ವಿಜಯಪುರ: ಜಿಲ್ಲಾ ಮತ್ತು ತಾಲೂಕು ಮಟ್ಟದ ತಳವಾರ ಮಹಾಸಭಾ ಸಮಿತಿ ಸಭೆ ನಗರದಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಮಾತನಾಡಿದ ಮಹಾಸಭಾದ ಸದಸ್ಯ ಸುರೇಶಗೌಡ ಪಾಟೀಲ, ಇಂದು ನಾವುಗಳು ಅಧಿಕಾರ ಸ್ವೀಕರಿದ್ದು, ಅತೀವ ಸಂತಸದ ಸಂಗತಿಯಾಗಿದೆ. ಸಮಾಜದ ಕಳಕಳಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದು ನಮ್ಮೆಲ್ಲ ಆಧ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ತಳವಾರ ಸಮುದಾಯಕ್ಕೆ ದೊರಕಬೇಕಾದ ಮೂಲಸೌಕರ್ಯ, ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸರಕಾರಕ್ಕೆ ಒತ್ತಡ ಹಾಕುವುದರಿಂದ ಸಮಾಜದ ವಿದ್ಯಾರ್ಥಿಗಳಿಗೆ, ರೈತರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಇದೇ ವೇಳೆ ವಿಜಯಪುರ ಜಿಲ್ಲಾ ತಳವಾರ ಮಹಾಸಭೆ ಅಧ್ಯಕ್ಷರಾಗಿ ಪ್ರಕಾಶ ಸೊನ್ನದ, ಉಪಾಧ್ಯಕ್ಷರಾಗಿ ಅನೀಲಕುಮಾರ ಜಮಾದಾರ, ಸಾಹೇಬಗೌಡ ನಿಂಗಪ್ಪ ಬಿರಾದಾರ ಪ್ರಧಾನ ಕಾರ್ಯದರ್ಶಿ, ಭರತ ಸಿದ್ರಾಮಪ್ಪ ಕೋಳಿ ಸಹಕಾರ್ಯದರ್ಶಿ, ಅಂಬಣ್ಣ ಪರಮಣ್ಣ ಕಲಮನಿ, ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.
ಮಹಾದೇವಪ್ಪ ಧರೆಪ್ಪ ಗಹ್ಯಾಳ, ಕಾಶಿನಾಥ ಮಲ್ಲಪ್ಪ ತಳವಾರ, ಸಣ್ಣಪ್ಪ ಬಸಪ್ಪ ತಳವಾರ, ರಾಜು ರಾಮಚಂದ್ರ ಕೋಳಿ, ಶಿವಶಂಕರ ರಾಜರಾಮ ಗಿಡಕಾರ, ಅಪ್ಪಾಜಿ ಭೀಮರಾಯ ಸುಣಗಾರ, ಅಶೋಕ ಶ್ರೀಶೈಲ ಕೋಲಕಾರ, ವಿಠ್ಠಲ ಶಂಕರ ಯರಗಲ, ಹಣಮಂತ ಮಲ್ಲಿಕಾರ್ಜುನ, ಕಾಮನಕೇರಿ, ಸಂತೋಷ ಸಂಗಪ್ಪ ತಟಗಾರ ಮಹಾಸಭಾ ಭವನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ತಾಲೂಕು ತಳವಾರ ಮಹಾಸಭಾ ಸಮಿತಿ ಸಭೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಶ್ರೀಮಂತ ರಾಮಣ್ಣ ತಳವಾರ ಅವರನ್ನು ಆಯ್ಕೆ ಮಾಡಲಾಯಿತು. ಬಾಳು ಶಿವಪ್ಪ ಮೆಟಗಾರ ಉಪಾಧ್ಯಕ್ಷರಾಗಿ, ಸುರೇಶ ಸಿದರಾಯ ಕೋಲಕಾರ ಪ್ರಧಾನ ಕಾರ್ಯದರ್ಶಿಯಾಗಿ, ಮಹೇಶ ವಸಂತ ಕಂಬೋಗಿ ಸಹ ಕಾರ್ಯದರ್ಶಿ, ಪರಶುರಾಮ ಭೀಮಪ್ಪ ವಾಲಿಕಾರ ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.
ನಗರ ಅಧ್ಯಕ್ಷರಾಗಿ ಪ್ರವೀಣ ಅಶೋಕ ನಾಟೀಕಾರ, ಸದಸ್ಯರನ್ನಾಗಿ ನಿಂಗಪ್ಪ ಕರೆಪ್ಪ ಹಂಗರಗಿ ಸುನೀಲ ಶಿವಪ್ಪ ತಳವಾರ, ನಿಂಗಪ್ಪ ಸೋಮಪ್ಪ ಕೂಟನೂರ, ಸಿದ್ದಪ್ಪ ತಿಪರಾಯ ಹಂಚನಾಳ, ಬಸವರಾಜ ಸೋಮಪ್ಪ ತಳವಾರ, ಚಂದ್ರಾಮ ಶಿವಪ್ಪ ಯಾಳವಾರ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾಸಭಾ ಸದಸ್ಯರಾದ ಸುರೇಶಗೌಡ ಪಾಟೀಲ, ಸಮಾಜದ ಮುಖಂಡರಾದ ಎಸ್. ಎ. ದೋಗಿನಾಳ, ಎಂ. ಎನ್. ಚೋರಗಸ್ತಿ, ಸುರೇಶ ಕೋಲಕಾರ, ಶಿವಾನಂದ ಅಂಬಿಗೇರ, ಅಶೋಕ ಅಂಬಿಗೇರ, ಅಯ್ಯಣ್ಣ ತಳವಾರ, ಅಪ್ಪು ಕೋಲಕಾರ, ಅಮೋಘ ತಳವಾರ, ಪರಮಾನಂದ ಕೋಳಿ, ಕಮತಗಿ. ನಿಂಗಪ್ಪ ಹಂಗರಗಿ, ಹನಮಂತ ನಾಯ್ಕೋಡಿ, ಶಂಕರ ವಾಲಿಕರ, ರಾಜು ವಾಲಿಕಾರ, ಮೌನೇಶ ಸಗರ, ರವಿ ವಗ್ಗಿ, ಈರಣ್ಣ ಕೋಲಕಾರ, ಜಕ್ಕಣ್ಣವರ, ಶಿವು ಗುರಿಕಾರ, ಧರ್ಮಣ್ಣ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.