ರಾಜಕೀಯ ಪಕ್ಷಗಳು ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ತಮ್ಮ ನಿಲುವ ಸ್ಪಷ್ಟಪಡಿಸಲಿ- ಸಂಗಮೇಶ ಬಬಲೇಶ್ವರ

ಬೆಂಗಳೂರು: ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದ ಬಗ್ಗೆ ತಮ್ಮ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಎರಡು ವರ್ಷಗಳಇಂದ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ನಿರಂತರವಾಗಿ ಹೋರಾಟ ಮಾಡುತ್ತಿದೆ.  ಕೂಡಲ ಸಂಗಮದಿಂದ ಬೆಂಗಳೂರು ಅರಮನೆ ಮೈದಾನದವರೆಗೆ ಪಾದಯಾತ್ರೆ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಿದೆ.  ಪ್ರತಿ ಬಾರಿ ಮುಖ್ಯಮಂತ್ರಿಗಳು ಕೊಟ್ಟ ಸುಳ್ಳಿನ ಭರವಸೆಗಳನ್ನ ನಂಬಿ ಕೊನೆಗೆ ನಂಬಿಕೆಗೆ ದ್ರೋಹ ಬಗೆದ ಅವರ ನಿಲುವಿನಿಂದಾಗಿ ಈಗ ಮತ್ತೆ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ನಡೆಯುತ್ತಿದೆ.  ಈ ಹೋರಾಟದ ಕುರಿತು ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ ಆಗಲಿ ಇನ್ನೀತರ ರಾಜಕೀಯ ಪಕ್ಷಗಳಾಗಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎನ್ನುವುದು ನಮ್ಮ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಶಯವಾಗಿದೆ.  ಇದು ಸಮುದಾಯದ ನಿಲುವೂ ಆಗಿದೆ ಎಂದು ಅವರು ಹೇಳಿದರು.

ಜಗದ್ಗುರುಗಳ ಹೋರಾಟ ಪುನಾರಂಭವಾಗಿ 49 ದಿನಗಳು ಕಳೆಯುತ್ತಿದ್ದರೂ ಹಲವರ ದಿವ್ಯ ಮೌನ ನಮಗೆ ಭ್ರಮ ನಿರಸನವನ್ನುಂಟು ಮಾಡಿದೆ ಎಂದು ಜಗದ್ಗುರುಗಳು ನಾನು ಫ್ರೀಡಂ ಪಾರ್ಕ್ ನಲ್ಲಿ ಭೇಟಿಯಾಗಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡುವ ಮುಂಚೆ ನನ್ನ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನಾನು ರಾಜಕೀಯವಾಗಿ ಒಂದು ಪಕ್ಷದಲ್ಲಿರಬಹುದು.  ಜಗದ್ಗುರುಗಳ ಭಾವನೆಯನ್ನು ನಾನು ನೇರವಾಗಿ ಪ್ರಚಾರ ಸಮಿತಿ ಅಧ್ಯಕ್ಷರು ನಮ್ಮ ಕ್ಷೇತ್ರದ ಶಾಸಕರಾಗಿರುವ ಎಂ. ಬಿ. ಪಾಟೀಲರ ಗಮನಕ್ಕೂ ತಂದಿದ್ದೇನೆ.  ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ, ಡಾ. ಜಿ. ಪರಮೇಶ್ವರ್ ಹಾಗೂ ತಾವು ಕೂಡಿ ಪ್ರಣಾಳಿಕೆಯಲ್ಲಿ ನಮ್ಮ ಸಮುದಾಯದ ನ್ಯಾಯಯುತ ಬೇಡಿಕೆಗೆ ತಾವು ಸ್ಪಂದಿಸಲು ಸಾಧ್ಯವೇ? ಎನ್ನುವುದನ್ನು ಚರ್ಚಿಸಿ ಪಕ್ಷದ ನಿಲ್ಲುವಣ್ಣ ಬಹಿರಂಗವಾಗಿ ಹೇಳಬೇಕೆನ್ನುವುದು ನಮ್ಮ ಸಮುದಾಯದ ಆಶಯವಾಗಿದೆ ಎನ್ನುವುದನ್ನು ಅವರಿಗೆ ತಿಳಿಸಿದ್ದೇನೆ.  6ನೇ ತಾರೀಖಿನೊಳಗೆ ಶ್ರೀಗಳನ್ನು ಭೇಟಿಯಾಗುವುದಾಗಿ ಅವರು ಹೇಳಿದ್ದಾರೆ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.

ನೀತಿ ಸಂಹಿತೆ ಜಾರಿಯಾಗುವ ಮೊದಲು ರಾಜಕೀಯ ಪಕ್ಷಗಳ ಪ್ರಮುಖರು ತಮ್ಮ ನಿರ್ಧಾರ ಪ್ರಕಟಿಸಲಿ ನಂತರ ವಾಸ್ತವ ಅಂಶವನ್ನು ರಾಜ್ಯದ ಜನರ ಮುಂದೆ ತೆರೆದಿಡುವ ಪ್ರಯತ್ನ ಮಾಡುತ್ತೇನೆ ಎಂದು ಸಂಗಮೇಶ್ ಬಬಲೇಶ್ವರ ಹೇಳಿದ್ದಾರೆ.

ನಮ್ಮ ಸಮುದಾಯದಲ್ಲಿ ಯಾವ ಗೊಂದಲಗಳು ಇಲ್ಲ. ಸಮುದಾಯದ ಕೆಲವು ಮೀರ ಸಾಧಕಗಳನ್ನು ಬಳಸಿಕೊಂಡು ಮುಖ್ಯಮಂತ್ರಿಯ ಆಟ ಆಡಿದರು. ಅವರ ದಾಳಕ್ಕೆ ಬಿಜೆಪಿ ಪಕ್ಷದವರು ಕಾಂಗ್ರೆಸ್ ನಲ್ಲಿರುವವರು ಯಾರಾರು ಹೇಗೆ ಬಲಿಯಾದರು ಎನ್ನುವುದನ್ನು ನಾನು ಬಹಿರಂಗಪಡಿಸುತ್ತೇನೆ.  ಜಗದ್ಗುರುಗಳು ಕೂಡ ಮೀರ ಸಾಧಕರಿಂದ ಸ್ವಾರ್ಥಿಗಳಿಂದ ಸಮಾಜದ ವೇದಿಕೆಯ ದುರುಪಯೋಗ ಮಾಡಿಕೊಂಡು ನಿಸ್ವಾರ್ಥದ ಮುಖವಾಡ ಧರಿಸಿ ಸ್ವಾರ್ಥ ಸಾಧಿಸುವವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಫ್ರೀಡಂ ಪಾರ್ಕನ ವೇದಿಕೆ ಮೇಲೆಯೇ ಜಗದ್ಗುರುಗಳನ್ನು ಕೂಡ ಆಗ್ರಹಿಸಿದ್ದೇನೆ.  ಒಟ್ಟಾರೆ ನಮ್ಮ ಹೋರಾಟ ವ್ಯರ್ಥವಾಗಬಾರದು, ವ್ಯರ್ಥವಾಗಲು ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ. ಶಿವಾನಂದ ಪಟ್ಟಣಶೆಟ್ಟಿ, ಹನುಮಂತ ಚಿಂಚಲಿ, ರವಿ ಖಾನಾಪುರ, ಕೊಟ್ರೇಶ, ಮಲ್ಲಿಕಾರ್ಜುನ ಬಿರಾದಾರ, ಶರಣ ಹಾಗೂ ನಾನಾ ಜಿಲ್ಲೆಗಳಿಂದ ಆಗಮಿಸಿದ ಹೋರಾಟಗಾರರು ಉಪಸ್ಥಿತರಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌