ವಿಜಯಪುರದಲ್ಲಿ ಬ್ರಾಹ್ಮಣ ಶಕ್ತಿ ಸಂಗಮ- 2023 ಕಾರ್ಯಕ್ರಮ- ನಾನಾ ಸ್ವಾಮೀಜಿ ಗಣ್ಯರು ಭಾಗಿ

ವಿಜಯಪುರ: ನಾವು ಬ್ರಾಹ್ಮಣರು ನಮ್ಮನ್ನು ಹುಟ್ಟಿಸಿದ ಭಗವಂತನೇ ನಮ್ಮನ್ನು ಕಾಪಾಡುತ್ತಾನೆ. ನಾವು ನಮ್ಮ ಸಾಮರ್ಥ್ಯವನ್ನು ಕಾಪಾಡಿಕೊಂಡು ಇನ್ನೊಬ್ಬರಿಗೆ ಉಪದೇಶ ಮಾಡಬೇಕು ಎಂದು ಹುಣಸಿಹೊಳೆ ಕಣ್ವ ಮಠದ ಪೀಠಾಧಿಪತಿ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಸ್ವಾಮೀಜಿಗಳು ಹೇಳಿದರು.

ನಗರದ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದ ಶ್ರೀ ಭಾಸ್ಕರಾಚಾರ್ಯ ವೇದಿಕೆಯಲ್ಲಿ ನಡೆದ ಬ್ರಾಹ್ಮಣ ಶಕ್ತಿಸಂಗಮ- 2023 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಾಹ್ಮಣರು ಇನ್ನೊಬ್ಬರನ್ನು ರಕ್ಷಣೆ ಮಾಡಬೇಕು.  ನಮ್ಮ ರಕ್ಷಣೆಯನ್ನು ಪರಮಾತ್ಮ ಮಾಡುತ್ತಾನೆ.  ಬ್ರಾಹ್ಮಣರಿಗೆ ಆ ಪರಶುರಾಮನ ಆಶಿರ್ವಾದ ಇದೆ.  ನಾವು ಬ್ರಾಹ್ಮಣತ್ವ ಉಳಿಸಿ, ಬೆಳೆಸಬೇಕಾಗಿದೆ. ನಮ್ಮ ದೇಶ ಚೆನ್ನಾಗಿ ಇರಬೇಕು.  ನಾವು ಸರಿಯಾಗಿ ಇದ್ದಾಗ ಮಾತ್ರ ಜಗತ್ತು ಜಾಗೃತ ವಾಗಿರುತ್ತದೆ.  ನಾವು ಸಜ್ಜನರು ನಮಗೆ ಯಾತಕೆ ಭಯ ನಮ್ಮ ಸಾಮರ್ಥ್ಯ ಏನು ಎನ್ನುವುದನ್ನು ತೋರಿಸಬೇಕು ಎಂದು ಹೇಳಿದರು.

ಬಸವನಾಡು ವಿಜಯಪುರದಲ್ಲಿ ಬ್ರಾಹ್ಮಣ ಶಕ್ತಿಸಂಗಮ- 2023 ಕಾರ್ಯಕ್ರಮದ ಅಂಗವಾಗಿ ಭವ್ಯ ಮೆರವಣಿಗೆ ನಡೆಯಿತು

ಬ್ರಾಹ್ಮಣರು ಎಲ್ಲರಿಗೂ ಒಳಿತನ್ನು ಮಾಡಬೇಕು.  ಬ್ರಹ್ಮಜ್ಞಾನಿಗಳಾಗಿ ಇನ್ನೊಬ್ಬರಿಗೆ ಜ್ಞಾನವನ್ನು ಹಂಚಬೇಕಾಗಿದೆ.  ಪರಮಾತ್ಮ ನಮ್ಮನ್ನು ಕಾಪಾಡುತ್ತಾನೆ.  ಪರಮಾತ್ಮ ಇಲ್ಲದೇ ಒಂದು ಕಡ್ಡಿ ಹುಲ್ಲು ಕಡ್ಡಿಯೂ ಅಲುಗಾಡಲು ಸಾಧ್ಯವಿಲ್ಲ.  ಬ್ರಾಹ್ಮಣನ ಶಕ್ತಿಯನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ.  ಅದು ನಮ್ಮಲ್ಲಿಯೇ ಇರುತ್ತದೆ.  ಬ್ರಾಹ್ಮಣರ ವಿರುದ್ಧ ಯಾರು ಹೋಗುತ್ತಾರೋ ಅವರಿಗೆ ಶ್ರೇಯಸ್ಸು ದೊರೆಯುವುದಿಲ್ಲ.  ಬ್ರಾಹ್ಮಣರಿಗೆ ವಿದೇಯನಾಗಿ ಇದ್ದರೆ ಮಾತ್ರ ಅವರಿಗೆ ಆಯುರಾರೋಗ್ಯ, ಬುದ್ದಿವಂತಿಕೆ, ಶಕ್ತಿ ಎಲ್ಲವೂ ದೊರೆಯುತ್ತದೆ ಎಂದು ಅವರು ಹೇಳಿದರು.


ಮೈಸೂರಿನ ಸ್ವರ್ಣ ನರಸಿಂಹ ದತ್ತ ಪೀಠದ ಪ.ಪೂಜ್ಯ ಶ್ರೀ ಅರ್ಜುನ್ ಅವಧೂತ ಗುರು ಮಹಾರಾಜರು ಮಾತನಾಡಿ, ಕೆಲವರಲ್ಲಿ ಯಾತಕ್ಕೆ ನಾನು ಒಬ್ಬ ವಿಪ್ರನಾಗಿ ಹುಟ್ಟಬೇಕು ಎನ್ನುವ ಪ್ರಶ್ನೆ ಇದೆ.  ವಿಪ್ರಾ ಎಂದರೆ ವಿವೇಕ್ ಮತ್ತು ಪ್ರಜ್ಞೆ ಇವೆರಡನ್ನು ಇಟ್ಟುಕೊಳ್ಳಬೇಕು.  ಬ್ರಾಮಿಣ್ಯ ಎಂದರೆ ವಿಶ್ವಕ್ಕೆ ಬೆಳಕನ್ನು ನೀಡುವಂತವ. ಬ್ರಾಹ್ಮಣರು ಹುಟ್ಟು ಅದೊಂದು ಶಕ್ತಿ, ಚೈತನ್ಯ, ವಿಚಾರ್, ಪ್ರೇಮ, ವಿಶ್ವಾಸ ಹಾಗೂ ಆದರ್ಶ ಇಷ್ಟನ್ನು ಹೊಂದಿರುವ ನಾವು ಪುಣ್ಯವಂತರು ಎಂದು ಹೇಳಿದರು.

ಗುರು ಬ್ರಹ್ಮದೇವ ನಮಗೆ ಸಂಸ್ಕಾರವನ್ನು ಧಾರೆ ಎರೆದಿದ್ದಾರೆ.  ಇದು ವಿಜಯಪುರ ಅಲ್ಲ ಬ್ರಾಹ್ಮಣಪುರ ಎಂದು ಕರೆಯಬೇಕು.  ನಮ್ಮ ಹಿರಿಯರು ಕಾಶ್ಮೀರ ಬಿಟ್ಟು ಬರಬೇಕಾಯಿತು.  ಇನ್ನೂ ಕೆಲವು ವರ್ಷಗಳಲ್ಲಿ ನಾವು ಮತ್ತೆ ಕಾಶ್ಮೀರದಲ್ಲಿ ನೆಲೆ ಕಲ್ಪಿಸಕೊಳ್ಳುತ್ತೇವೆ. ಸ್ಥೈರ್ಯ, ಧೈರ್ಯ, ಸಾಹಸ ಮೂರನ್ನು ನಾವು ಪಡೆದುಕೊಂಡಿದ್ದೇವೆ.  ನಾವು ಎಲ್ಲರನ್ನು ಒಂದುಗೂಡಿಸಿಕೊಂಡು ಸಂಸ್ಕಾರ ನೀಡುವುದೇ ಬ್ರಾಹ್ಮಣತ್ವ ಎಂದು ಅವರು ಹೇಳಿದರು.

 

 

ಮೀಸಲಾತಿ ಬೇಕು, ಕ್ಯಾಟಗರಿ ಬೇಕು ಎನ್ನುವವರು ಕೇಳಿ.  ನಾವು ಹುಟ್ಟಿದ್ದೆ ಮೆರೀಟ್‌ನಲ್ಲಿ.  ನಮಗೇಕೆ ಕ್ಯಾಟಗೇರಿ ಬೇಕು? ನಾವು ಶ್ರೇಷ್ಠ ಸಮಾಜದಲ್ಲೇ ಹುಟ್ಟಿದ್ದೇವೆ ಎನ್ನುವ ಮೂಲಕ ನಾವು ನಮ್ಮತನವನ್ನು ಯಾವತ್ತಿಗೂ ಬದಲಾಯಿಸಬಾರದು ಎಂದು ಅವರು ಹೇಳಿದರು.

ರಾಮ ಹುಟ್ಟಿ ಬರುವುದು ಧರ್ಮ ಸ್ಥಾಪನೆಗೆ. ರಾಮ ರಾವಣನನ್ನು ಕೊಲ್ಲುವಾಗ ಕೇಳುತ್ತಾನೆ. ನಿನ್ನ ಕೊನೆಯ ಆಸೆ ಏನು ಎಂದು ಕೇಳುತ್ತಾನೆ. ಆಗ ರಾವಣ ಹೇಳುತ್ತಾನೆ.  ನಾನು ಮುಂದಿನ ಜನ್ಮದಲ್ಲಿ ಶ್ರೇಷ್ಠ ಬ್ರಾಹ್ಮಣನಾಗಿ ಹುಟ್ಟಬೇಕು ಎಂದು. ಆಗ ರಾಮ ತಥಾಸ್ತು ಎನ್ನುತ್ತಾನೆ.  ಮುಂದೆ ರಾವಣ ಪರಶುರಾಮನ ಅವತಾರದಲ್ಲಿ ಹುಟ್ಟುತ್ತಾನೆ.  ನಾವು ಕುಳಿತು ತಪಸ್ಸು ಮಾಡಿದರೆ ಅಲ್ಲಿರುವ ಪಾಕಿಸ್ತಾನವೇ ಮುಳುಗಿ ಹೋಗುತ್ತದೆ.  ಅಷ್ಟು ಶಕ್ತಿಯನ್ನು ಶಾರದೆ ನಮಗೆ ನೀಡಿದ್ದಾಳೆ. ನಾವೇಕೆ ಕಡಿಮೆ ಎಂದುಕೊಳ್ಳಬೇಕು. ಬ್ರಾಹ್ಮಣ ಭಜನೆ, ಜಪವನ್ನು ಮಾಡಬೆಕು.  ವೀರ ಸಾವರ್ಕರ್‌ನನ್ನು ಹುಟ್ಟಿಸಿದ್ದು, ಬ್ರಾಹ್ಮಣ ಕುಲದಲ್ಲಿ. ಆರ್.ಎಸ್.ಎಸ್ ಹುಟ್ಟಿಸಿದ ಪುಣ್ಯಾತ್ಮ ಕೂಡ ಬ್ರಾಹ್ಮಣ.  ಬ್ರಾಹ್ಮಣರನ್ನು ಅಲ್ಲಾಡಿಸಿದರೆ ಈ ಜಗತ್ತು ಅಲ್ಲಾಡುತ್ತದೆ ಎಂದು ಮಹಾರಾಜರು ಹೇಳಿದರು.

 

ವಿಜಯಪುರದ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಮದ್ವಾಚಾರ್ಯ ಮೊಕಾಶಿ ಮಾತನಾಡಿ, ಒಬ್ಬ ಬ್ರಾಹ್ಮಣ ಇಡೀ ಜಗತ್ತನ್ನೇ ನಡುಗಿಸಬಲ್ಲ. ಎನ್ನುವುದಕ್ಕೆ ಪರಶುರಾಮನೇ ಸಾಕ್ಷಿ. ನಾವು ಸಂಘಟಿತರಾದರೆ ಬಲ ಹೆಚ್ಚಾಗುತ್ತದೆ. ಬ್ರಾಹ್ಮಣರು ಎಂದಿಗೂ ಯಾರಿಗೂ ಕೈ ಒಡ್ಡಿಲ್ಲ. ಓಂ ಭವತಿ ಬಿಕ್ಷಾಂದೆ ಎಂದು ಒಂದನ್ನೇ ಬೇಡುತ್ತಾರೆ. ಇದು ತಮಗಾಗಿ ಅಲ್ಲ ಮಕ್ಕಳ ಶಿಕ್ಷಣ, ಅನ್ನಕ್ಕಾಗಿ ಎಂದು ಹೇಳಿದರು.
ದಾನ ಯಾರಿಗೆ ಕೊಡಬೇಕು ಎಂದರೆ, ಪಡೆದುಕೊಂಡು ದಾನವನ್ನು ಇನ್ನೊಬ್ಬರಿಗೆ ಕೊಡುವಂತವರಿಗೆ ನೀಡಬೇಕು.  ಅದಕ್ಕಾಗಿಯೇ ಬ್ರಾಹ್ಮಣನಿಗೆ ದಾನ ನೀಡು ಎಂದು ಹೇಳುತ್ತಾರೆ. ಬ್ರಾಹ್ಮಣರು ದಾನವನ್ನು ಮತ್ತೋಬ್ಬರಿಗೆ ಹಂಚಿ ಬಿಡುತ್ತಾರೆ.  ದಾನ ಮಾಡಿ ಮಾಡಿಯೇ ಇಂದು ಬ್ರಾಹ್ಮಣರು ಖಾಲಿಯಾಗಿದ್ದಾರೆ ಎಂದು ಅವರು ಹೇಳಿದರು.

ವೈದಿಕ ಸಂಪತ್ತಿನಿಂದಲೇ ಬ್ರಾಹ್ಮಣರು ಮುಂದೆ ಬಂದಿದ್ದಾರೆ.  ನಾವು ಆದ್ಯಾತ್ಮಿಕ ಸಂಪತ್ತನ್ನು ಬೆಳಸಿಕೊಳ್ಳಬೇಕು.  ರಾಮಾನುಜಾಚಾರ್ಯರು, ಮದ್ವಾಚಾರ್ಯರು ಸಮಸ್ತ ಜನರಿಗೆ ಆದ್ಯಾತ್ಮಿದ ದಾನವನ್ನು ನೀಡಿದ್ದಾರೆ.  ಆಚಾರ್ಯರು ಭೌತಿಕ ಸಂಪತ್ತಿನಿಂದ ಶ್ರೀಮಂತರಾಗಿಲ್ಲ.  ಆದ್ಯಾತ್ಮಿದಿಂದ ಶ್ರೀಮಂತರಾಗಿದ್ದಾರೆ.  ನಮಗೆ ಎಷ್ಟು ಬೇಕು ಅಷ್ಟನ್ನು ಇಟ್ಟುಕೊಂಡು ಉಳಿದದನ್ನು ದಾನ ಮಾಡಬೇಕು.  ನಾವು ಬೇರೆಯವರಿಗೆ ಕೆಟ್ಟದ್ದು ಮಾಡಲು ಅಲ್ಲ. ಒಳ್ಳೆಯದನ್ನು ಮಾಡಲು ಬಂದಿದ್ದೇವೆ. ಜನಿವಾರ ಎಂದರೆ ಹುಟ್ಟಿನ ದಾರ. ನಾವು ಗೋತ್ರಗಳನ್ನು ಅನ್ನುವುದರಿಂದ ಗುರುವಿನಲ್ಲಿರುವ ಜ್ಞಾನ ನಮಲ್ಲಿ ಬರುತ್ತದೆ. ಜಗತ್ತಿಗೆ ಶಿಕ್ಷಣ ಕೊಟ್ಟಿದ್ದು ಬ್ರಾಹ್ಮಣರು. ನಾವು ಶಿಕ್ಷಣ ಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಓಐ ಸಂಘಟನೆ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸುಖ್ಬಿರ ಶರ್ಮಾ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗದೀಶ ಧನಂಜಯ ಮನಸಬದಾರ, ಪ್ರೀಯಾ ಪುರಾಣಿಕ, ಸಂಘಟನೆ ಜಿಲ್ಲಾಧ್ಯಕ್ಷ ಸಂತೋಷಕುಮಾರ ದೇಶಪಾಂಡೆ, ಆನಂದ ಕುಲಕರ್ಣಿ, ಶಂಕರಭಟ್ಟ ಅಗ್ನಿಹೋತ್ರಿ, ಕೃಷ್ಣ ಕೋಲ್ಹಾರ ಕುಲಕರ್ಣಿ, ಹಿರಿಯ ಪತ್ರಕರ್ತ ಗೋಪಾಲ ನಾಯಕ ಮುಂಾತದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌