ವಿಜಯಪುರ: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಆರ್.ಅಂಬೇಡ್ಕರ್ ಅವರು 1939ರಲ್ಲಿ ವಿಜಯಪುರ ನಗರಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಸುಮಾರು ರೂ. 1.90 ಕೋ. ಅನುದಾನದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಸ್ಮಾರಕ ನಿರ್ಮಾಣಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಸಮಾಜದ ಮುಖಂಡ ರಮೇಶ ಆಸಂಗಿ, ಆನಂದ ಔದಿ, ಅಭಿಷೇಕ ಚಕ್ರವರ್ತಿ, ನಾಗರಾಜ ಲಂಬು, ಸಿದ್ದು ರಾಯಣ್ಣವರ, ಸುನೀಲ ಉಕ್ಕಲಿ, ಅಡಿವೆಪ್ಪ ಸಾಲಗಲ, ವಿನಾಯಕ ಗುಣಸಾಗರ, ಮುಂತಾದವರು ಉಪಸ್ಥಿತರಿದ್ದರು.