ಪಂಚಮಸಾಲಿ ಹೋರಾಟ: ಮೀಸಲಾತಿಗೆ ಆಗ್ರಹಿಸಿ ಬೆಂಗಳೂರು, ವಿಜಯಪುರ ಸೇರಿ ನಾನಾ ಕಡೆ ರಸ್ತೆ ತಡೆ

ವಿಜಯಪುರ: 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಹೋರಾಟ 50 ದಿನ ಪೂರೈಸಿದ್ದು, ರಾಜ್ಯದ ನಾನಾ ಕಡೆ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಹೆದ್ದಾರಿ ತಡೆ ಬೆಂಗಳೂರಿನಲ್ಲಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರು- ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಯಿತು.  ಸಮಾಜದ ಮುಖಂಡರೊಂದಿಗೆ ರಸ್ತೆಯಲ್ಲಿಯೇ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಡಿಕೆ ಈಡೇರಿಸುವಂತ ಆಗ್ರಹಿಸಿದರು. ವಿಜಯಪುರದಲ್ಲಿಯೂ ಪ್ರತಿಭಟನೆ ಇತ್ತ […]

ಮಾಡಾಳು ವಿರುಪಾಕ್ಷಪ್ಪ ಪಕ್ಕಾ ಬಿ.ಎಸ್. ಮನುಷ್ಯ- ಯಡಿಯೂರಪ್ಪರನ್ನು ಅಂಜಿಸಲು ಲೋಕಾಯುಕ್ತ ಧಾಳಿ ನಡೆದಿರಬಹುದು- ಎಂ ಬಿ ಪಾಟೀಲ

ವಿಜಯಪುರ: ಮಾಡಾಳು ವಿರುಪಾಕ್ಷಪ್ಪ ಪಕ್ಕಾ ಬಿ. ಎಸ್. ಯಡಿಯೂರಪ್ಪನವರ ಮನುಷ್ಯ.  ಯಡಿಯೂರಪ್ಪ ಅವರನ್ನು ಅಂಜಿಸಿ ದಬಾಯಿಸಲು ಈ ರೇಡ್ ಮಾಡಿರುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೀವೇನಾದರೂ ಅಲುಗಾಡಿದರೆ ಇದು ಸ್ಯಾಂಪಲ್ ಎಂಬುದನ್ನು ತೋರಿಸಲು ಈ ರೀತಿ ಸಿಗ್ನಲ್ ಕೊಡುವ ಪ್ರಯತ್ನ ಇದಾಗಿರಬಹುದು.  ಹಾಗೆ ನೋಡಿದರೆ ಬಹಳ ಜನರ ಮೇಲೆ ಲೋಕಾಯುಕ್ತ ಧಾಳಿ ನಡೆಸಬೇಕಿತ್ತು ಎಂದು ಹೇಳಿದರು. ಭ್ರಷ್ಟಾಚಾರ […]

ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಟಿಕೆಟ್ ನೀಡಲು ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಲಿ- ಸಂಸದ ಪ್ರತಾಪ್ ಸಿಂಹ

ವಿಜಯಪುರ: ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಬೇಕು ಎಂದು ಮೈಸೂರ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಜನರಿಗೆ ಹೆಚ್ಚಿಗೆ ಟಿಕೆಟ್ ನೀಡಬೇಕು ಎಂದು ಮಾಧ್ಯಮದವರೂ ಗಟ್ಟಿ ಧ್ವನಿ ಹೊರಡಿಸಬೇಕು.  ದಿಂದ ಗಟ್ಟಿಯಾದ ಧ್ವನಿ ಹೊರಡಿಸಿ ಎಂದು ಹೇಳಿದರು. ನಾನು ಯುವಕರ ಪರವಾಗಿ ಇದ್ದೇನೆ.  ಹೆಚ್ಚಿನ ಯುವಕರಿಗೆ ಸಿಗಬೇಕು.  ಯಾವ ಪಕ್ಷವಾದರೂ ಸರಿ.  ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರತಾಪ್ ಸಿಂಹ ಹೇಳಿದರು. ಕಾಂಗ್ರೆಸ್ […]

ನೀರು ಕೊಟ್ಟವರ ಉಪಕಾರ ಸ್ಮರಿಸದಿದ್ದರೆ ಅಮೋಘಸಿದ್ಧ ದೇವರು ಮೆಚ್ಚಲ್ಲ- ಎಂ. ಬಿ. ಪಾಟೀಲ

ವಿಜಯಪುರ: ನೀರು ಕೊಟ್ಟವರ ಉಪಕಾರ ಸ್ಮರಿಸದಿದ್ದರೆ ಅಮೋಘಸಿದ್ಧ ದೇವರು ಮೆಚ್ಚಲಾರ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ತಿಕೋಟಾ ತಾಲೂಕಿನ ಅರಕೇರಿ ಗ್ರಾಮದಲ್ಲಿ ನಡೆದ ಬೂತ ಮಟ್ಟದಲ್ಲಿ ಮತದಾರರಿಗೆ ಬಿಜೆಪಿ ವೈಪಲ್ಯಗಳು, ಕಾಂಗ್ರೆಸ್ ಸಾಧನೆಗಳು ಮತ್ತು ಭರವಸೆಗಳ ಕುರಿತು ಅರಿವು ಹಾಗೂ ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವರ ಆಶೀರ್ವಾದದಿಂದ ಏತನೀರಾವರಿ ಯೋಜನೆ ರೂಪಿಸಿ ಅಮೋಘಸಿದ್ಧನ ಪಾದಗಳಿಗೆ ನೀರು ಸ್ಪರ್ಷಿಸುವಂತೆ ಮಾಡಿದ್ದೇನೆ.  ಎಲ್ಲ ಭಾರವನ್ನೂ […]

ಎಂ. ಬಿ. ಪಾಟೀಲರ ಮನವಿಗೆ ಸ್ಪಂದಿಸಿ ಹೋರಾಟ ಕೈಬಿಟ್ಟ ಹೊಕ್ಕುಂಡಿ ರೈತರು

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಿ ಹಿನ್ನೆಲೆಯಲ್ಲಿ ಬಬಲೇಶ್ವರ ತಾಲೂಕಿನ ಹೊಕ್ಕುಂಡಿಯಲ್ಲಿ ರೈತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ಹೊಕ್ಕುಂಡಿ ಮತ್ತು ತಿಗಣಿ ಬಿದರಿ ಭಾಗದಲ್ಲಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಅಲ್ಲಿನ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.  ಈ ವಿಷಯ ತಿಳಿದ ಎಂ. ಬಿ. ಪಾಟೀಲರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ರೈತರ ಅಹವಾಲು ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್ ಬಬಲೇಶ್ವರ […]

ರಾಜಕೀಯ ಪಕ್ಷಗಳು ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ತಮ್ಮ ನಿಲುವ ಸ್ಪಷ್ಟಪಡಿಸಲಿ- ಸಂಗಮೇಶ ಬಬಲೇಶ್ವರ

ಬೆಂಗಳೂರು: ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದ ಬಗ್ಗೆ ತಮ್ಮ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಎರಡು ವರ್ಷಗಳಇಂದ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ನಿರಂತರವಾಗಿ ಹೋರಾಟ ಮಾಡುತ್ತಿದೆ.  ಕೂಡಲ ಸಂಗಮದಿಂದ ಬೆಂಗಳೂರು ಅರಮನೆ ಮೈದಾನದವರೆಗೆ ಪಾದಯಾತ್ರೆ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಿದೆ.  ಪ್ರತಿ ಬಾರಿ ಮುಖ್ಯಮಂತ್ರಿಗಳು ಕೊಟ್ಟ ಸುಳ್ಳಿನ […]