ವಿಟಿಯು ಪರೀಕ್ಷೆ- ವಿಜಯಪುರ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ಎಂ.ಟೆಕ್ ವಿದ್ಯಾರ್ಥಿಗಳಿಗೆ ರ್ಯಾಂಕ್

ವಿಜಯಪುರ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 2021-22ರಲ್ಲಿ ನಡೆಸಿದ ಎಂ.ಟೆಕ್. ಪರೀಕ್ಷೆಯಲ್ಲಿ ವಿಜಯಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ವಿವಿಗೆ ರ‌್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಎಂ.ಟೆಕ್(ಡಿಜಿಟಲ ಕಮ್ಯೂನಿಕೆಷನ್ ಮತ್ತು ನೆಟವರ್ಕಿಂಗ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಷನ್ ವಿಭಾಗದದಲ್ಲಿ ಮಾಧುರಿ ಹಜೇರಿ 2ನೇ ಮತ್ತು ಮೇಘ ಚಿಪ್ಪಲಕಟ್ಟಿ 5ನೇ ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಮಾಧುರಿ ಹಜೇರಿ
ಮೇಘ ಚಿಪ್ಪಲಕಟ್ಟಿ

ವಿದ್ಯಾರ್ಥಿಗಳ ಸಾಧನಗೆೆ ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ವಿಭಾಗದ ಮುಖ್ಯಸ್ಥ ಡಾ. ಉಮೇಶ ದೀಕ್ಷಿತ ಹಾಗೂ ಬೋಧಕ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದು, ಶುಭ ಕೋರಿದ್ದಾರೆ.

 

Leave a Reply

ಹೊಸ ಪೋಸ್ಟ್‌