ಕಾಖಂಡಕಿ, ಬರಟಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ- ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ

ವಿಜಯಪುರ: ಬಬಲೇಶ್ವರ ತಾಲೂಕಿನ ಕಾಖಂಡಕಿ ಮತ್ತು ತಿಕೋಟಾ ತಾಲೂಕಿನ ಬರಟಗಿ ಗ್ರಾಮಗಳಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರಗಳಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ. ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ತೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಈ ಶಿಬಿರಗಳನ್ನು ಆಯೋಜಿಸಲಾಗಿತ್ತು.

ಕಾಖಂಡಕಿ ಶಿಬಿರ

ಕಾಖಂಡಕಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ೯೫೦ ಜನರ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸಲಾಯಿತು.  ಅಲ್ಲದೇ, ೧೩೧ ಜನರಿಗೆ ಹೆಚ್ಚಿನ ತಪಾಸಣೆಗೆ ಶಿಫಾರಸು ಮಾಡಲಾಯಿತು.  ಈ ಶಿರದಲ್ಲಿ ೧೩ ಜನ ರಕ್ತ ತಪಾಸಣೆ ನಡೆಸಿದರು.

ಕಾಖಂಡಕಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಶಿಬಿರದಲ್ಲಿ ಡಾ. ವಿಕಾಸ ದೇಸಾಯಿ ರೋಗಿಗಳ ತಪಾಸಣೆ ನಡೆಸಿದರು

ಬಿ ಎಲ್ ಡಿ ಇ ಆಸ್ಪತ್ರೆಯ ಮೆಡಿಸೀನ್ ವಿಭಾಗದ ಡಾ. ಶ್ರೀಧರ ಪಾಟೀಲ, ಶಸ್ತ್ರಚಿಕಿತ್ಸಾ ವಿಭಾಗದ ಶ್ರುತಿ ಶೀಳಿನ, ಚರ್ಮರೋಗ ವಿಭಾಗದ ಡಾ. ಶ್ರುತಿ ಕುಲಕರ್ಣಿ, ನೇತ್ರತಜ್ಞ ಡಾ. ಪ್ರಿಯಾಂಶು ಮೌರ್ಯ, ಚಿಕ್ಕಮಕ್ಕಳ ವೈದ್ಯ ಡಾ. ರವೀಂದ್ರ ನಾಗನೂರ, ಎಲುವು ಮತ್ತು ಕೀಲು ತಜ್ಞ ಡಾ. ನಾಗೇಶ ಇಂಗಿನಶೆಟ್ಟಿ, ಕಿವಿ, ಮೂಗು, ಗಂಟಲು ವೈದ್ಯೆ ಡಾ. ಶ್ವೇತಾ, ದಂತವೈದ್ಯ ಡಾ. ವಿಕಾಸ ದೇಸಾಯಿ ಮತ್ತು ಸಿಬ್ಬಂದಿ ನಾನಾ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಮುಖಂಡರಾದ ರಾಮನಗೌಡ ಪಾಟೀಲ, ಮಲ್ಲಿಕಾರ್ಜುನ ಪರಸಣ್ಣವರ, ಬಿ. ಎಂ. ವಾಲಿಕಾರ, ಮಲ್ಲಿಕಾರ್ಜುನ ಕೋಟ್ಯಾಳ, ಚಂದ್ರಶೇಖರ ಸೀತಿಮನಿ, ರೇಣುಕಾ ಸೀತಿಮನಿ, ಶಿವಾನಂದ ಕೋಲಕಾರ, ಚಾಂದಸಾಬ ಇನಾಮದಾರ ಮುಂತಾದವರು ಉಪಸ್ಥಿತರಿದ್ದರು.

ಬರಟಗಿ ಶಿಬಿರ

ಬರಟಗಿ ಗ್ರಾಮದಲ್ಲಿ ನಡೆದ ಶಿಬಿರದಲ್ಲಿ ೩೯೪ ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.  ೮೯ ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಯಿತು.

ಬಿ ಎಲ್ ಡಿ ಇ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ವೈದ್ಯರಾದ ಡಾ. ಮಂಜುನಾಥ ಸಾವಂತ, ಮೆಡಿಸೀನ್ ವಿಭಾಗದ ಡಾ. ಶ್ರವಣಕುಮಾರ, ನೇತ್ರತಜ್ಞ ಡಾ. ಅರ್ಕಪ್ರವ ರೆ, ಚಿಕ್ಕಮಕ್ಕಳ ತಜ್ಞ ಎಸ್. ಎಸ್. ಕಲ್ಯಾಣಶೆಟ್ಟರ, ಎಲುವು ಮತ್ತು ಕೀಲು ವಿಭಾಗದ ಡಾ. ಸಂದೀಪ ನಾಯಕ, ಚರ್ಮರೋಗ ತಜ್ಞ ಡಾ. ವಜೂದ ಎ, ಕಿವಿ, ಮೂಗು, ಗಂಟಲು ವಿಭಾಗದ ಡಾ. ಮನಾಲಿ ಭಟ್ ಮತ್ತು ಸಿಬ್ಬಂದಿ ಉಚಿತ ಆರೋಗ್ಯ ತಪಾಸಣೆ ನಡೆಸಿದರು.


ಈ ಸಂದರ್ಭದಲ್ಲಿ ಮುಖಂಡರಾದ ಬಿ. ಜಿ. ಪಾಟೀಲ, ಗುರುಪಾದಗೌಡ ದಾಶ್ಯಾಳ, ಸಂಗಮೇಶ ದಾಶ್ಯಾಳ, ದತ್ತಾ ಕಾಟಕರ, ಬಸುಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌