ಬೆಂಗಳೂರಿನಲ್ಲಿ 48ನೇ ದಿನ ಪೂರೈಸಿದ ಪಂಚಮಸಾಲಿ ಮೀಸಲಾತಿ ಹೋರಾಟ- ಶ್ರೀಗಳನ್ನು ಭೇಟಿ ಬೆಂಬಲ ಸೂಚಿಸಿದ ಸಿ. ಎಸ್. ನಾಡಗೌಡ
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟ 48ನೇ ದಿನ ಪೂರೈಸಿದೆ. ಈ ಮಧ್ಯೆ, ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೋಂಡ ಮಾಜಿ ಸಚಿವ ಸಿ. ಎಸ್. ನಾಡಗೌಡ ಶ್ರೀಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೇ, ಶ್ರೀಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಂಚಸೇನೆಯ ರಾಜ್ಯಧ್ಯಕ್ಷ ಬಸನಗೌಡ ಪಾಟೀಲ(ನಾಗರಾಳ ಹುಲಿ), ರುದ್ರಗೌಡ ಅಂಗಡಗೇರಿ, ಸುರೇಶಗೌಡ […]
ಶಿಕ್ಷಣ ಕ್ಷೇತ್ರಕ್ಕೆ ಎಂ. ಎಸ್. ಖೇಡ ಅವರ ಕೊಡುಗೆ ಅಪಾರ- ಶಾಸಕ ಯಶವಂತರಾಯಗೌಡ ವಿ. ಪಾಟೀಲ
ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಶಿಕ್ಷಣ ಕ್ಶೇತ್ರಕ್ಕೆ ದಿ. ಮಲ್ಲಿಕಾರ್ಜುನ ಖೇಡ ಅವರ ಕೊಡುಗೆ ಅಪಾರ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೇಳಿದ್ದಾರೆ. ಇಂಡಿ ತಾಲೂಕಿನ ತಡವಲಗಾದಲ್ಲಿ ವಿನಾಯಕ ಪೂರ್ವ ಪ್ರಾಥಮಿಕ ಹಾಗೂ ಮಾತೋಶ್ರಿ ಶಾಂತಾಬಾಯಿ ಖೇಡ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಅಂಗವಿಕಲರಾಗಿದ್ದರೂ ಎಂ. ಎಸ್. ಖೇಡ ಅವರು ಈ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಅದನ್ನು ಹೆಮ್ಮರವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಶಿಕ್ಷಣ ಪ್ರೇಮ ಇತರರಿಗೂ […]
ಕರ್ನಾಟಕದ ಏಳು ಅದ್ಭುತಗಳಲ್ಲಿ ವಿಜಯಪುರದ ಗೋಳಗುಮ್ಮಟವೂ ಒಂದು- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಕರ್ನಾಟಕದ ಏಳು ಅದ್ಭುತಗಳಲ್ಲಿ ಐತಿಹಾಸಿಕ ವಿಜಯಪುರದ ಐತಿಹಾಸಿಕ ಗಗೋಳಗುಮ್ಮಟವೂ ಒಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಉದ್ಘೋಷಿಸಲಾಯಿತು. ಇದೇ ವೇಳೆ, ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಪ್ರಮಾಣಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಕರ್ನಾಟಕದ ಏಳು ಅದ್ಭುತಗಳು ಎಂದು ಘೋಷಿಸಿದರು. ಈ […]
ಮಾ. 4ರಂದು ವಿದ್ಯುನ್ಮಾನ ಮತಯಂತ್ರಗಳ ತರಬೇತಿ- ಅಧಿಕಾರಿಗಳು ಕಡ್ಡಾಯವಾಗಿ ತರಬೇತಿ ಹಾಜರಾಗುವಂತೆ ಡಿಸಿ ಸೂಚನೆ
ವಿಜಯಪುರ: ಮುಂಬರುವ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸುಗಮವಾಗಿ ನಡೆಸಲುವ ನಿಟ್ಟಿನಲ್ಲಿ ನಾನಾ ಚುನಾವಣ ಕರ್ತವ್ಯಗಳಿಗೆ ನೇಮಿಸಿದ ತಂಡಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಚುನಾವಣೆ ವಿಷಯಗಳು, ಮಾದರಿ ನೀತಿ ಸಂಹಿತೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ ನಿರ್ವಹನೆ ಕುರಿತು ಮಾ.4 ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ತರಬೇತಿ ಆಯೋಜಿಸಲಾಗಿದೆ. ಅಂದು ಬೆ. 10 ರಿಂದ ಮ. 1ರ ವರೆಗೆ ಹಾಗೂ ಮಧ್ಯಾಹ್ನ 2.15ರಿಂದ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಗೆ ಅತಿ ಮಹತ್ವದ್ದಾಗಿದ್ದು, ಎಲ್ಲ ಮತ ಕ್ಷೇತ್ರಗಳ ಚುನಾವಣಾಧಿಕಾರಿಗಳು, […]