ಕಾನಿಪ ಪತ್ರಕರ್ತರ ದತ್ತಿ ನಿಧಿಗೆ ರೂ. 1.10 ಲಕ್ಷ ಹಣ ನೀಡಿದ ಹಿರಿಯ ಪತ್ರಕರ್ತ ಟಿ. ಕೆ. ಮಲಗೊಂಡ- ರಾಜ್ಯಾಧ್ಯಕ್ಷ ತಗಡೂರ ಅವರಿಂದ ಅಭಿನಂದನೆ
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) ದತ್ತಿ ನಿಧಿಗೆ ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತ ಟಿ. ಕೆ. ಮಲಗೊಂಡ ಅವರು ರೂ. 1.10ಲಕ್ಷ ಹಣ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಂಘದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ದತ್ತಿ ನಿಧಿ ಸ್ಥಾಪಿಸಲು ಮಲಗೊಂಡ ಅವರು ಹಣ ನೀಡಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಮಲಗೊಂಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಅಪರಾಧಕ್ಕೆ ಸವಾಲು ಪತ್ರಿಕೆಯ ಸಂಪಾದಕರಾದ ಟಿ. ಕೆ. ಮಲಗೊಂಡ ಅವರು, ಪ್ರತಿ ವರ್ಷ ಕೆಯುಡಬ್ಲ್ಯೂಜೆ ಪ್ರಶಸ್ತಿ ಪ್ರದಾನ ಮಾಡುವ […]
ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ದಿನ ಆಚರಣೆ
ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ದೇಶದ ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯಾಗುತ್ತದೆ ಎಂದು ವಿಜ್ಞಾನ ಸಂಘದ ಸಂಯೋಜಕ ಡಾ. ಜೆ. ಎಸ್. ಪಟ್ಟಣಶೆಟ್ಟಿ ಹೇಳಿದರು. ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ವಿಜ್ಞಾನ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ದೇಶದ ಎಲ್ಲ ಕ್ಷೇತ್ರಗಳ ಸಮತೋಲಿತ ಪ್ರಗತಿಗೆ ಅನುಕೂಲವಾಗುತ್ತದೆ. ಮಾನವ ಜಗತ್ತಿನ ಯಾವ ಭಾಗದಲ್ಲಿದ್ದರೂ ಇದರ […]
ವಿಟಿಯು ಪರೀಕ್ಷೆ- ವಿಜಯಪುರ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ಎಂ.ಟೆಕ್ ವಿದ್ಯಾರ್ಥಿಗಳಿಗೆ ರ್ಯಾಂಕ್
ವಿಜಯಪುರ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 2021-22ರಲ್ಲಿ ನಡೆಸಿದ ಎಂ.ಟೆಕ್. ಪರೀಕ್ಷೆಯಲ್ಲಿ ವಿಜಯಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ವಿವಿಗೆ ರ‌್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಎಂ.ಟೆಕ್(ಡಿಜಿಟಲ ಕಮ್ಯೂನಿಕೆಷನ್ ಮತ್ತು ನೆಟವರ್ಕಿಂಗ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಷನ್ ವಿಭಾಗದದಲ್ಲಿ ಮಾಧುರಿ ಹಜೇರಿ 2ನೇ ಮತ್ತು ಮೇಘ ಚಿಪ್ಪಲಕಟ್ಟಿ 5ನೇ ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನಗೆೆ ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತ ಮಂಡಳಿ, […]
ಅಕ್ವೇರಿಯಂ, ವೈನ್ ಪಾರ್ಕ್ ಗೆ ಜಿ. ಪಂ. ಸಿಇಓ ರಾಹುಲ ಶಿಂಧೆ ಭೇಟಿ, ಕಾಮಗಾರಿ ಪರಿಶೀಲನೆ
ವಿಜಯಪುರ: ಮೀನುಗಾರಿಕೆ ಅಕ್ವೇರಿಯಂ ಹಾಗೂ ತೊರವಿ ಗ್ರಾಮದಲ್ಲಿನ ವೈನ್ ಪಾರ್ಕಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದ ಹತ್ತಿರವಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಮೀನುಗಾರಿಕೆ ಇಲಾಖೆಯ ಮುದ್ದು ಮೀನು ಸಂಗ್ರಾಲಯದ ಉನ್ನತೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಪೆಟ್ ಬಾಂಡಿಂಗ್ ಏಜೆನ್ಸಿ ಬೆಂಗಳೂರು ಅವರಿಂದ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಲ್ಲಿ […]
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಶಾಸಕ ಡಾ. ದೇವಾನಂದ ಚವ್ಹಾಣ
ವಿಜಯಪುರ: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸುವ ಮೂಲಕ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮಾನವೀಯತೆ ಮೆರೆದಿದ್ದಾರೆ. ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ತೆರಳಿದ್ದ ಶಾಸಕರು ಮರಳಿ ಬರುವಾಗ ದೇವರ ಹಿಪ್ಪರಗಿ- ಸಿಂದಗಿ ರಸ್ತೆಯಲ್ಲಿ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ನಾಲ್ಕೈದು ಜನರಿಗೆ ತೀವ್ರ ಗಾಯಗಳಾಗಿ ನರಳಾಡುತ್ತಿದ್ದರು. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಸಂದರ್ಭದಲ್ಲಿ ಕಾರಿನಿಂದ ಇಳಿದ ಶಾಸಕರು ಕೂಡಲೇ ಆ್ಯಂಬುಲನ್ಸ್ ಗೆ ಕರೆ ಮಾಡಿ ಎಲ್ಲರನ್ನು ಅದರಲ್ಲಿ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟರು. […]
ಭೀಮಾ ತೀರದ ಚಡಚಣ ಸಹೋದರರ ಕೊಲೆ ಆರೋಪ ಪ್ರಕರಣ- ಮಹಾದೇವ ಸಾಹುಕಾರ ಭೈರಗೊಂಡ ಮತ್ತೀತರರ ವಿಚಾರಣೆ ಏ. 10ಕ್ಕೆ ಮುಂದೂಡಿದ ನ್ಯಾಯಾಲಯ
ವಿಜಯಪುರ: ಜಿಲ್ಲೆಯ ಭೀಮಾ ತೀರದ ಉಮರಾಣಿ ಗ್ರಾಮದ ಚಡಚಣ ಸಹೋದರರ ಕೊಲೆ ಆರೋಪ ಪ್ರಕರಣದ ವಿಚಾರಣೆಯನ್ನು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಏ. 10ಕ್ಕೆ ಮುಂದೂಡಿದೆ. ಚಡಚಣ ಸಹೋದರರಾದ ಧರ್ಮರಾಜ ಚಡಚಣ ನಕಲಿ ಎನಕೌಂಟರ್ ಆರೋಪ ಮತ್ತು ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಪ್ರಕರಣದ ಕುರಿತು ಬೆಳಿಗ್ಗೆ ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏ. 10ಕ್ಕೆ ನಿಗದಿ ಮಾಡಿ ಮುಂದೂಡಿತು. ಈ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಹಾದೇವ ಸಾಹುಕಾರ […]