ಜಿಲ್ಲಾ, ತಾಲೂಕು ತಳವಾರ ಮಹಾಸಭಾ ಸಭೆ- ನೂತನ ಪದಾಧಿಕಾರಿಗಳ ಆಯ್ಕೆ ನಾನಾ ಮುಖಂಡರು ಭಾಗಿ
ವಿಜಯಪುರ: ಜಿಲ್ಲಾ ಮತ್ತು ತಾಲೂಕು ಮಟ್ಟದ ತಳವಾರ ಮಹಾಸಭಾ ಸಮಿತಿ ಸಭೆ ನಗರದಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಮಾತನಾಡಿದ ಮಹಾಸಭಾದ ಸದಸ್ಯ ಸುರೇಶಗೌಡ ಪಾಟೀಲ, ಇಂದು ನಾವುಗಳು ಅಧಿಕಾರ ಸ್ವೀಕರಿದ್ದು, ಅತೀವ ಸಂತಸದ ಸಂಗತಿಯಾಗಿದೆ. ಸಮಾಜದ ಕಳಕಳಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದು ನಮ್ಮೆಲ್ಲ ಆಧ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ತಳವಾರ ಸಮುದಾಯಕ್ಕೆ ದೊರಕಬೇಕಾದ ಮೂಲಸೌಕರ್ಯ, ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸರಕಾರಕ್ಕೆ ಒತ್ತಡ ಹಾಕುವುದರಿಂದ ಸಮಾಜದ ವಿದ್ಯಾರ್ಥಿಗಳಿಗೆ, ರೈತರಿಗೆ ಅನುಕೂಲವಾಗಲಿದೆ ಎಂದು ಅವರು […]
ಕೃಷಿ ಪರಿಕರ ಮಾರಾಟಗಾರರು ರೈತರು ಮತ್ತು ಕೃಷಿ ವಿಜ್ಞಾನಿಗಳ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು- ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ಕೃಷಿ ಪರಿಕರ ಮಾರಾಟಗಾರರು ವಿಜ್ಞಾನಿಗಳು ಮತ್ತು ರೈತರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಕೃಷಿ ವಿಸ್ತರಣೆ ಸೇವೆಗಳ ಡಿಪ್ಲೋಮಾ(ದೇಸಿ) ಕೋರ್ಸಿನ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಹೊಸ ಕೋರ್ಸಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ತರಬೇತಿ ಪಡೆದಿರುವ ಶಿಬಿರಾರ್ಥಿಗಳು ತಾವು ಗಳಿಸಿರುವ ಕೃಷಿ ಜ್ಞಾನದಿಂದ ಕೃಷಿ ರಂಗದ ಅಭಿವೃದ್ಧಿಗೆ ನೆರವಾಗಬೇಕು. ಕೃಷಿ ಪದ್ಧತಿಗಳು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವಲ್ಲಿ ಎದುರಾಗುವ ಸಮಸ್ಯೆಗಳನ್ನು […]
ಮಾ. 9 ರಿಂದ 29ರ ವರೆಗೆ ದ್ವಿತೀಯ ಪಿಯು ಪರೀಕ್ಷೆ: ಜಿಲ್ಲೆಯಲ್ಲಿ ವ್ಯವಸ್ಥಿತ, ಪಾರದರ್ಶಕವಾಗಿ ನಡೆಸಲು ಡಾ. ದಾನಮ್ಮನವರ ಸೂಚನೆ
ವಿಜಯಪುರ: ಜಿಲ್ಲಾದ್ಯಂತ ಮಾ. 9 ರಿಂದ 29ರ ವರೆಗೆ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ವ್ಯವಸ್ಥಿತ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲಾದ್ಯಂತ 56 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 32268 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 30178 ಅಭ್ಯರ್ಥಿಗಳು ಈ ವರ್ಷಕ್ಕೆ […]
ವಿಜಯಪುರದಲ್ಲಿ ಶಿವಾಜಿ ಜಯಂತಿ ಆಚರಣೆ- ಕಾರ್ಯಕ್ರಮದಲ್ಲಿ ಯತ್ನಾಳ ಹೇಳಿದ್ದೇನು ಗೊತ್ತಾ?
ವಿಜಯಪುರ: ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಬಿಜೆಪಿಯಲ್ಲಿರುವ ತಮ್ಮ ವಿರೋಧಿಗಳ ಹೆಸರು ಹೇಳದೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ನಗರದಲ್ಲಿ ಶಿವಾಜಿ ಚೌಕಿನಲ್ಲಿ ಆಯೋಜಿಸಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಧರಿಸುತ್ತಿದ್ದ ಪೇಟಾ ಮಾದರಿಯ ಪೇಟಾ ಧರಿಸಿ ಮಾತನಾಡಿದ ಅವರು ಹಿಂದುತ್ವ ಪ್ರತಿಪಾದಿಸುತ್ತಲೇ ತಮ್ಮ ಕಾಂಗ್ರೆಸ್ ಹಾಗೂ ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಛತ್ರಪತಿ ಶಿವಾಜಿ ಮಹಾರಾಜರೂ ಯುದ್ಧ ಮಾಡಿದ್ದಾರೆ. ಅವರ ಸೈನ್ಯದಲ್ಲಿಯೂ ಮುಸ್ಲಿಂ ಸೈನಿಕರಿದ್ದರು. ಶಿವಾಜಿ ಮಹಾರಾಜರು […]