ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ದಿನ ಆಚರಣೆ

ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ದೇಶದ ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯಾಗುತ್ತದೆ ಎಂದು ವಿಜ್ಞಾನ ಸಂಘದ ಸಂಯೋಜಕ ಡಾ. ಜೆ. ಎಸ್. ಪಟ್ಟಣಶೆಟ್ಟಿ ಹೇಳಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ವಿಜ್ಞಾನ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ದೇಶದ ಎಲ್ಲ ಕ್ಷೇತ್ರಗಳ ಸಮತೋಲಿತ ಪ್ರಗತಿಗೆ ಅನುಕೂಲವಾಗುತ್ತದೆ.  ಮಾನವ ಜಗತ್ತಿನ ಯಾವ ಭಾಗದಲ್ಲಿದ್ದರೂ ಇದರ ಸದ್ಬಳಕೆಯಿಂದ ಶಾಂತಿ‌ ನೆಮ್ಮದಿಯಿಂದ ಸುಖಮಯ ಜೀವನ ನಡೆಸಲು ಸಾಧ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಮನ್ ಪರಿಣಾಮ ಕುರಿತು ಆರ್ಶಿಯಾ, ವಿದ್ಯಾಶ್ರೀ ಪಾಟೀಲ, ರುದ್ರಮ್ಮಾ ಗೂಳಿ ಮತ್ತು ಭೌತ ವಿಜ್ಞಾನಿಗಳ‌ ಕೊಡುಗೆಗಳ ಕುರಿತು ಪಲ್ಲವಿ ಹಿರೇಮಠ, ಅಕ್ಷತಾ ಗಡ್ಡಿ, ಅಮೂಲ್ಯ ಹರಿಗಲ ಹಾಗೂ ಪವಿತ್ರಾ ಶಿಳೀನ ಮಾತನಾಡಿದರು.

ವೈಷ್ಣವಿ, ಪುಷ್ಪಾ, ಪ್ರೀತಿ ಮತ್ತು ಪರವೀನ ಅವರು ವೈಜ್ಞಾನಿಕ ಚಟುವಟಿಕೆಗಳ ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಿದರು.

ಭಾರತ- ಎಲ್ಲ ವಿಜ್ಞಾನಿಗಳಿಗಾಗಿ ವಿಜ್ಞಾನ ಎಂಬ ಶೀರ್ಷಿಕೆ ಅಡಿ ಐಸಿಟಿ ಮೂಲಕ ಪ್ರಶಿಕ್ಷಣಾರ್ಥಿಗಳಾದ ಪ್ರಿಯಾಂಕಾ ಮತ್ತು ಅಲ್ಲಭಕ್ಷ ವಿವರಣೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ. ವೈ. ಖಾಸನೀಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಬೋಧಕ  ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಮಹಮದ ಇಸಾಕ್ ಪ್ರಾರ್ಥಿಸಿದರು.  ಅಸ್ಲಾಂ ನದಾಫ ಸ್ವಾಗತಿಸಿದರು.  ಶ್ರೀಧರ ಝೇಂಡೆ ವಿಜ್ಞಾನ ಗೀತೆ ಹಾಡಿದರು.  ರಶ್ಮಿ‌ಮತ್ತು ಅಕ್ಷತಾ ನಿರೂಪಿಸಿದರು.  ಅಶ್ವಿನಿ ಹಜೇರಿ ವಂದಿಸಿದರು.

 

Leave a Reply

ಹೊಸ ಪೋಸ್ಟ್‌