವೆ. ಈ ಬಾರಿ ಒಂದೂವರೆ ಲಕ್ಷ ಓಟ್ ಪಡೆಯುವ ಗುರಿಯಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಸರಕಾರದಲ್ಲಿ ಬಬಲೇಶ್ವರ ಮತಕ್ಶೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ತೃಪ್ತಿ ತಂದಿವೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕ್ಷೇತ್ರಾದ್ಯಂತ ನೀರಾವರಿ ಕೆಲಸ ಮಾಡಿದ್ದೇನೆ. ನನಗೆ ಯಾರ ಸರ್ಟಿಫಿಕೆಟ್ ಬೇಕಿಲ್ಲ. ತಾಯಂದಿರ ಆಶೀರ್ವಾದ ನನ್ನ ಮೇಲಿದ್ದು, ಬಬಲೇಶ್ವರ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಹೇಳಿದರು.
ಸಿದ್ರಾಮಯ್ಯ ಸಾಹೇಬರು ಉಕ ಭಾಗದಲ್ಲಿ ಬಸವ ಕಲ್ಯಾಣದಿಂದ ಸಿದ್ರಾಮಯ್ಯನವರು ಪ್ರಾರಂಭಿಸಿದ್ದಾರೆ. ಈ ದಿನ ಬಬಲೇಶ್ವರಕ್ಕೆ ಬಂದಿದ್ದಾರೆ. ಬಡವರ, ರೈತರ, ದೀನದಲಿತರ, ಹಿಂದುಳಿದವರ ಪರವಾಗಿ ಇರುವವರು ನಮ್ಮ ನಾಯಕರು ಸಿದ್ರಾಮಯ್ಯ ಸಾಹೇಬರು. ಕಾರ್ಯಕ್ರಮದಲ್ಲಿ ಜನ ಸೇರಿಸುವುದನ್ನು ನೋಡಿ ಸಿದ್ಧರಾಮಯಯ್ ಅವರು ಬೆಳೆಗಾವಿಯಿಂದ ವಿಮಾನ ಮೂಲಕ ಪ್ರಯಾಣಿಸಬೇಕಿದ್ದ ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾರೆ. ಬಬಲೇಶ್ವರದಲ್ಲಿ ಹೆಚ್ಚು ಸಮಯ ಕಳೆದ ಸಂಜೆ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಹೆಲಿಕಾಪ್ಟರ್ ಮೂಲಕ ಹೋಗುವ ಕಾರ್ಯಕ್ರಮ ರದ್ದಾಗಿದೆ. ಅದರ ಬದಲು ಹುಬ್ಬಳ್ಳಿಯ ವರೆಗೆ ರಸ್ತೆ ಮೂಲಕ ಸಂಚರಿಸಿ ಅಲ್ಲಿಂದ ರಾತ್ರಿ ವಿಮಾನದಲ್ಲಿ ತೆರಳಲಿದ್ದಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ೧೪ಕಿಲೊಮೀಟರ್ ಅಕ್ವಾಡೆಕ್ಟ್ ಮಾಡಿದಿವಿ. ವರುಣಾದಲ್ಲಿ ನಾಲ್ಕೈದು ಕಿಲೊಮೀಟರ್ ಅಕ್ವಾಡೆಕ್ಟ್ ಇದೆ. ವರುಣಾದವರು ಬಂದು ನಮ್ಮ ಅಕ್ವಾಡೆಕ್ಟ್ ನೋಡುವಂತಾಗಿದೆ. ನನಗೆ ಯಾರದ್ದು ಸರ್ಟಿಫಿಕೇಟ್ ಬೇಕಾಗಿಲ್ಲ. ನಮ್ಮ ತಾಯಂದಿರ ಆಶೀರ್ವಾದ ಇದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಮನೆಯ ಮುಖ್ಯಸ್ಥೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಗ್ಯಾರೆಂಟಿ ಕಾರ್ಡ್ ಕೊಡುತ್ತೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ ಗೆ ರೂ. 400 ಇದ್ದಿದ್ದು ಈಗ ರೂ. 1100 ಆಗಿದೆ. ಅಡುಗೆ ಎಣ್ಣೆ, ಬುಕ್, ಪೆನ್ ಬೆಲೆ ಹೆಚ್ಚಾಗಿವೆ. ಅದನ್ನು ಸರಿದೂಗಿಸಲು ನಾವು ಎರಡು ಸಾವಿರ ಖಾತೆಗೆ ಹಾಕುತ್ತೇವೆ. ಪುರುಷರಿಗೆ ಕೊಡಲ್ಲ. ನಿಮಗೆ ಕೊಟ್ಟರೆ(ಪುರಿಷರಿಗೆ) ಕೊಟ್ಟರೆ ನಮ್ಮ ಅಪೋಸಿಟ್ ಪಾರ್ಟಿಗೆ ಹೋಗುತ್ತೆ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು.
ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ನನ್ನ ಸಂಕಷ್ಟದ ದಿನದಲ್ಲಿ ನರೇಂದ್ರ ಮೋದಿ, ಅಮೀತ್ ಶಾ, ಯೋಗಿ ಆದಿತ್ಯನಾಥ ಬಂದಿದ್ದರು. ಆದರೂ ಬಬಲೇಶ್ವರ ಮತಕ್ಷೇತ್ರದ ಜನತೆ 29000 ಲೀಡ್ ಕೊಟ್ಟಿದ್ದೀರಿ. ಮೋದಿ ಕಾರ್ಯಕ್ರಮ ನಡೆದ ಸಾರವಾಡ ಗ್ರಾಮದಲ್ಲಿಯೇ 1600 ಲೀಡ್ ಕೊಟ್ಟಿದ್ದೀರಿ. ನಿಮ್ಮ ಉಪಕಾರ ನನ್ನ ಮೇಲೆ ಬಹಳ ಇದೆ. ನಾನು ಬದುಕನ್ನು ಕಟ್ಟುವ ಕೆಲಸ ಮಾಡುತ್ತೇನೆ. ಭಾವನೆಗಳನ್ನು ಕೆದಕುವ ಕೆಲಸ ಮಾಡಿಲ್ಲ. ಈ ಕಾರ್ಯಕ್ರಮಕ್ಕೆ ಬಂದು ನನಗೆ ಆಶೀರ್ವಾದ ಮಾಡಿದಿರಿ. ಈ ಚುನಾವಣೆಯಲ್ಲಿ 50 ಸಾವಿರ ಲೀಡ್ ನಿಂದ ಆರಿಸಿ ಬರುತ್ತೇನೆ. ಈ ಬಾರಿ ಒಂದೂವರೆ ಲಕ್ಷ ಓಟು ಪಡೆಯುವ ಟಾರ್ಗೆಟ್ ಇಟ್ಟುಕೊಂಡಿದ್ದೇನೆ. ಬಬಲೇಶ್ವರ ರಾಜ್ಯದಲ್ಲೇ ಮದರಿ ಕ್ಷೇತ್ರ ಮಾಡಲಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ 130 ರಿಂದ 140 ಸೀಟುಗಳಲ್ಲಿ ಗೆಲ್ಲಲಿದೆ. ವಿಜಯಪುರ ಜಿಲ್ಲೆಯಲ್ಲಿ ಎಲ್ಲ ಎಂಟು ಕ್ಷೇತ್ರಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಎಂ. ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.